Site icon Vistara News

10,667 ಸರ್ಕಾರಿ ನೌಕರರಿಗೆ ಒಪಿಎಸ್‌; ಸಿಎಂ, ಡಿಸಿಎಂಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧನ್ಯವಾದ

MLC Election

ಬೆಂಗಳೂರು: 2005ರ ಅಧಿಸೂಚನೆಯಲ್ಲಿ ನೇಮಕಗೊಂಡ 10667 ಸರ್ಕಾರಿ ನೌಕರರನ್ನು ಹಳೇ ಪಿಂಚಣಿ ಯೋಜನೆಗೆ (Old Pension Scheme-ಒಪಿಎಸ್‌) ಒಳಪಡಿಸುವ ಕಡತಕ್ಕೆ ಅನುಮೋದನೆ ನೀಡಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ನಾಗೇಶ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅವರು ಧನ್ಯವಾದ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ 2006 ಮಾರ್ಚ್‌ 31ಕ್ಕಿಂತ ಮುಂಚಿತವಾಗಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ನೇಮಕಾತಿ ಸಂಬಂಧ ಅಧಿಸೂಚನೆ ಹೊರಡಿಸಿ, ಕಾರಣಾಂತರಗಳಿಂದ 2006 ಏಪ್ರಿಲ್ 1ರ ನಂತರ ನೇಮಕಾತಿ ಆದೇಶ ಪಡೆದು‌, ನೇಮಕಾತಿಯಾದ ನೌಕರರನ್ನು ನೂತನ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ವ್ಯಾಪ್ತಿಯಿಂದ ಸಡಿಲಿಕೆ ನೀಡಿ, ಒಪಿಎಸ್‌ನಲ್ಲಿ ಮುಂದುವರಿಸುವ ಕಡತಕ್ಕೆ ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಅನುಮೋದನೆ ನೀಡಿದ್ದಾರೆ.

ಇದನ್ನೂ ಓದಿ | Yuva Nidhi Scheme: ಯುವನಿಧಿ ಮೂಲಕ ಐದೂ ಗ್ಯಾರಂಟಿ ಜಾರಿ; ಈ ಸಾಧನೆ ಯಾರೂ ಮಾಡಿಲ್ಲ; ಸಿಎಂ ಸಿದ್ದರಾಮಯ್ಯ

ಈ ಯೋಜನೆಯ ವ್ಯಾಪ್ತಿಗೊಳಪಡುವ ಸಚಿವಾಲಯದ 1850, ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರು 4915, ಕಾಲೇಜು ಶಿಕ್ಷಣ ಇಲಾಖೆಯ ಪ್ರಾಧ್ಯಾಪಕರು 535, ಪೊಲೀಸ್ ಇಲಾಖೆಯ 2120, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 1247 ಒಟ್ಟು 10667 ನೌಕರರನ್ನು OPSಗೆ ಒಳಪಡಿಸಿ ಕಡತಕ್ಕೆ ಅನುಮೋದನೆ ನೀಡಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯದ ಸಮಸ್ತ ಶಿಕ್ಷಕರು, ನೌಕರರ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.

Exit mobile version