Site icon Vistara News

Karnataka Politics : ಕಾಂಗ್ರೆಸ್‌ ಮೋದಿ ಸಾವಿನ ಜಪ ಮಾಡ್ತಿದೆ ಎನ್ನುವುದು ದೊಡ್ಡ ಸುಳ್ಳು, ಹಾಗೆ ಹೇಳಿದವರ ಹೆಸರು ಹೇಳಿ: ಸಿದ್ದು ಸವಾಲು

Modi Bommai

#image_title

ಬೆಳಗಾವಿ: ʻʻಕಾಂಗ್ರೆಸ್‌ ನನ್ನ ಸಾವಿಗಾಗಿ ಜಪ ಮಾಡುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಶುದ್ಧ ಸುಳ್ಳುʼʼ ಎಂದು ಕಾಂಗ್ರೆಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Karnataka Politics) ಹೇಳಿದ್ದಾರೆ. ʻʻಯಾರಾದರೂ ಆ ರೀತಿಯಾಗಿ ಹೇಳಿಕೆ ನೀಡಿದ್ದಾರಾ? ಹೇಳಿದವರ ಹೆಸರು ಹೇಳಿ ನೋಡೋಣʼʼ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ʻʻಕಾಂಗ್ರೆಸ್‌ ತನ್ನ ಸಾವಿನ ಜಪ ಮಾಡುತ್ತಿದೆ ಎಂದು ಅವರೇ ಸೃಷ್ಟಿ ಮಾಡಿಕೊಂಡು ಹೇಳುತ್ತಿದ್ದಾರೆ. ಇದು ನರೇಂದ್ರ ಮೋದಿಯವರ ಮತ್ತೊಂದು ಸುಳ್ಳುʼʼ ಎಂದು ಹೇಳಿದ ಸಿದ್ದರಾಮಯ್ಯ, ʻʻಮುಗಿಸಿ ಬಿಡಿ ಸಿದ್ದರಾಮಯ್ಯರನ್ನು ಅಂತ ಅಶ್ವತ್ಥ್ ನಾರಾಯಣ ಹೇಳಿದ್ರು. ಆ ತರಹ ಮೋದಿಯವರಿಗೆ ಯಾರಾದರೂ ಹೇಳಿದ್ದಾರಾ?ʼʼ ಎಂದು ಕೇಳಿದರು.

ʻʻಮೋದಿಯವರು ಪಾಪ ಬದುಕಿರಲಿ, ಅವರ ಆರೋಗ್ಯ ಚೆನ್ನಾಗಿರಲಿʼʼ ಎಂದ ಸಿದ್ದರಾಮಯ್ಯ, ಮೋದಿ ಅವರು ಜನರ ಕೆಲಸ ಮಾಡಿಲ್ಲ ಅಂತಷ್ಟೇ ನಾವು ಹೇಳಿದ್ದು, ಅವರು ಸುಳ್ಳು ಹೇಳ್ತಾರೆ, ನೀಡಿದ ಭರವಸೆ ಈಡೇರಿಸಿಲ್ಲ ಅಂತಾ ಅಷ್ಟೇ ಹೇಳಿದ್ದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ.

ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವ ಹಗಲುಕನಸು ಕಾಣುತ್ತಿದೆ ಎಂಬ ಬಿಎಸ್‌ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʻʻಪಾಪ ಯಡಿಯೂರಪ್ಪ ಈಗ ಒಳಗಡೆ ಕುದೀತಾ ಇದ್ದಾರೆ. ಹೀಗಾಗಿ ನೀವು ಅದರ ಹೇಳಿದ್ದಕ್ಕೆ ವಿರುದ್ಧವಾಗಿ ತಿಳಿದುಕೊಳ್ಳಬೇಕು. ಅವರನ್ನು ತಗೆದು ಹಾಕಿದ್ದಾರಲ್ಲ, ಬಿಜೆಪಿ ಸೋತ್ರೆ ಸಾಕು ಅಂತಿದ್ದಾರೆʼʼ ಎಂದರು ಸಿದ್ದರಾಮಯ್ಯ.

ʻʻಸಿದ್ದರಾಮಯ್ಯ, ಡಿಕೆಶಿಗೆ ಮಾತನಾಡಲು ಬರಲ್ಲʼ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಮಹಾ ಪೆದ್ದ, ಅವನ ಹೇಳಿಕೆಗೆ ಏನಾದರೂ ಅರ್ಥ ಇದೆಯಾ ಎಂದು ಕೇಳಿದರು.

ಬಿಜೆಪಿ ನಾಯಕರು ಕೂಡಾ ಬಸ್ ಯಾತ್ರೆ ಸ್ಟಾರ್ಟ್ ಮಾಡುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಏನೇ ಯಾತ್ರೆ ಮಾಡಿದರೂ ಜನ ತೀರ್ಮಾನ ಮಾಡಿ ಬಿಟ್ಟಿದ್ದಾರೆ. ಕಾಂಗ್ರೆಸ್ ಪರ ಗಾಳಿ ಬೀಸೋಕೆ ಶುರುವಾಗಿದೆ. ಬರೀ ಗಾಲಿಯಲ್ಲ, ಬಿರುಗಾಳಿಯೇ ಶುರುವಾಗುತ್ತಿದೆ. ಈ ಬಿರುಗಾಳಿಯ ಎದುರು ಅವರು ಹಾರಿ ಹೋಗಿಬಿಡುತ್ತಾರೆ ಎಂದ ಅವರು, ಇವರು ಯಾವ ಯಾತ್ರೆ ಮಾಡಿದರೂ ಜನ ನಂಬಲ್ಲ ಎಂದರು.

ʻʻನಾನು ಅಭಿವೃದ್ಧಿ ಮೇಲೆ ಚರ್ಚೆ ಮಾಡೋಣ ಅಂತಾ ಹೇಳಿದ್ದೇನೆ. 600 ಭರವಸೆ ಕೊಟ್ಟಿದ್ದರಲ್ಲಿ ಎಷ್ಟು ಭರವಸೆ ಈಡೇರಿಸಿದ್ದಾರೆ. ಎಷ್ಟು ಕಾರ್ಯಕ್ರಮ ಕೊಟ್ಟಿದ್ದಾರೆ ಅದರ ಬಗ್ಗೆ ಚರ್ಚೆ ಮಾಡೋಣ. ನರೇಂದ್ರ ಮೋದಿ ಏನು ಭರವಸೆ ಕೊಟ್ಟಿದ್ರು ಅದರ ಬಗ್ಗೆ ಚರ್ಚೆ ಮಾಡೋಣ. ಬೆಲೆ ಏರಿಕೆ, ಭ್ರಷ್ಟಾಚಾರ, ರೈತರು, ಯುವಕರ, ಮಹಿಳೆಯರು, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮಾತನಾಡೋಣ ಎಂದು ಹೇಳಿದರು ಸಿದ್ದರಾಮಯ್ಯ.

ಇದನ್ನೂ ಓದಿ : Prajadwani Yatra: ವಿಧಾನಸೌಧದೊಳಗೆ ಎಲ್ಲ ಮಂತ್ರಿಗಳು ಲಂಚದ ಬೋರ್ಡ್ ಹಾಕಿಕೊಂಡಿದ್ದಾರೆ: ಸಿದ್ದರಾಮಯ್ಯ

Exit mobile version