ರಾಜ್ಯದಲ್ಲಿ ನಡೆಯುವ ರಾಜಕೀಯ, ಅಪರಾಧ ಮತ್ತಿತರ ಎಲ್ಲ ಘಟನಾವಳಿಗಳ ಕ್ಷಣಕ್ಷಣದ ಸುದ್ದಿಗಳಿಗಾಗಿ ಈ ಲಿಂಕ್ ಫಾಲೋ ಮಾಡಿ.
ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ಹಾರಿದ ವೀಕ್ಷಕರು: ತಡವಾಗಲಿದೆ ರಾಜ್ಯ ಅಧ್ಯಕ್ಷರ ಘೋಷಣೆ
ವಿಧಾನಸಭೆ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರನ್ನು ಮತ್ತು ರಾಜ್ಯ ಬಿಜೆಪಿ (BJP Karnataka) ಅಧ್ಯಕ್ಷರನ್ನು ಆಯ್ಕೆ ಮಾಡುವ ಸಂಬಂಧ ಕೇಂದ್ರದಿಂದ ಕಳಿಸಲಾಗಿದ್ದ ಮನಸುಖ್ ಮಂಡಾವಿಯಾ ಹಾಗೂ ವಿನೋದ್ ತಾವ್ಡೇ ಅವರ ವೀಕ್ಷಕರ ತಂಡ ಅಭಿಪ್ರಾಯ ಸಂಗ್ರಹಣೆ ಮಾಡಿದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಅರ್ಧ ದಿನ ಉಳಿದಿದ್ದ ಇಬ್ಬರೂ, ಬಿಜೆಪಿಯ ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಅನೇಕ ಶಾಸಕರ ಅಭಿಪ್ರಾಯ ಸಂಗ್ರಹಿಸಿತು.
BJP Karnataka: ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ಹಾರಿದ ವೀಕ್ಷಕರು: ತಡವಾಗಲಿದೆ ರಾಜ್ಯ ಅಧ್ಯಕ್ಷರ ಘೋಷಣೆ
ಸಂತೂರ್ ಅರ್ಧದಷ್ಟೂ ಮಾರಾಟವಾಗದ ಮೈಸೂರು ಸ್ಯಾಂಡಲ್!: ಸೋಪ್‌ಗೆ ಮರುಜೀವ ನೀಡಲು ನೀವೂ ಐಡಿಯಾ ಕೊಡಿ
ಉತ್ಕೃಷ್ಣ ಗುಣಮಟ್ಟಕ್ಕೆ ಹೆಸರಾಗಿರುವ ಮೈಸೂರು ಸ್ಯಾಂಡಲ್ (Mysore Sandal) ಸೋಪ್ ಇದೀಗ ತನ್ನ ಘಮವನ್ನು ಕಳೆದುಕೊಳ್ಳುವತ್ತ ಸಾಗಿದೆ. ಕರ್ನಾಟಕ ರಾಜ್ಯದ ಅಧಿಕೃತ ಬ್ರ್ಯಾಂಡ್ ಎಂಬ ಹೆಸರಿದ್ದರೂ ಮಾರಾಟ ಹಾಗೂ ಜನರ ಬಳಕೆಯ ದೃಷ್ಟಿಯಲ್ಲಿ ತೀರಾ ಹಿಂದುಳಿದಿದೆ. ಇದಕ್ಕೆ ಮರುಜೀವ ನೀಡಬಹುದೇ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಪ್ರಯತ್ನಿಸುತ್ತಿದ್ದು, ಸಾರ್ವಜನಿಕರು ಹಾಗೂ ತಜ್ಞರ ಸಲಹೆ ಕೇಳಿದ್ದಾರೆ.
Mysore Sandal: ಸಂತೂರ್ ಅರ್ಧದಷ್ಟೂ ಮಾರಾಟವಾಗದ ಮೈಸೂರು ಸ್ಯಾಂಡಲ್!: ಸೋಪ್‌ಗೆ ಮರುಜೀವ ನೀಡಲು ನೀವೂ ಐಡಿಯಾ ಕೊಡಿ
ನಿಲುವಳಿಗೆ ʼಮೊಂಡಾಟʼ ಮಾಡಿದ ಬಿಜೆಪಿ: ಇಂತಹ ಸಂಪ್ರದಾಯವೇ ಇಲ್ಲ ಎಂದ ಸಿಎಂ
ರಾಜ್ಯ ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳನ್ನು ಸೂಕ್ತ ಅನುಷ್ಠಾನ ಮಾಡುತ್ತಿಲ್ಲ ಹಾಗೂ ಈ ಯೋಜನೆಗಳ ನಂತರ ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಬಿಜೆಪಿ ನಿಲುವಳಿ ಸೂಚನೆ ಮಂಡನೆಗೆ ವಿಧಾನಸಭೆಯಲ್ಲಿ (Assembly Session) ಮಂಗಳವಾರ ಮುಂದಾಗಿದ್ದು ಗದ್ದಲಕ್ಕೆ ಕಾರಣವಾಯಿತು.
Assembly Session: ನಿಲುವಳಿಗೆ ʼಮೊಂಡಾಟʼ ಮಾಡಿದ ಬಿಜೆಪಿ: ಇಂತಹ ಸಂಪ್ರದಾಯವೇ ಇಲ್ಲ ಎಂದ ಸಿಎಂ
ಸಿಎಂ ಕಚೇರಿ ವಿರುದ್ಧ HDK ಆರೋಪದಿಂದ, ಬಿಟ್ ಕಾಯಿನ್ ಫೈಲ್ ಪುನಃ ತೆರೆದ ಸರ್ಕಾರದವರೆಗಿನ ಪ್ರಮುಖ ಸುದ್ದಿಗಳಿವು
ಮೋದಿ ಮನೆ ಮೇಲೆ ಡ್ರೋಣ್ ಹಾರಾಡಿದ್ದು ಆತಂಕ ಮೂಡಿಸಿದೆ, ಮಹಾರಾಷ್ಟ್ರದಲ್ಲಿ ಮತ್ತೆ ಯೂಟರ್ನ್ ಪಾಲಿಟಿಕ್ಸ್ ನಡೆದಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳು Vistara TOP 10 NEWS ನಲ್ಲಿ
Vistara Top 10 News: ಸಿಎಂ ಕಚೇರಿ ವಿರುದ್ಧ HDK ಆರೋಪದಿಂದ, ಬಿಟ್ ಕಾಯಿನ್ ಫೈಲ್ ಪುನಃ ತೆರೆದ ಸರ್ಕಾರದವರೆಗಿನ ಪ್ರಮುಖ ಸುದ್ದಿಗಳಿವು
ಕುರಿ ಮಂದೆಗೆ ಡಿಕ್ಕಿ ಹೊಡೆದ ಲಾರಿ
ವಿಜಯನಗರದ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಕುರಿ ಮಂದೆಯ ಮೇಲೆ ಲಾರಿ (Road Accident) ಹರಿದಿದೆ. ಸುಮಾರು 40ಕ್ಕೂ ಅಧಿಕ ಕುರಿಗಳು ಮೃತಪಟ್ಟಿರುವ ಘಟನೆ ನಡೆದಿದೆ. ಶಿವಪುರದ ಬಾಲಪ್ಪ ಎಂಬ ರೈತರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.
Lorry Accident : ಕುರಿ ಮಂದೆಗೆ ಡಿಕ್ಕಿ ಹೊಡೆದ ಲಾರಿ; ಸ್ಥಳದಲ್ಲೇ 40 ಕುರಿಗಳ ದಾರುಣ ಸಾವು