Site icon Vistara News

Karnataka Live News : ರಾಜ್ಯದಲ್ಲಿನ ಪ್ರಮುಖ ಬೆಳವಣಿಗೆಗಳ ಲೇಟೆಸ್ಟ್ ಮಾಹಿತಿ ; ತಲೆಮರೆಸಿಕೊಂಡಿದ್ದ ಅಭಿನವ ಹಾಲಶ್ರೀ ಬಂಧನ

Karnataka live news
Deepa S

ನಾಳೆ ಬೆಂಗಳೂರು ಸೇರಿ ಕರಾವಳಿಯಲ್ಲಿ ಗಾಳಿ ಸಹಿತ ಮಳೆ

ಮುಂದಿನ 24 ಗಂಟೆಯಲ್ಲಿ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ (Weather report) ಮಳೆಯಾಗಲಿದೆ.

Weather report : ನಾಳೆ ಬೆಂಗಳೂರು ಸೇರಿ ಕರಾವಳಿಯಲ್ಲಿ ಗಾಳಿ ಸಹಿತ ಮಳೆ
Deepa S

ಮತ್ತೆ ಬದಲಾಗುತ್ತಾ ಶಾಲಾ ಸಮಯ

ಬೆಂಗಳೂರಿನ ಶಾಲೆಗಳ ಸಮಯ ಬದಲಾವಣೆ (School Timing) ಮಾಡುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಸಂಚಾರ ದಟ್ಟಣೆಯನ್ನು (Bengaluru Traffic ) ತಗ್ಗಿಸುವ ನಿಟ್ಟಿನಲ್ಲಿ ಶಾಲಾ ಅವಧಿಯಲ್ಲಿ ಬದಲಾವಣೆ ಮಾಡಲು ಶಿಕ್ಷಣ ಇಲಾಖೆಯಲ್ಲಿ ಚರ್ಚೆ ನಡೆದಿದೆ. ಆದರೆ ಶಾಲಾ ಸಮಯ ಬದಲಾವಣೆಗೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

School Timing : ಮತ್ತೆ ಬದಲಾಗುತ್ತಾ ಶಾಲಾ ಸಮಯ!
Deepa S

ಡಿಸಿ ಸಾಹೇಬರೇ.. ನಮಗೊಂದು ವೈನ್‌ ಶಾಪ್‌ ಕೊಡಿ! ಇದು ಕುಡುಕರ ಬೇಡಿಕೆ

ಕೊಪ್ಪಳದ ಜಿಲ್ಲಾಡಳಿತ ಭವನದ ಎದುರಿಗೆ ಇಂದು ತಂಡೋಪತಂಡವಾಗಿ ಬಂದಿದ್ದರು. ಅಲ್ಲಿದ್ದ ಸಿಬ್ಬಂದಿ ಗ್ರಾಮದಲ್ಲಿ ನೀರಿನ ಸಮಸ್ಯೆನೋ, ರಸ್ತೆ ಸಮಸ್ಯೆ ಅಥವಾ ಬೇರೆನೋ ಸಮಸ್ಯೆ ಇರಬಹುದು ಎಂದು ಅಂದಾಜಿಸಿದ್ದರು. ಆದರೆ ಸಿಬ್ಬಂದಿ ಹತ್ತಿರಕ್ಕೆ ಹೋದಾಗಲೇ ತಿಳಿದಿದ್ದು, ಕುಡುಕರು ಒಗ್ಗಟಾಗಿ ಸೇರಿ ಬಾರ್‌ ಬೇಕೆಂದು (Liquor shop) ಬೇಡಿಕೆ ಇಟ್ಟಿದ್ದಾರೆ ಎಂದು.

Liquor shop : ಡಿಸಿ ಸಾಹೇಬರೇ.. ನಮಗೊಂದು ವೈನ್‌ ಶಾಪ್‌ ಕೊಡಿ! ಇದು ಕುಡುಕರ ಬೇಡಿಕೆ
Deepa S

ಪ್ರತ್ಯೇಕ ಕಡೆ ಅಪಘಾತ; ಪಲ್ಟಿ ಹೊಡೆದ ಲಾರಿ, ಕಾರು

ಪ್ರತ್ಯೇಕ ಕಡೆ ಚಾಲಕರ ನಿಯಂತ್ರಣ ತಪ್ಪಿ ಓಮಿನಿ ಹಾಗೂ ಲಾರಿ ಪಲ್ಟಿಯಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ.

Road Accident : ಪ್ರತ್ಯೇಕ ಕಡೆ ಅಪಘಾತ; ಪಲ್ಟಿ ಹೊಡೆದ ಲಾರಿ, ಕಾರು
Deepa S

ಸೆ. 22, 24ಕ್ಕೆ ಸಂಚಾರ ಬದಲಿಸಿ; ಇದು ಗಣಪನ ಎಫೆಕ್ಟ್‌

ಗಣಪತಿ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನಾ ಕಾರ್ಯಕ್ರಮ (Ganesh Chaturthi) ಇರುವುದರಿಂದ ಬೆಂಗಳೂರಿನ ಕೆಲವು ಕಡೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸೆ. 22 ರಂದು ಕೆ.ಜಿ.ಹಳ್ಳಿ ಮತ್ತು ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣಪತಿ ಮೂರ್ತಿಗಳ ಮೆರವಣಿಗೆ ಜತೆಗೆ ಹಲಸೂರು ಕೆರೆಯಲ್ಲಿ ವಿಸರ್ಜನಾ ಕಾರ್ಯಕ್ರಮ ಇರಲಿದೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರದ ಹಿತದೃಷ್ಟಿಯಿಂದ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಸಂಚಾರ ನಿರ್ಬಂಧ ಹೇರಲಾಗಿದೆ.

Ganesh Chaturthi : ಸೆ. 22, 24ಕ್ಕೆ ಸಂಚಾರ ಬದಲಿಸಿ; ಇದು ಗಣಪನ ಎಫೆಕ್ಟ್‌
Exit mobile version