Site icon Vistara News

Karnataka Politics | ಕಾಂಗ್ರೆಸ್ ಮೊದಲ ಅಧಿವೇಶನದ ರಾಜ್ಯದ ಪ್ರತಿನಿಧಿ ಬಳ್ಳಾರಿಯವರು!

venkat rao bellary ಕಾಂಗ್ರೆಸ್‌

ಶಶಿಧರ ಮೇಟಿ, ಬಳ್ಳಾರಿ
ದೇಶವನ್ನು ಸುದೀರ್ಘ ಕಾಲ ಆಳ್ವಿಕೆ ಮಾಡಿದ ಪಕ್ಷ ಕಾಂಗ್ರೆಸ್. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ ಪಕ್ಷವು ಹೌದು. ಪಕ್ಷಕ್ಕೆ ಇಂದಿಗೆ ೧೩೭ ವಸಂತವನ್ನು ಪೂರೈಸಿ ೧೩೮ನೇ ವಸಂತಕ್ಕೆ ಕಾಲಿಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪ್ರಬಲ ಪಕ್ಷವಾಗಿದೆ. ಇಂತಹ ಪ್ರಬಲ ಪಕ್ಷವಾದ ಕಾಂಗ್ರೆಸ್‌ನ ಪ್ರಥಮ ಅಧಿವೇಶನದ ರಾಜ್ಯದ (Karnataka Politics) ಪ್ರತಿನಿಧಿಯಾಗಿದ್ದವರು ಬಳ್ಳಾರಿಯವರು!

ರಾಜ್ಯದ ಕಾಂಗ್ರೆಸ್‌ನ ಮೂಲಪುರುಷ ವೆಂಕಟರಾವ್
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ೧೮೮೫ರಲ್ಲಿ ಡಿ.೨೮ರಂದು ಉದಯವಾಯಿತು. ಈ ಪಕ್ಷದ ಪ್ರಥಮ ಅಧಿವೇಶನದಲ್ಲಿ ಮುಂಬೈನಲ್ಲಿ ನಡೆಯಿತು. ಈ ಭಾಗದ ಈಗಿನ ಕರ್ನಾಟಕ ಪ್ರತಿನಿಧಿಯಾಗಿ ಬಳ್ಳಾರಿ ಅಂದಿನ ಪ್ಲೀಡರ್ ಕೋಲಾಚಲಂ ವೆಂಕಟರಾವ್ ಕಾಂಗ್ರೆಸ್ ಪ್ರಥಮ ಅಧಿವೇಶನದಲ್ಲಿ ಭಾಗವಹಿಸಿದ್ದರು.

ರಾಜ್ಯದ ಪ್ರತಿನಿಧಿಯಾಗಿದ್ದು ರೋಚಕ ಸಂಗತಿ
ಕೋಲಾಚಲಂ ಅವರು ಅಂದಿನ ಕಾಲದಲ್ಲಿಯೇ ಎಸ್ಎಸ್ಎಲ್‌ಸಿ ಮುಗಿಸಿ ಉನ್ನತ ವ್ಯಾಸಂಗದೊಂದಿಗೆ ಪ್ಲೀಡರ್ ಎಕ್ಸಾಮ್ ಬರೆದಿದ್ದರು. ಬಳ್ಳಾರಿಯ ಕೇಸ್‌ ಒಂದನ್ನು ವಾದ ಮಾಡಲು ಮದ್ರಾಸ್ ಹೈಕೋರ್ಟ್‌ಗೆ ಹೋಗಿದ್ದರು. ಅಲ್ಲಿ ವಾದ ಮಾಡಲು ಕೋಲಾಚಲಂ ವೆಂಕಟರಾವ್ ಅವರನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿನ ನ್ಯಾಯಾಲಯದಲ್ಲಿ ವಾದ ಮಾಡುತ್ತಿರುವಾಗ ಇವರ ಪ್ರತಿಭೆಯನ್ನು ಕಾಂಗ್ರೆಸ್ ಪಕ್ಷದ ಸ್ಥಾಪಕ ಹ್ಯೂಮ್ ಗಮನಿಸಿದರು. ಕಾಂಗ್ರೆಸ್‌ನ ಕಾರ್ಯದರ್ಶಿ ಡಬ್ಲ್ಯು,ಸಿ. ಬ್ಯಾನರ್ಜಿ ಅವರು ನೀವೇ ಕಾಂಗ್ರೆಸ್ ಪ್ರತಿನಿಧಿಯಾಗಿ ಭಾಗವಹಿಸಲು ಆಹ್ವಾನಕೊಟ್ಟರಂತೆ. ಈ ವಿಚಾರವನ್ನು ಕೋಲಾಚಲಂ ಕುಟುಂಬದ ಮರಿಮೊಮ್ಮಗ ಅನಂತ ಪ್ರಕಾಶ್ ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡರು.

venkat rao bellary ಕಾಂಗ್ರೆಸ್‌

ಹಲವು ಸೇವೆಯಲ್ಲಿ ಸೈ ಎಂದ ವೆಂಕಟರಾವ್
೧೯೦೨ರಲ್ಲಿ ಲಂಡನ್‌ನ ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ ನಡೆದ ಕಿಂಗ್ ಎಡ್ವರ್ಡ್ VIIರ ಪಟ್ಟಾಭಿಷೇಕ ಸಮಾರಂಭದಲ್ಲಿ ಅತಿಥಿಗಳಲ್ಲಿ ಒಬ್ಬರಾಗಿದ್ದರು. ೧೯೦೩-೧೯೦೨ರಲ್ಲಿ ಬಳ್ಳಾರಿಯಲ್ಲಿ ಪ್ಲೇಗ್ ಬಂದ ಸಂದರ್ಭದಲ್ಲಿ ಕೋಲಾಚಲಂ ವೆಂಕಟರಾವ್ ಅವರು ಬಳ್ಳಾರಿ ಪುರಸಭೆಯ ಅಧ್ಯಕ್ಷರಾಗಿ, ದಿಟ್ಟವಾಗಿ ಕೆಲಸ ಮಾಡಿದರು. ೧೯೦೩-೧೯೦೪ರ ಅವಧಿಯಲ್ಲಿ ಮದ್ರಾಸ್ ಲೆಜಿಸ್ಲೇಟಿವ್ ಕೌನ್ಸಿಲ್‌ನ ಸದಸ್ಯರಾಗಿದ್ದರು.

ವಿಧವಾ ವಿವಾಹ ಮತ್ತು ಸ್ತ್ರೀ ಶಿಕ್ಷಣಕ್ಕೆ ಆದ್ಯತೆ
ಕೋಲಾಚಲಂ ವೆಂಕಟರಾವ್ ಅವರು ಅಂದು ವಿಧವಾ ವಿವಾಹ ಮತ್ತು ಸ್ತ್ರೀ ಶಿಕ್ಷಣವನ್ನು ಪ್ರತಿಪಾದಿಸಿದರು. ಅದನ್ನು ಕಾರ್ಯರೂಪಕ್ಕೆ ತಂದರು. ಬ್ರಿಟಿಷರು ಅವರಿಗೆ ರೈಟ್ ಅನರಬಲ್ ಎಂಬ ಬಿರುದು ನೀಡಿದ್ದರು. ಲಂಡನ್‌ನಲ್ಲಿರುವ ಐಎನ್‌ಸಿಯು ಬ್ರಿಟಿಷ್ ಸಮಿತಿ ಮತ್ತು ಬನಾರಸ್‌ನ ಸೆಂಟ್ರಲ್ ಹಿಂದು ಕಾಲೇಜಿನ ಪೋಷಕರಾಗಿದ್ದರು.

ಕೇವಲ‌ ಅಧಿಕಾರಕ್ಕಾಗಿಯೇ ಪಕ್ಷದ ವರಿಷ್ಡರನ್ನು ಒಲಿಸಿಕೊಳ್ಳಲು ಗಮನ ಹರಿಸುವ ರಾಜ್ಯದ ನಾಯಕರು ರಾಜ್ಯದಲ್ಲಿ ಕಾಂಗ್ರೆಸ್ ಮೊದಲ ಪ್ರತಿನಿಧಿಯಾಗಿದ್ದ ಇವರನ್ನು ಸ್ಮರಿಸುವುದು ಆದ್ಯ ಕರ್ತವ್ಯವಾಗಿದೆ.

ನಮ್ಮ ಮುತ್ತಜ್ಜರಾದ ಕೋಲಾಚಲಂ ವೆಂಕಟರಾವ್ ಅವರು 1885ರಲ್ಲಿ ಮುಂಬೈಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಮೊದಲ ಅಧಿವೇಶನದಲ್ಲಿ ಅಂದಿನ ಭಾಗದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ನಂತರದಲ್ಲಿ ವಿಧವಾ ವಿವಾಹ ಮತ್ತು ಸ್ತ್ರೀಶಿಕ್ಷಣದ ಬಗ್ಗೆ ಸಾಮಾಜಿಕ ಕಳಕಳಿ ಮೂಡಿಸಿದ್ದರು.
| ಅನಂತಪ್ರಕಾಶ್, ಕೋಲಾಚಲಂ ವೆಂಕಟರಾವ್ ಅವರ ಮರಿಮೊಮ್ಮಗ, ನ್ಯಾಯವಾದಿ

Exit mobile version