ಕಲಬುರಗಿ: ʻʻನಾನೂ ಬೇರೆಯವರ ಥರ ಕೈಕಾಲು ಹಿಡಿದಿದ್ದರೆ ಕರ್ನಾಟಕ ಸಿಎಂ ಆಗಿಬಿಡ್ತಿದ್ದೆʼʼ ಎಂದು ಹೇಳಿದ್ದಾರೆ ವಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.
ಕಲಬುರಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ದತ್ತಾತ್ರೆ ಪಾಟೀಲ್ ರೇವೂರ್ ಹುಟ್ಟು ಹಬ್ಬದ ಕಾರ್ಯಕ್ರಮದ ವೇಳೆ ಆಯೋಜಿಸಿದ್ದ ಶಿವಪಾರ್ವತಿ ಕಲ್ಯಾಣೋತ್ಸವದಲ್ಲಿ ಮಾತನಾಡಿದ ಅವರು, ಮತ್ತೆ ಸಿಎಂ ಹುದ್ದೆ ಬಗ್ಗೆ ಹೇಳಿಕೆ ನೀಡಿದ್ದಾರೆ.
ಕಲಬುರಗಿಯ ಶ್ರೀ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ʻʻನಾನು ಯಾವುದೇ ಆಸೆ ಪಟ್ಟಿಲ್ಲ, ಬರೋದಿತ್ತು ಅಂದ್ರೆ ಯಾರಿಂದಲೂ ತಪ್ಪಿಸಲು ಸಾದ್ಯವಿಲ್ಲʼʼ ಎಂದರು.
ನಾನು ಮುಖ್ಯಮಂತ್ರಿ ಆಗೋನೇ ಅಂತ ಆಗಾಗ ಹೇಳುವ ಯತ್ನಾಳ್ ಅವರಿಗೆ ಮಂತ್ರಿಗಿರಿ ಸಿಗದಿರುವ ಬಗ್ಗೆಯೂ ಬೇಸರವಿದೆ. ಕೇಂದ್ರದ ನಾಯಕರು, ಆರೆಸ್ಸೆಸ್ ಜತೆ ತುಂಬ ಸ್ನೇಹ ಹೊಂದಿರುವ ಯತ್ನಾಳ್ ಅವರು ಸಿಡಿಗುಂಡಿನಂತೆ ಮಾತನಾಡುತ್ತಾ ಸದಾ ಕಾಲ ಗಮನ ಸೆಳೆಯುತ್ತಾರೆ. ಈಗ ಬೇರೆಯವರ ಥರ ಕೈಕಾಲು ಹಿಡಿದು.. ಎಂಬ ಪದ ಬಳಕೆ ಮಾಡಿದ್ದು ಯಾರ ಬಗ್ಗೆ ಅನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.
ಮುಖ್ಯಮಂತ್ರಿ ಹುದ್ದೆ ಬರುವುದಿದ್ದರೆ ಬಂದೇ ಬರುತ್ತದೆ ಎಂದು ಹೇಳಿದ ಯತ್ನಾಳ್ ಅವರು, ಮುಂದಿನ ದಿನದಲ್ಲಿ ದತ್ತಾತ್ರೆ ಪಟೀಲ್ ರೇವೂರ್ ಅವರನ್ನು ಗೆಲ್ಲಿಸಿ ಮಂತ್ರಿ ಮಾಡಿ ಎಂದು ಹೇಳಿಕೊಂಡರು.
ಅದೇ ವೇಳೆ, ʻʻನಾನು ಏನೂ ಆಗಲಿಲ್ಲ ಅಂದರೂ ಪರವಾಗಿಲ್ಲ, ಮತ್ತೊಬ್ಬರನ್ನು ನೋಡಿ ಸಂತೋಷ ಪಡುವ ವ್ಯಕ್ತಿ ನಾನುʼʼ ಎಂದು ಹೇಳಿದರು ಯತ್ನಾಳ್
ಇದನ್ನೂ ಓದಿ : B.S. Yediyurappa: ಜನ ಬಿಡಲ್ಲ, ಮತ್ತೆ ಚುನಾವಣೆಗೆ ನಿಲ್ತೀನಿ ಅಂದ್ರ ಯಡಿಯೂರಪ್ಪ?: ವಿಧಾನಸಭೆಯಲ್ಲಿ ಯತ್ನಾಳ್ ಹೇಳಿದ್ದೇನು?