Site icon Vistara News

NEET Exam : ನೀಟ್ ಅಭ್ಯರ್ಥಿಗಳಿಗೊಂದು ಸೂಚನೆ; ರೌಂಡ್ 1 ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ

NEET 2024

NEET 2024: Govt sets panel to re-examine results of over 1,500 students awarded grace marks, says NTA

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ನೀಟ್ ಪಿಜಿ ಮತ್ತು ನೀಟ್ ಎಂಡಿಎಸ್ 2023 ರ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿಯನ್ನು ಆಗಸ್ಟ್ 20 ರಂದು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು cetonline.karnataka.gov.in ಅಧಿಕೃತ ವೆಬ್​ಸೈಟ್​​ನಲ್ಲಿ ರೌಂಡ್ 1 ಸೀಟು ಹಂಚಿಕೆ ವೇಳಾಪಟ್ಟಿಯನ್ನು ಪರಿಶೀಲಿಸಬಹುದು.

ಅಭ್ಯರ್ಥಿಗಳು ದಿನಾಂಕ 22-08-2023ರಂದು ಬೆಳಿಗ್ಗೆ 11 ಗಂಟೆಯಿಂದ 25-8-2023 ರಂದು ಬೆಳಿಗ್ಗೆ 11 ಗಂಟೆಯವರೆಗೆ ತಮ್ಮ ಆದ್ಯತೆಯ ಆಯ್ಕೆಗಳನ್ನು ಮಾಡಿಕೊಳ್ಳಬಹುದು ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ

ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕ ರಚನೆಯನ್ನು ಆಗಸ್ಟ್ 21 ರಂದು ಸಂಜೆ 7 ಗಂಟೆಗೆ ಬಿಡುಗಡೆ ಮಾಡಲಾಗುವುದು. ಆಯ್ಕೆ ಪ್ರವೇಶ ಪ್ರಕ್ರಿಯೆಯು ಆಗಸ್ಟ್ 22 ರಿಂದ ಆಗಸ್ಟ್ 25 ರವರೆಗೆ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ. ತಾತ್ಕಾಲಿಕ ಅಣಕು ಹಂಚಿಕೆ ಫಲಿತಾಂಶವನ್ನು ಆಗಸ್ಟ್ 25 ರಂದು ರಾತ್ರಿ 8 ಗಂಟೆಯ ನಂತರ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ಆಗಸ್ಟ್ 25 ರಿಂದ ಆಗಸ್ಟ್ 28 ರವರೆಗೆ ಬೆಳಿಗ್ಗೆ 11 ರೊಳಗೆ ಆಯ್ಕೆಗಳನ್ನು ಪರಿಶೀಲಿಸಬಹುದು.

ನೀಟ್ ಪಿಜಿ ರೌಂಡ್ 1 ಸೀಟು ಹಂಚಿಕೆ ಫಲಿತಾಂಶವನ್ನು ಆಗಸ್ಟ್ 28 ರಂದು ರಾತ್ರಿ 8 ಗಂಟೆಯ ನಂತರ ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿಗಳು ಕರ್ನಾಟಕ ನೀಟ್ ಪಿಜಿ ರೌಂಡ್ 1 ಸೀಟು ಹಂಚಿಕೆ ವೇಳಾಪಟ್ಟಿಯನ್ನು ಪರಿಕ್ಷಿಸಲು ಇಲ್ಲಿ ಕ್ಲಿಕ್​ ಮಾಡಿ.

Exit mobile version