Site icon Vistara News

Karnataka Elections | ಚುನಾವಣಾ ತಂತ್ರಗಾರಿಕೆ ಶುರು: ಡಿ. 12ರಂದು ದಿಲ್ಲಿಗೆ ಬರುವಂತೆ ಕೈ ನಾಯಕರಿಗೆ ಹೈ ಬುಲಾವ್‌

Congress team

ಬೆಂಗಳೂರು: ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಚುನಾವಣೆಯ ಬಳಿಕ ಕಾಂಗ್ರೆಸ್‌ನ ವರಿಷ್ಠರ ಗಮನ ಕರ್ನಾಟಕದ ಕಡೆಗೆ ಹರಿದಿದೆ. ಗುಜರಾತ್‌ನಲ್ಲಿನ ಹೀನಾಯ ಸೋಲು ಮತ್ತು ಹಿಮಾಚಲ ಪ್ರದೇಶದಲ್ಲಿ ಕಂಡ ಅದ್ಭುತ ಗೆಲುವಿನ ಸಂದೇಶಗಳನ್ನು ಇಟ್ಟುಕೊಂಡು ಕರ್ನಾಟಕದ ರಣತಂತ್ರ (Karnataka Elections) ಹೆಣೆಯುವ ಉದ್ದೇಶದಿಂದ ಮಹತ್ವದ ಸಭೆಯೊಂದನ್ನು ದಿಲ್ಲಿಯಲ್ಲಿ ಆಯೋಜಿಸಲಾಗಿದೆ.

ಡಿಸೆಂಬರ್‌ ೧2ರಂದು (ಸೋಮವಾರ) ಕಾಂಗ್ರೆಸ್‌ ಹೈಕಮಾಂಡ್‌ ಚುನಾವಣಾ ತಂತ್ರಗಾರಿಕೆಗೆ ಸಂಬಂಧಿಸಿದ ಸಭೆಯೊಂದನ್ನು ಆಯೋಜಿಸಿದ್ದು, ಇದರಲ್ಲಿ ಭಾಗವಹಿಸುವಂತೆ ರಾಜ್ಯದ ಕಾಂಗ್ರೆಸ್‌ ನಾಯಕರಿಗೆ ದಿಢೀರ್‌ ಆಹ್ವಾನ ನೀಡಿದೆ.

ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯದ ಕಾಂಗ್ರೆಸ್‌ ಮುಖಂಡರು ದಿಲ್ಲಿಗೆ ತೆರಳಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್, ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹಮ್ಮದ್, ಈಶ್ವರ್ ಖಂಡ್ರೆ, ರಾಮಲಿಂಗಾ ರೆಡ್ಡಿ, ಧ್ರುವ ನಾರಾಯಣ್ ಅವರಿಗೆ ದಿಲ್ಲಿಗೆ ಬರುವಂತೆ ಆಹ್ವಾನವಿದೆ.

ಹೈಕಮಾಂಡ್‌ ಚುನಾವಣಾ ರಣತಂತ್ರ ಕುರಿತು ರಾಜ್ಯ ನಾಯಕರ ಜೊತೆ ಮಹತ್ವದ ಮಾತುಕತೆ ನಡೆಸಲಿದೆ. ಜತೆಗೆ ಅಭ್ಯರ್ಥಿಗಳ ಆಯ್ಕೆ, ಬಸ್ ಯಾತ್ರೆ, ಪಕ್ಷ ಸಂಘಟನೆ ಸೇರಿದಂತೆ ಹಲವು ಮಹತ್ವದ ವಿಚಾರಗಳು ಚರ್ಚೆಗೆ ಬರುವ ನಿರೀಕ್ಷೆ ಇದೆ.

ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಅವರು ಭಾಗವಹಿಸಲಿರುವ ಕಾರ್ಯತಂತ್ರ ಸಭೆಯಲ್ಲಿ ಹಿಮಾಚಲ ಪ್ರದೇಶ ಚುನಾವಣೆಯ ಗೆಲುವಿನ ರೂವಾರಿ ಪ್ರಿಯಾಂಕಾ ವಾಧ್ರಾ ಅವರು ಭಾಗವಹಿಸುತ್ತಾರಾ ಎನ್ನುವ ಕುತೂಹಲವಿದೆ.

ಇದನ್ನೂ ಓದಿ | Karnataka Elections | ಹತ್ತಕ್ಕೂ ಅಧಿಕ ಕಾಂಗ್ರೆಸ್‌ ಶಾಸಕರು ಬಿಜೆಪಿ ಸಂಪರ್ಕದಲ್ಲಿ? ಅಶೋಕ್‌ ಹೇಳಿದ್ದೇನು?

Exit mobile version