ಬೆಂಗಳೂರು: ಆಗಸ್ಟ್ ತಿಂಗಳಿಡೀ ಕಾಣೆಯಾಗಿದ್ದ ಮಳೆ ನಿನ್ನೆ ರಾತ್ರಿ ರಾಜಧಾನಿಯಲ್ಲಿ ಸುರಿದು ತಂಪಾಗಿಸಿದ್ದಲ್ಲದೆ, ತಗ್ಗು ಪ್ರದೇಶಗಳನ್ನು ಮುಳುಗಿಸಿತು. ಅತ್ತ ಮಂಡ್ಯದಲ್ಲಿ ಕಾವೇರಿ ನೀರಿಗಾಗಿ ರೈತರ ಹೋರಾಟ ಮುನ್ನಡೆಸುವವರಿಲ್ಲದೆ ದಿಕ್ಕೆಟ್ಟಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳಿಗಾಗಿ (Karnataka live news) ಇಲ್ಲಿ ಗಮನಿಸಿ.
ವಿದ್ಯಾರ್ಥಿನಿಯರ ಜತೆ ಶಿಕ್ಷಕನ ಕುಚೇಷ್ಟೆ; ಶಾಲೆಗೆ ನುಗ್ಗಿ ಥಳಿಸಿದ ಪೋಷಕರು!
ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರ ಜತೆ ಕುಚೇಷ್ಟೆ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದವನನ್ನು (Molestation Case) ಪೋಷಕರು ಜಾಡಿಸಿದ್ದಾರೆ. ಆನೆಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಂಜುನಾಥ್ ಎಂಬಾತ ವಿದ್ಯಾರ್ಥಿನಿಯರ ಜತೆ ಅನುಚಿತವಾಗಿ ವರ್ತಿಸುತ್ತಿದ್ದ.
Molestation Case : ವಿದ್ಯಾರ್ಥಿನಿಯರ ಜತೆ ಶಿಕ್ಷಕನ ಕುಚೇಷ್ಟೆ; ಶಾಲೆಗೆ ನುಗ್ಗಿ ಥಳಿಸಿದ ಪೋಷಕರು!
ಆ. 2-3ಕ್ಕೆ ಬೆಂಗಳೂರು, ರಾಮನಗರ ಸೇರಿ 8 ಜಿಲ್ಲೆಗಳಲ್ಲಿ ರಣಮಳೆ ಫಿಕ್ಸ್!
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಆರ್ಭಟ (Bengaluru Rains) ಜೋರಾಗಲಿದೆ. ನೈರುತ್ಯ ಮುಂಗಾರು (Southwest Monsoon) ಚುರುಕಾಗಿದ್ದು ಮುಂದಿನ 48 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಕರಾವಳಿ ಮತ್ತು ಉತ್ತರ ಒಳನಾಡಿನ (Rain News) ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (weather report) ಸಾಧ್ಯತೆ ಇದೆ.
Weather Report : ಆ. 2-3ಕ್ಕೆ ಬೆಂಗಳೂರು, ರಾಮನಗರ ಸೇರಿ 8 ಜಿಲ್ಲೆಗಳಲ್ಲಿ ರಣಮಳೆ ಫಿಕ್ಸ್!
ಮನೆ ಕಟ್ಟುವ ವಿಚಾರಕ್ಕೆ ಮಾರಾಮಾರಿ; ಯುವಕನ ಬೆರಳು ಕಚ್ಚಿ ತುಂಡರಿಸಿದ ದುರುಳರು
ಸೀಟ್ ಮನೆ ಮೇಲೆ ನಿಂತೂ ಪ್ಲಾಸ್ಟಿಂಗ್ ಮಾಡಬೇಡಿ ಎಂದು ಹೇಳಿದಕ್ಕೆ ಪಕ್ಕದ ಮನೆಯವರು ಬೆರಳು ಕಚ್ಚಿ ತುಂಡು (Assault Case ) ಮಾಡಿರುವ ಘಟನೆ ನಡೆದಿದೆ. ಅಂಬರೀಷ್ (35) ಎಂಬಾತ ಹಲ್ಲೆಗೊಳಗಾದ ವ್ಯಕ್ತಿ.
http://vistaranews.com/karnataka/bengaluru-rural/assault-case-dispute-over-the-construction-of-a-house-miscreants-who-cut-off-their-finger/442456.html
ಸಂಸತ್ ಸದಸ್ಯತ್ವದಿಂದ ಪ್ರಜ್ವಲ್ ರೇವಣ್ಣ ಅನರ್ಹ; ಹೈಕೋರ್ಟ್ ಆದೇಶ
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್‌ಗೆ ದೊಡ್ಡ ಆಘಾತ ಉಂಟಾಗಿದೆ. ಪ್ರಜ್ವಲ್ ರೇವಣ್ಣ ಅವರ (Prajwal Revanna) ಸಂಸತ್ ಸದಸ್ಯತ್ವ ಅನರ್ಹಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ಇದರಿಂದ ಇನ್ನು 6 ವರ್ಷಗಳ ಕಾಲ ಅವರು ಚುನಾವಣೆಗೆ ಸ್ಪರ್ಧಿಸಲು ಅವಕಾಶವಿರುವುದಿಲ್ಲ.
Prajwal Revanna: ಸಂಸತ್ ಸದಸ್ಯತ್ವದಿಂದ ಪ್ರಜ್ವಲ್ ರೇವಣ್ಣ ಅನರ್ಹ; ಹೈಕೋರ್ಟ್ ಆದೇಶ
ಸೆ.11 ಬೆಂಗಳೂರು ಬಂದ್; ಸ್ಕೂಲ್ ಬಸ್ ಇರಲ್ಲ, ಆಟೋ,ಟ್ಯಾಕ್ಸಿ ಓಡಾಡಲ್ಲ
ಸರ್ಕಾರದ ವಿರುದ್ಧ ಬಂದ್ ಅಸ್ತ್ರ ಪ್ರಯೋಗಕ್ಕೆ ಒಕ್ಕೂಟ ಸಜ್ಜಾಗಿದ್ದು, ಸೆಪ್ಟೆಂಬರ್ 11ರ ಬೆಂಗಳೂರು ಬಂದ್‌ಗೆ ಸುಮಾರು 32 ಖಾಸಗಿ ಸಾರಿಗೆ ಒಕ್ಕೂಟಗಳು ಸಾಥ್ ನೀಡಿವೆ. ಶಕ್ತಿ ಯೋಜನೆ ಜಾರಿ ಬಳಿಕ ಖಾಸಗಿ ಚಾಲಕರು ಸಂಕಷ್ಟ ಅನುಭವಿಸುವಂತಾಗಿದೆ. ಸಾರಿಗೆ ಸಚಿವರು ಆಗಸ್ಟ್ 31ರೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಸರ್ಕಾರದ ಡೆಡ್ ಲೈನ್ ಮುಗಿದ ಕಾರಣಕ್ಕೆ ಬೆಂಗಳೂರು ಬಂದ್‌ಗೆ ನಿರ್ಧರಿಸಿದ್ದಾರೆ.
Bengaluru Bundh : ಸೆ.11 ಬೆಂಗಳೂರು ಬಂದ್; ಸ್ಕೂಲ್ ಬಸ್ ಇರಲ್ಲ, ಆಟೋ,ಟ್ಯಾಕ್ಸಿ ಓಡಾಡಲ್ಲ!