ಬೆಂಗಳೂರು: ರಾಜ್ಯದ ಜನತೆ ಹಾಗೂ ಮುಖ್ಯವಾಗಿ ಬೆಂಗಳೂರಿನ ಜನ ಮುಂದಿನೆರಡು ದಿನಗಳಲ್ಲಿ ಅಲರ್ಟ್ ಆಗಿರಬೇಕಿದೆ. ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ (Karnataka Rain) ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಿನ್ನೆ ರಾಜ್ಯದ ಹಲವೆಡೆ ಗಾಳಿ ಸಹಿತ ಭಾರೀ ಮಳೆ ಸುರಿದಿದು ಅನಾಹುತ ಸೃಷ್ಟಿಸಿದೆ. ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಭಾರೀ ಪ್ರಮಾಣದ ನಷ್ಟವುಂಟಾಗಿದೆ. ರಾಜ್ಯದ ಅನೇಕ ಕಡೆ ಸಿಡಿಲು ಹಾಗೂ ವಿದ್ಯುತ್ ಆಘಾತದಿಂದ 7 ಮಂದಿ ಮೃತಪಟ್ಟಿದ್ದಾರೆ. ಭೀಕರ ಮಳೆಯ ಪರಿಣಾಮ ಕಾರು, ಬೈಕ್‌ಗಳು ನೀರಿನಲ್ಲಿ ಮುಳುಗಡೆಯಾಗಿವೆ. ಇನ್‌ಫೋಸಿಸ್ ಉದ್ಯೋಗಿ ಯುವತಿಯೊಬ್ಬರು ಬೆಂಗಳೂರಿನ ಅಂಡರ್‌ಪಾಸ್‌ನಲ್ಲಿ ಮಳೆನೀರಿಗೆ (Bangalore Rain) ಬಲಿಯಾಗಿದ್ದಾರೆ.
ಇಂದು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮಳೆ ಮುಂದುವರಿಯಲಿದ್ದು, ಮುಂದಿನ ಎರಡು ದಿನಗಳವರೆಗೂ ಮಳೆಯಾಗುವ ಸಾಧ್ಯತೆಯಿದೆ. ರಾಜಧಾನಿಯ ಇಳಿಜಾರು ಪ್ರದೇಶ, ತಗ್ಗುಪ್ರದೇಶ, ರಾಜಕಾಲುವೆ ಪಕ್ಕದ ಜನರು ಹುಶಾರಾಗಿರಬೇಕು ಎಂದು ಎಚ್ಚರಿಕೆ ನೀಡಲಾಗಿದೆ.
ಇಂದಿನ ಗರಿಷ್ಠ- ಕನಿಷ್ಠ ತಾಪಮಾನ
ಬೆಂಗಳೂರು: 32- 21 ಡಿಗ್ರಿ ಸೆಲ್ಸಿಯಸ್
ಮಂಗಳೂರು: 33-27
ಶಿವಮೊಗ್ಗ: 37-23
ಬೆಳಗಾವಿ: 36-22
ಮೈಸೂರು: 34-23
ಮಂಡ್ಯ: 34-23
ಮಡಿಕೇರಿ: 28-19
ರಾಮನಗರ: 34-22
ಹಾಸನ: 33-21
ಚಾಮರಾಜನಗರ: 33-23
ಚಿಕ್ಕಬಳ್ಳಾಪುರ: 34-22
ಕೋಲಾರ: 34-23
ತುಮಕೂರು: 34-22
ಉಡುಪಿ: 34-27
ಕಾರವಾರ: 34-28
ಚಿಕ್ಕಮಗಳೂರು: 32-21
ದಾವಣಗೆರೆ: 38-23
ಹುಬ್ಬಳ್ಳಿ: 38-23
ಚಿತ್ರದುರ್ಗ: 37-23
ಹಾವೇರಿ: 38-24
ಬಳ್ಳಾರಿ: 39-26
ಗದಗ: 38-24
ಕೊಪ್ಪಳ: 39-26
ರಾಯಚೂರು: 40-27
ಯಾದಗಿರಿ: 41-28
ವಿಜಯಪುರ: 39-27
ಬೀದರ್: 38-27
ಕಲಬುರಗಿ: 41-28
ಬಾಗಲಕೋಟೆ: 40-26
ಇದನ್ನೂ ಓದಿ: Karnataka Rain: ಸಿಡಿಲು ಬಡಿದು ಚಿತ್ರದುರ್ಗದಲ್ಲಿ ಮಹಿಳೆ ಸಾವು, 5ಕ್ಕೆ ಏರಿದ ಮಳೆ ಸಾವಿನ ಸಂಖ್ಯೆ