Site icon Vistara News

Vistara Top10 News : ಅಯೋಧ್ಯೆಯಲ್ಲಿ ಕರ್ನಾಟಕ ಶಿಲ್ಪಿಯ ರಾಮ ಮೂರ್ತಿ, ಡಿಕೆಶಿಗೆ ಸಿಬಿಐ ಶಾಕ್‌ ಮತ್ತಿತರ ಪ್ರಮುಖ ಸುದ್ದಿಗಳು

Top 10 news

1. Ram Mandir : ಮೈಸೂರಿನ ಅರುಣ್‌ ಯೋಗಿರಾಜ್‌ ಕೆತ್ತಿದ ವಿಗ್ರಹವೇ ಅಧಿಕೃತ ಶ್ರೀ ರಾಮ ದೇವರು!
ಮೈಸೂರು : ಜನವರಿ 22ರಂದು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ (Ayodhya Ramajanmabhumi) ಪ್ರತಿಷ್ಠಾಪನೆಗೊಳ್ಳಲಿರುವ ಮೂರ್ತಿಯನ್ನು ಅಂತಿಮಗೊಳಿಸಲಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್​​ (Arun Yogiraj) ಅವರು ಕೆತ್ತನೆಯ ಮೂರ್ತಿಗೆ (Ram lalla Statue) ಅಯೋಧ್ಯೆ ರಾಮ ಮಂದಿರದಲ್ಲಿ (Ram Mandir) ಪ್ರಾಣ ಪ್ರತಿಷ್ಠೆ ಮಾಡಲಾಗುತ್ತಿದೆ ಎಂದು ರಾಮಮಂದಿರ ಟ್ರಸ್ಟ್ (Rama Mandir Trust) ಮೂಲಗಳಿಂದ​ ತಿಳಿದುಬಂದಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.

2. Ram Janmabhoomi: 31 ವರ್ಷದ ಬಳಿಕ ಕೇಸ್‌ ರಿಓಪನ್;‌ ಹುಬ್ಬಳ್ಳಿಯಲ್ಲಿ ಅಯೋಧ್ಯೆ ಹೋರಾಟಗಾರರಿಗೆ ಹುಡುಕಾಟ!
ಹುಬ್ಬಳ್ಳಿ: ಅತ್ತ ರಾಮ ಜನ್ಮಭೂಮಿ (Ram Janmabhoomi) ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಇತ್ತ ಅದೇ ರಾಮ ಜನ್ಮಭೂಮಿಗಾಗಿ ಹೋರಾಟ ಮಾಡಿದ್ದ ಪ್ರಕರಣವೊಂದು ರಿಓಪನ್‌ ಆಗಿದೆ. ಬರೋಬ್ಬರಿ 31 ವರ್ಷದ ಬಳಿಕ ರಾಮಜನ್ಮಭೂಮಿ‌ ಹೋರಾಟದ ಪ್ರಕರಣಕ್ಕೆ‌ ಮರು ಜೀವ ಸಿಕ್ಕಿದ್ದು, ಹೋರಾಟಗಾರರಿಗೆ ಬಂಧನದ ಭೀತಿ ಶುರುವಾಗಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.
ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನೆ; ಜ. 22ಕ್ಕೆ ರಜೆ ಘೋಷಿಸಲು ಸಿಎಂಗೆ ಉಡುಪಿ ಶಾಸಕ ಪತ್ರ
ಇದನ್ನೂ ಓದಿ : Dhruva Sarja: ಜ್ಯೋತಿ ಬೆಳಗಿಸಿ, ರಾಮನ ಕೃಪೆಗೆ ಪಾತ್ರರಾಗೋಣ ಎಂದ ಧ್ರುವ ಸರ್ಜಾ!

3. ಡಿಕೆಶಿಗೆ ಸಿಬಿಐ ಸಂಕಷ್ಟ; ಚಾನೆಲ್‌ ಹೂಡಿಕೆ ಬಗ್ಗೆ ನೋಟಿಸ್
ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್‌ (DCM ‌DK Shivakumar) ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ (Disproportionate assets case) ಸಂಬಂಧಿಸಿದಂತೆ ಚಾನೆಲ್‌ನಲ್ಲಿ ಮಾಡಿರುವ ಹೂಡಿಕೆಯ ವಿವರಗಳನ್ನು ಕೇಳಿ ಸಿಬಿಐನಿಂದ ನೋಟಿಸ್‌ (CBI notice) ಜಾರಿ ಮಾಡಲಾಗಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.

4. ಹೊಸ ವರ್ಷದ ದಿನವೇ ಇಸ್ರೋ ಇತಿಹಾಸ; ಎಕ್ಸ್‌ಪೋಸ್ಯಾಟ್‌ ಉಡಾವಣೆ ಯಶಸ್ವಿ
ಶ್ರೀಹರಿಕೋಟ: ಹೊಸ ವರ್ಷದ ದಿನವೇ ಇಸ್ರೋ ಇತಿಹಾಸ ಸೃಷ್ಟಿಸಿದೆ. ದೇಶದ ಮೊದಲ ಎಕ್ಸ್-ರೇ ಪೋಲರಿಮೀಟರ್( X-Ray Polarimeter Satellite) ಉಪಗ್ರಹ ಎಕ್ಸ್‌ಪೋಸ್ಯಾಟ್ (XPoSat) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ (PSLV) ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಹಾಗೆಯೇ, ಪಿಎಸ್‌ಎಲ್‌ವಿ ಇತರ ಹತ್ತು ಉಪಗ್ರಹಗಳನ್ನು ಹೊತ್ತೊಯ್ದಿದೆ. ಈ ಉಪಗ್ರಹಗಳನ್ನು ಸ್ಟಾರ್ಟ್‌ಅಪ್ಸ್(Starts Up), ಶೈಕ್ಷಣಿಕ ಸಂಸ್ಥೆಗಳು(Educational Institutions) ಮತ್ತು ಇಸ್ರೋ ಕೇಂದ್ರಗಳು (ISRO Centers) ನಿರ್ಮಾಣ ಮಾಡಿವೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.

5. ಶಾಲೆಯಲ್ಲೇ ಗ್ಯಾಂಗ್‌ ವಾರ್‌; ವಿದ್ಯಾರ್ಥಿಗಳ ಕೈಯಲ್ಲಿ ಗನ್‌, ಡ್ಯಾಗರ್‌, ಬಟನ್‌ ಚಾಕು
ರಾಯಚೂರು:‌ ಅಸಹನೆ, ವೈರತ್ವ ಮತ್ತು ವ್ಯಗ್ರತೆ ಯುವಜನರಲ್ಲಿ ಮಿತಿ ಮೀರಿದ್ದನ್ನು ಕಾಣಬಹುದು. ಸಣ್ಣ ಸಣ್ಣ ಕಾರಣಕ್ಕೆ ಜನರು ಜಗಳಕ್ಕೆ ಇಳಿಯುವುದು, ಹೊಡೆದಾಟ, ಕೊಲೆಯನ್ನೇ ನಡೆಸುವಷ್ಟರ ಮಟ್ಟಿಗೆ ಜನರು ಮುಂದುವರಿದಿದ್ದಾರೆ. ಈ ಮನೋಸ್ಥಿತಿ ಈಗ ಯುವಕರ ಹಂತದಿಂದ ಮಕ್ಕಳ ಹಂತಕ್ಕೂ ಇಳಿದಿರುವುದು ಭಾರಿ ಕಳವಳವನ್ನು ಸೃಷ್ಟಿಸಿದೆ. ರಾಯಚೂರು ನಗರದ ಜ್ಯೋತಿ ಕಾಲೋನಿಯ (Raichur Jyothi Colony) ರಿಖಬ್ ಚಂದ್ ಸುಖಾಣಿ ಪ್ರೌಢ ಶಾಲೆಯ (Rikhab Chand sukhani High School) ಬಳಿ ನಡೆದ ಘಟನೆಯನ್ನು (Gangwar in School) ನೋಡಿದರೆ ಮಕ್ಕಳಿರುವ ಪ್ರತಿಯೊಬ್ಬರೂ ಬೆಚ್ಚಿ ಬೀಳಬೇಕು. ಯಾಕೆಂದರೆ, ಇಲ್ಲಿನ ಮಕ್ಕಳು ಹೊಸ ವರ್ಷ ಆಚರಣೆ (New year Celebration) ಹೆಸರಿನಲ್ಲಿ ಯಾರಿಗೋ ಸ್ಕೆಚ್‌ ಹಾಕಿದ್ದಾರೆ. ಕೊಂದೇ ಕೊಲ್ಲಬೇಕು ಎಂಬಷ್ಟು ಆಕ್ರೋಶದಿಂದ ಶಾಲೆಗೆ ಗನ್, ಚಾಕು ಮತ್ತು ಬಟನ್ ಚಾಕು ತೆಗೆದುಕೊಂಡು ಬಂದಿದ್ದಾರೆ. 9ನೇ ಮತ್ತು 7ನೇ ತರಗತಿ ವಿದ್ಯಾರ್ಥಿಗಳ ಈ ಕ್ರೌರ್ಯದ ಮನೋಸ್ಥಿತಿ (Cruel Mindset) ಕಂಡು ನಿಜಕ್ಕೂ ಊರೇ ಬೆಚ್ಚಿಬಿದ್ದಿದೆ. ಹೆತ್ತವರಂತೂ ತಮ್ಮ ಮಕ್ಕಳು ಹೀಗಾಗಿ ಹೋದರಾ ಎಂದು ಯೋಚಿಸಿ ಕಣ್ಣೀರು ಹಾಕುತ್ತಿದ್ದಾರೆ. ಶಿಕ್ಷಕರಿಗಂತೂ ನಾವು ಪಾಠ ಮಾಡಿದ್ದೆಲ್ಲ ವೇಸ್ಟ್‌ ಆಗೋಯ್ತಾ ಎನ್ನುವ ಆತಂಕ. ವಿದ್ಯಾರ್ಥಿಗಳ ಓಡಾಟದ ಪ್ರತಿಯೊಂದು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Gang war in School : ಶಾಲಾ ಮಕ್ಕಳ ಗ್ಯಾಂಗ್‌ ವಾರ್‌ ಹಿಂದೆ ಇದೆ ಹುಡುಗ್ರ ಲವ್‌ ಸ್ಟೋರಿ!

6. ಭೂಕಂಪ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಹೊಡೆತ; ಸುರಕ್ಷಿತ ಸ್ಥಳಕ್ಕೆ ಜನರ ಸ್ಥಳಾಂತರ
ಟೋಕಿಯೊ: ಭಾರೀ ಭೂಕಂಪದ ಬೆನ್ನಲ್ಲೇ ಕೇಂದ್ರ ಜಪಾನ್ (Central Japan) ತೀರಕ್ಕೆ ಸುನಾಮಿ ಸೋಮವಾರ ಅಪ್ಪಳಿಸಿದೆ(Japan Tsunami). 7.5 ತೀವ್ರತೆಯಲ್ಲಿ ಭೂಮಿ ನಡುಗಿದ ಬೆನ್ನಲ್ಲೇ, ಸುನಾಮಿ ಎಚ್ಚರಿಕೆಯನ್ನು ನೀಡಲಾಗಿತ್ತು. ಈಗ ಸುನಾಮಿಯ ಬೃಹತ್ ಅಲೆಗಳು ಕಡಲಿಗೆ ಅಪ್ಪಳಿಸುತ್ತಿವೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಎತ್ತರ ಪ್ರದೇಶಕ್ಕೆ ಹೋಗುವಂತೆ ಜನರಿಗೆ ಅಧಿಕಾರಿಗಳು ಸೂಚನೆಗಳನ್ನು ನೀಡುತ್ತಿದ್ದಾರೆ. ಜಪಾನ್‌ನ ಇಶಿಕಾವಾ(Ishikawa) ಪ್ರಾಂತ್ಯದ ನೋಟೊ ಪ್ರದೇಶದಲ್ಲಿ (Noto region) ಭಾರೀ ಭೂಕಂಪ ಸಂಭವಿಸಿತ್ತು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.

7. ಡಿಸೆಂಬರ್‌ 31 ಕಂಪ್ಲೀಟು; ಮಂದಿ ಸಿಕ್ಕಾಪಟ್ಟೆ ಟೈಟು! ಬೊಕ್ಕಸಕ್ಕೆ ಬಿತ್ತು 193 ಕೋಟಿ ರೂ. ಅಮೌಂಟು
ಬೆಂಗಳೂರು: ಹೊಸ ವರ್ಷದ ಪಾರ್ಟಿಯಿಂದ (New Year 2024) ಅಬಕಾರಿ ಖಜಾನೆಗೆ ಕಿಕ್ ಸಿಕ್ಕಿದೆ. ಹೊಸ ವರ್ಷದ ಸಂಭ್ರಮದಲ್ಲಿ ಲಕ್ಷಾಂತರ ಲೀಟರ್‌ ಮದ್ಯ (New Year liquor sale) ಮಾರಾಟವಾಗಿದೆ. ಇದರಿಂದಾಗಿ ಅಬಕಾರಿ ಇಲಾಖೆ ಬೊಕ್ಕಸಕ್ಕೆ ಕೋಟ್ಯಂತರ ರೂ. ಆದಾಯ ಹರಿದು ಬಂದಿದೆ. ಅದರಲ್ಲೂ ಕ್ರಿಸ್ ಮಸ್ ಮತ್ತು ಹೊಸ ವರ್ಷದ ನಡುವೆ ಭರ್ಜರಿ ಲಿಕ್ಕರ್‌ ಸೇಲ್ಸ್‌ ದಾಖಲಾಗಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.

8. ಮೋದಿ 3ನೇ ಬಾರಿ ಪ್ರಧಾನಿ ಆಗುವುದು ಗ್ಯಾರಂಟಿ; ಬ್ರಿಟನ್‌ ಪತ್ರಿಕೆಯಲ್ಲಿ ಮಹತ್ವದ ಲೇಖನ
ಲಂಡನ್/ನವದೆಹಲಿ: ಭಾರತವು ಹೊಸ ವರ್ಷಕ್ಕೆ ಕಾಲಿಟ್ಟಿದೆ. ಪ್ರತಿಯೊಬ್ಬರೂ ಸಡಗರದಿಂದ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಆಗಲಿದೆ. ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ತಿಂಗಳು ಬಾಕಿ ಇರುವ ಕಾರಣ ರಾಜಕೀಯ ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ನರೇಂದ್ರ ಮೋದಿ (Narendra Modi) ಅವರು ಹ್ಯಾಟ್ರಿಕ್‌ ಸಾಧನೆ ಮೇಲೆ ಕಣ್ಣಿಟ್ಟಿದ್ದಾರೆ. ಪ್ರತಿಪಕ್ಷಗಳು ಕೂಡ ಗೆಲುವಿಗಾಗಿ ಇಂಡಿಯಾ ಒಕ್ಕೂಟ (INDIA Bloc) ರಚಿಸಿವೆ. ಇದರ ಬೆನ್ನಲ್ಲೇ, “ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗುವುದು ನಿಶ್ಚಿತ” ಎಂದು ಬ್ರಿಟನ್‌ನ ಖ್ಯಾತ ಪತ್ರಿಕೆಯೊಂದು ಲೇಖನ ಪ್ರಕಟಿಸಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.

9. ಶರ್ಟ್‌ಲೆಸ್ ಫೋಟೊ ಹಂಚಿಕೊಂಡು ಫ್ಯಾನ್ಸ್‌ಗೆ ಬೆರಗುಗೊಳಿಸಿದ ಮನೋಜ್ ಬಾಜಪೇಯಿ!
ಬೆಂಗಳೂರು: ಮನೋಜ್ ಬಾಜಪೇಯಿ (Manoj Bajpayee) ಅವರು ಹೊಸ ವರ್ಷಕ್ಕೆ ಹೊಸ ಪೋಟೊ ಹಂಚಿಕೊಳ್ಳುವುದರ ಮೂಲಕ ಫ್ಯಾನ್ಸ್‌ಗೆ ಬೆರಗುಗೊಳಿಸಿದ್ದಾರೆ. ಶರ್ಟ್‌ಲೆಸ್ ಫೋಟೊ ಹಂಚಿಕೊಂಡು ತಮ್ಮ ಸಿಕ್ಸ್‌ ಪ್ಯಾಕ್‌ ಬಾಡಿಯನ್ನು ತೋರಿಸಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.

10.4 ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪಡೆದ ವ್ಯಕ್ತಿಯ ಉದ್ಯೋಗ ತರಕಾರಿ ಮಾರಾಟ; ಕಾರಣವೇನು?
ಚಂಡೀಗಢ: ಯಾವ ಕೆಲಸವೂ ಕೀಳಲ್ಲ; ಪ್ರತಿಯೊಂದಕ್ಕೂ ಅದರದ್ದೇ ಆದ ಮಹತ್ವವಿದೆ ಎನ್ನುವ ಮಾತನ್ನು ಅಕ್ಷರಶಃ ಸಾಬೀತು ಪಡಿಸಿದ್ದಾರೆ ಈ ವ್ಯಕ್ತಿ. ನಾಲ್ಕು ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಹೊಂದಿರುವ ಪಂಜಾಬ್‌ನ ವ್ಯಕ್ತಿಯೊಬ್ಬರು ಜೀವನೋಪಾಯಕ್ಕಾಗಿ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. 39 ವರ್ಷದ ಡಾ. ಸಂದೀಪ್ ಸಿಂಗ್ (Dr. Sandeep Singh) ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದಲ್ಲಿ (Punjabi University in Patiala) ಗುತ್ತಿಗೆ ಪ್ರಾಧ್ಯಾಪಕರಾಗಿದ್ದರು. ಆದರೆ ಕೆಲವು ಅನಿವಾರ್ಯ ಅವರು ಆ ಉದ್ಯೋಗ ತೊರೆಯ ಬೇಕಾಯಿತು. ಸದ್ಯ ಅವರು ಜೀವನೋಪಾಯಕ್ಕಾಗಿ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಸದ್ಯ ಈ ವಿಚಾರ ವೈರಲ್‌ ಆಗಿದೆ (Viral News). ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್​ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version