Site icon Vistara News

Karnataka Public School | ಹನಿಮೂನ್ ಹೇಗಿರುತ್ತೆ ಎಂದು ವಿದ್ಯಾರ್ಥಿನಿಗೆ ಪ್ರಶ್ನೆ ಮಾಡಿದ ಶಿಕ್ಷಕ; ಪೋಷಕರ ಕಿಡಿ

ಕೋಲಾರ: ಇಲ್ಲಿನ ನರಸಾಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ (Karnataka Public School) ಶಿಕ್ಷಕನೊಬ್ಬ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದೆ. 10ನೇ ತರಗತಿ ವಿದ್ಯಾರ್ಥಿನಿ ಜತೆಗೆ ಶಿಕ್ಷಕನ ಅನುಚಿತ ವರ್ತನೆಗೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಕನ್ನಡ ಶಿಕ್ಷಕನಾಗಿರುವ ಪ್ರಕಾಶ್‌ ಎಂಬಾತ 10ನೇ ತರಗತಿಯ ವಿದ್ಯಾರ್ಥಿನಿಗೆ ಹನಿಮೂನ್ ಹೇಗಿರುತ್ತೆ ಎಂದು ಪ್ರಶ್ನೆ ಮಾಡಿದ್ದಾನೆ. ಜತೆಗೆ ಇತರ ವಿದ್ಯಾರ್ಥಿನಿಯರ ಮೈ ಮುಟ್ಟಿ ಮಾತನಾಡುವುದು, ಅಶ್ಲೀಲವಾಗಿ ವರ್ತಿಸುವುದನ್ನು ಆಗಾಗ ಮಾಡುತ್ತಿರುತ್ತಾನೆ ಎಂಬ ಆರೋಪ ಕೇಳಿಬಂದಿದೆ.

ಶಿಕ್ಷಕ ಪ್ರಕಾಶ್ ವಿರುದ್ಧ ವಿದ್ಯಾರ್ಥಿನಿಯ ಕಡೆಯ ಪೋಷಕರು ದೂರು ನೀಡಿದ್ದಾರೆ. ಹೀಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಣ್ಣಯ್ಯ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ. ಈ ಹಿಂದೆ ಕೆಲಸ ಮಾಡಿದ ಶಾಲೆಯಲ್ಲಿ ವಿದ್ಯಾರ್ಥಿನಿಯರ ಜತೆಗೆ ಅನುಚಿತ ವರ್ತನೆಯ ಕಾರಣಕ್ಕೆ ಈತನನ್ನು ಅಮಾನತು ಮಾಡಲಾಗಿತ್ತು. ಶಿಕ್ಷಕ ಪ್ರಕಾಶ್ ವರ್ತನೆಗೆ ಭಾರಿ ಆಕ್ರೋಶ ಕೇಳಿ ಬಂದಿದ್ದು, ಕೂಡಲೇ ಸೇವೆಯಿಂದ ಅಮಾನತು ಮಾಡುವಂತೆ ಪೋಷಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ | Road Accident | ನಿಂತಿದ್ದ ಕಂಟೇನರ್‌ಗೆ ಮಾರುತಿ ಸ್ವಿಫ್ಟ್ ಡಿಸೈರ್ ಕಾರು ಡಿಕ್ಕಿ; ಸಿಂದಗಿ ಸಿಪಿಐ, ಪತ್ನಿ ದುರ್ಮರಣ

Exit mobile version