ಬೆಂಗಳೂರು: ಎಸಿಬಿಯಲ್ಲಿರುವ ಕಡತಗಳು ಹಾಗೂ ಪ್ರಕರಣಗಳನ್ನು ಕೂಡಲೇ ಲೋಕಾಯುಕ್ತಕ್ಕೆ (Karnataka Lokayukta) ಹಸ್ತಾಂತರ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಪತ್ರ ಬರೆದಿದ್ದಾರೆ.
ಎಸಿಬಿ ಅಸ್ತಿತ್ವವನ್ನು ರದ್ದುಪಡಿಸಿದ್ದ ಹೈಕೋರ್ಟ್ ಹಾಲಿ ಪ್ರಕರಣಗಳು, ಕಡತಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಎಸಿಬಿಯಲ್ಲಿರುವ ಎಲ್ಲ ಕಡತಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿ ಎಂದು ಲೋಕಾಯುಕ್ತರು ಪತ್ರ ಬರೆದಿದ್ದಾರೆ.
ಎಸಿಬಿಯಲ್ಲಿ ಹಾಲಿ 2149 ಪ್ರಕರಣಗಳಿವೆ. ಹೈಕೋರ್ಟ್ ಆದೇಶದ ಬಳಿಕ ಈ ಎಲ್ಲ ಪ್ರಕರಣಗಳು ನನೆಗುದಿಗೆ ಬಿದ್ದಿದ್ದವು. ಹೀಗಾಗಿ ಕೂಡಲೇ ಎಲ್ಲ ಕೇಸ್‌ಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ | ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದ ಲೋಕಾಯುಕ್ತ ಮತ್ತೆ ಫಾರ್ಮ್‌ಗೆ ಬರಲಿ: ಆಪ್ ಬಯಕೆ