Site icon Vistara News

Karnataka Road : ರಸ್ತೆ ಅವ್ಯವಹಾರಕ್ಕೆ ಬೀಳುತ್ತೆ ಬ್ರೇಕ್; ಗುಣಮಟ್ಟ, ನಕಲಿ ಬಿಲ್‌‌ ದೂರಿಗೆ ಸಿದ್ಧವಾಗಿದೆ ಆ್ಯಪ್‌!

Karnataka Road complaint app and vidhanasoudha

ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ (PWD) ಕೆಲವು ಮಹತ್ವದ ಬದಲಾವಣೆಯನ್ನು ತರಲು ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಮುಂದಾಗಿದ್ದಾರೆ. ಕರ್ನಾಟಕದ ರಸ್ತೆಗಳ (Karnataka Road) ಬಗ್ಗೆ ದೂರುಗಳ ಮಹಾಪೂರವೇ ಬರುತ್ತಿರುತ್ತವೆ. ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ತಲತಲಾಂತರದ ಸಮಸ್ಯೆಯಾಗಿದೆ. ಇತ್ತ ರಸ್ತೆ ನಿರ್ಮಾಣವಾಗುತ್ತಿದ್ದಂತೆ ಅತ್ತ ಕಿತ್ತುಕೊಂಡು ಹೋಗಿರುತ್ತದೆ. ಈ ಮೂಲಕ ಜನರ ಕೋಟ್ಯಂತರ ರೂಪಾಯಿ ರಸ್ತೆಯಲ್ಲಿ ಹೋಮ ಮಾಡಿದಂತೆ ಆಗುತ್ತದೆ. ಅಲ್ಲದೆ, ಇದರಲ್ಲಿ ಸಾಕಷ್ಟು ಅವ್ಯವಹಾರಗಳೂ ನಡೆಯುತ್ತವೆ. ರಸ್ತೆಯನ್ನೇ ಮಾಡದೆ ನಕಲಿ ಬಿಲ್‌ (Fake bill) ಸೃಷ್ಟಿಸಿ ದುಡ್ಡು ಹೊಡೆಯುವವರೂ ಇದ್ದಾರೆ. ಆದರೆ, ಇನ್ನು ಈ ಎಲ್ಲದಕ್ಕೂ ಬ್ರೇಕ್‌ ಬೀಳಲಿದೆ. ರಸ್ತೆ ಕಾಮಗಾರಿಗಳ ಗುಣಮಟ್ಟದ ಪರಿಶೀಲನೆ ಸೇರಿದಂತೆ ಸಾರ್ವಜನಿಕರಿಂದ ಬರುವ ದೂರುಗಳಿಗಾಗಿ ಆ್ಯಪ್‌ವೊಂದು (Public Works Department) ಸಿದ್ಧವಾಗುತ್ತಿದೆ.

ಕಳಪೆ ಕಾಮಗಾರಿಗಳ ಮೇಲೆ ಸರ್ಕಾರದಿಂದ ಕಟ್ಟೆಚ್ಚರ ವಹಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ ನಿಗಾ ವಹಿಸಲು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಕಾಪಾಡುವ ಸಂಬಂಧ ಈಗ ಆ್ಯಪ್ ತಯಾರಿಕೆಗೆ ಮೊರೆ ಹೋಗಲಾಗಿದೆ. ಕಾಮಗಾರಿಗಳಲ್ಲಿ ಕಳಪೆ ಕಂಡು ಬಂದರೆ ಈ ಆ್ಯಪ್‌ ಮೂಲಕ ದೂರು ದಾಖಲು ಮಾಡಲು ಅವಕಾಶ ಇದೆ.

ಇದನ್ನೂ ಓದಿ: Minister D Sudhakar : ಸಚಿವ ಸುಧಾಕರ್‌ ವಿರುದ್ಧ ಮುಗಿಬಿದ್ದ ಬಿಜೆಪಿ ನಿಯೋಗ; ಸಂತ್ರಸ್ತೆ ಭೇಟಿ, ನ್ಯಾಯಕ್ಕೆ ಗುಡುಗು

ಈಗಾಗಲೇ ಆ್ಯಪ್ ಸಿದ್ಧತೆ ಕಾರ್ಯ ಶುರವಾಗಿದೆ. ಶೀಘ್ರದಲ್ಲೇ ಲೋಕೋಪಯೋಗಿ ಇಲಾಖೆಯಿಂದ ಆ್ಯಪ್ ಬಿಡುಗಡೆ ಮಾಡಲಾಗುತ್ತದೆ. ಆ್ಯಪ್ ಟ್ರಯಲ್ ನಡೆಯುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ.

ಆ್ಯಪ್‌ ಕಾರ್ಯನಿರ್ವಹಣೆ ಹೇಗೆ?

ಆ್ಯಪ್‌ನಲ್ಲಿ ನಕಲಿ ಬಿಲ್, ಕಳಪೆ ಕಾಮಗಾರಿ, ಡಬಲ್ ಬಿಲ್ ಸೇರಿದಂತೆ ವಿವಿಧ ದೂರುಗಳನ್ನು ದಾಖಲಿಸಲು ವ್ಯವಸ್ಥೆ ಮಾಡಲಾಗಿದೆ. ಕಳಪೆ ಕಾಮಗಾರಿಯ ಪೋಟೊ ಅಥಾವ ವಿಡಿಯೊ ‌ಸಮೇತ ಇಲ್ಲಿ ದೂರು ದಾಖಲಿಸಬಹುದಾಗಿದೆ. ಆ ಮೂಲಕ ಗುತ್ತಿಗೆದಾರರ ಹಾಗೂ ಅಧಿಕಾರಿಗಳ‌ ಮೇಲೆ‌ ಕಟ್ಟೆಚ್ಚರ ವಹಿಸಬಹುದು. ಆ ನಿಟ್ಟಿನಲ್ಲಿ ಪಾರದರ್ಶಕ ಹಾಗೂ ಗುಣಮಟ್ಟದ ಕೆಲಸಕ್ಕೆ ಆದ್ಯತೆ ನೀಡಲು ಮುಂದಾಗಲಾಗಿದೆ ಎಂದು ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ಇನ್ನು ಗುತ್ತಿಗೆದಾರರಿಂದಲೇ 5 ವರ್ಷ ರಸ್ತೆ ನಿರ್ವಹಣೆ

ಇನ್ನು ಮುಂದೆ ನಮ್ಮ ರಾಜ್ಯದ ರಸ್ತೆಗಳನ್ನು (Karnataka Road) ನಿರ್ಮಾಣ ಮಾಡಿದ ಗುತ್ತಿಗೆದಾರರೇ (Karnataka Road Contractors) ಐದು ವರ್ಷದವರೆಗೆ ನಿರ್ವಹಣೆ ಮಾಡಬೇಕು ಎಂಬ ಹೊಸ ನಿಯಮವನ್ನು (New Rule) ಜಾರಿಗೆ ತರುತ್ತಿದ್ದೇವೆ. ಇಲ್ಲಿಯವರೆಗೆ ಈ ರೂಲ್ಸ್ ಇರಲಿಲ್ಲ. ಹೊಸದಾಗಿ ಜಾರಿ ಮಾಡುತ್ತಾ ಇದ್ದೇವೆ. ಗುತ್ತಿಗೆದಾರರಿಗೆ ಆ ಹೊಣೆ ನೀಡಲಾಗುವುದು. ಇನ್ನು ಟೆಂಡರ್ ಕರೆಯುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (PwD Minister Satish Jarkiholi) ಹೇಳಿದ್ದಾರೆ.

ಇದನ್ನೂ ಓದಿ: Drought Taluk : 161 ತಾಲೂಕಲ್ಲಿ 11 ಜಿಲ್ಲೆಗಳು ಸಂಪೂರ್ಣ ಬರ; ಬಾಧಿತ ತಾಲೂಕಗಳ ಪಟ್ಟಿ ಇಲ್ಲಿದೆ

ಲೋಕೋಪಯೋಗಿ ಇಲಾಖೆಯಲ್ಲಿ ಸುಧಾರಣೆ ‌ಮಾಡುವುದಕ್ಕೆ ಕ್ರಮ ಕೈಗೊಂಡಿದ್ದೇವೆ. ಈ ನಿಟ್ಟಿನಲ್ಲಿಯೇ ನಿರ್ವಹಣೆಯ ಜವಾಬ್ದಾರಿಯನ್ನು ರಸ್ತೆ ನಿರ್ಮಾಣ ಮಾಡುವ ಗುತ್ತಿಗೆದಾರರಿಗೇ ನೀಡಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

Exit mobile version