Site icon Vistara News

Karnataka Live News : ನ.17ಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದ ವಿಜಯೇಂದ್ರ; ವಿಪಕ್ಷ ನಾಯಕ ಯಾರು?

Live Blog Vistara at November 15
Prabhakar R

ಮುರುಘಾ ಶರಣರ ಬಿಡುಗಡೆಗೆ ಕೂಡಿ ಬರದ ಕಾಲ

ಜೈಲು ಸಮಯ ಮೀರಿದ ಕಾರಣ ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾ ಶರಣರಿಗೆ ಬುಧವಾರ ಬಿಡುಗಡೆ ಭಾಗ್ಯ ಲಭಿಸಲಿಲ್ಲ. ವಕೀಲರು ಕೋರ್ಟ್ ಆದೇಶ ತರುವಲ್ಲಿ ತಡ ಮಾಡಿದ ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳ ಬಿಡುಗಡೆ ಗುರುವಾರಕ್ಕೆ ಮುಂದೂಡಿಕೆಯಾಗಿದೆ. ಇದರಿಂದ ಜೈಲು ಹೊರಗೆ ಕಾಯುತ್ತಿದ್ದ ಭಕ್ತರಿಗೆ ನಿರಾಸೆಯಾಗುವಂತಾಯಿತು.

Murugha Seer: ಮುರುಘಾ ಶರಣರ ಬಿಡುಗಡೆಗೆ ಕೂಡಿ ಬರದ ಕಾಲ
Adarsha Anche

Opposition leader : ನ.17ಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದ ವಿಜಯೇಂದ್ರ; ವಿಪಕ್ಷ ನಾಯಕ ಯಾರು?

ನ. 17ರಂದು ಖಾಸಗಿ ಹೋಟೆಲ್‌ನಲ್ಲಿ ಸಂಜೆ 6 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ನಿಗದಿ ಮಾಡಲಾಗಿದೆ. ಈ ಸಂಬಂಧ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಪತ್ರ ಬರೆದಿರುವ ಬಿ.ವೈ. ವಿಜಯೇಂದ್ರ ಕಡ್ಡಾಯವಾಗಿ ಸಭೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

Opposition leader : ನ.17ಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದ ವಿಜಯೇಂದ್ರ; ವಿಪಕ್ಷ ನಾಯಕ ಯಾರು?
Adarsha Anche

HD Kumaraswamy : ಎಚ್‌.ಡಿ. ಕುಮಾರಸ್ವಾಮಿ ಮಾತು ನಂಬಲು ನಾನು ದಡ್ಡನೇ?: ಡಿ.ಕೆ. ಶಿವಕುಮಾರ್

ಮೈತ್ರಿ ಶಾಸಕರು ನನ್ನನ್ನು ಸಿಎಂ ಮಾಡಿ ಅಂದಾಗ ಎಚ್‌.ಡಿ. ಕುಮಾರಸ್ವಾಮಿ ಹೂ ಅನ್ನಲಿಲ್ಲ, ಅವರ ಮಾತು ನಂಬಲು ನಾನೇನೂ ದಡ್ಡನೇ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.

http://vistaranews.com/politics/am-i-stupid-to-believe-hd-kumaraswamy-ask-dk-shivakumar/507290.html

Prabhakar R

ವಿರೋಧದ ನಡುವೆ ಕೆಇಎ ಪರೀಕ್ಷೆಗೆ ಹಿಜಾಬ್‌ ಓಕೆ ಎಂದ ಸರ್ಕಾರ

ವಿರೋಧದ ನಡುವೆ ಕೆಇಎ ಪರೀಕ್ಷೆಗೆ ಹಿಜಾಬ್‌ ಧರಿಸಿ ಆಗಮಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಕೆಇಎ ಪರೀಕ್ಷೆಗೆ ಹಿಜಾಬ್‌ ನಿಷೇಧವಿಲ್ಲ, ಕಾಲುಂಗುರ ಹಾಗೂ ಮಾಂಗಲ್ಯ ಧರಿಸಿ ಮಹಿಳಾ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) (KEA Exam) ತಿಳಿಸಿದೆ. ಕೆಇಎ ವಸ್ತ್ರ ಸಂಹಿತೆ ಪ್ರಕಾರ ಪರೀಕ್ಷಾ ಕೇಂದ್ರಕ್ಕೆ ಹಿಜಾಬ್‌ ಧರಿಸಿ ಆಗಮಿಸುವಂತಿಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು. ಹೀಗಾಗಿ ಕೆಇಎ ಸ್ಪಷ್ಟನೆ ನೀಡಿದೆ.

http://vistaranews.com/job/kea-exam-candidates-can-wear-hijab-mangalsutra-and-toering/507256.html

Adarsha Anche

Karnataka Politics : ಕಾಂಗ್ರೆಸ್‌ ಸೇರಿದ ಜೆಡಿಎಸ್‌ನ ಇಬ್ಬರು ಮಾಜಿ ಶಾಸಕರು; ಕೋಮುವಾದಿ ಜನತಾ ದಳವೆಂದ ಸಿಎಂ

ಜೆಡಿಎಸ್‌ ನಾಯಕರೂ, ಮಾಜಿ ಶಾಸಕರಾದ ಗೌರಿ ಶಂಕರ್ ಮತ್ತು ಮಂಜುನಾಥ್ ಬುಧವಾರ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ. ಕಳೆದ ವಿಧಾನ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಸಾದ್ ಗೌಡ ಕೂಡ ಸೇರ್ಪಡೆಗೊಂಡಿದ್ದಾರೆ.

http://vistaranews.com/politics/karnataka-politics-two-former-jds-mlas-join-congress-cm-siddaramaiah-calls-communal-janata-dal/507232.html

Exit mobile version