Site icon Vistara News

Karnataka live news: ರಾಜ್ಯದ ಇಂದಿನ ಮಹತ್ವದ ಸುದ್ದಿಗಳು; ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ, ಅಸಿಂಧುಗೊಳಿಸಿದ ಹೈಕೋರ್ಟ್

Prajwal Revanna

ಬೆಂಗಳೂರು: ಆಗಸ್ಟ್‌ ತಿಂಗಳಿಡೀ ಕಾಣೆಯಾಗಿದ್ದ ಮಳೆ ನಿನ್ನೆ ರಾತ್ರಿ ರಾಜಧಾನಿಯಲ್ಲಿ ಸುರಿದು ತಂಪಾಗಿಸಿದ್ದಲ್ಲದೆ, ತಗ್ಗು ಪ್ರದೇಶಗಳನ್ನು ಮುಳುಗಿಸಿತು. ಅತ್ತ ಮಂಡ್ಯದಲ್ಲಿ ಕಾವೇರಿ ನೀರಿಗಾಗಿ ರೈತರ ಹೋರಾಟ ಮುನ್ನಡೆಸುವವರಿಲ್ಲದೆ ದಿಕ್ಕೆಟ್ಟಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳಿಗಾಗಿ (Karnataka live news) ಇಲ್ಲಿ ಗಮನಿಸಿ.

Deepa S

ಕೆಎಸ್‌ಆರ್‌ಟಿಸಿ ಬಸ್ ಜಪ್ತಿ ಮಾಡಿದ ಕೋರ್ಟ್; ರೂಟ್‌ ಬದಲಿಸಿದರೂ ಬೆನ್ನಟ್ಟಿ ಹಿಡಿದ್ರು

ಕಾರು-ಬಸ್ ಅಪಘಾತ ಪ್ರಕರಣವೊಂದರಲ್ಲಿ ಪರಿಹಾರ ನೀಡದೆ ರೂಟ್‌ ಬದಲಿಸಿದ ಕಾರಣಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ನ್ಯಾಯಾಲಯವು (Virajpet Court) ಸರ್ಕಾರಿ ಬಸ್‌ನ್ನೇ ಜಪ್ತಿ (KSRTC Bus seized) ಮಾಡಿದ ಘಟನೆ ನಡೆದಿದೆ.

KSRTC Bus seized : ಕೆಎಸ್‌ಆರ್‌ಟಿಸಿ ಬಸ್ ಜಪ್ತಿ ಮಾಡಿದ ಕೋರ್ಟ್; ರೂಟ್‌ ಬದಲಿಸಿದರೂ ಬೆನ್ನಟ್ಟಿ ಹಿಡಿದ್ರು!
Deepa S

ಮಳೆ ಇಲ್ಲದೆ ಬೆಳೆ ನಾಶ; ಮನನೊಂದ ರೈತ ನೇಣಿಗೆ ಶರಣು

ಕಾಫಿನಾಡು ಚಿಕ್ಕಮಗಳೂರಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆಗೆ (Farmer Death) ಶರಣಾಗಿದ್ದಾರೆ. ಪರಮೇಶ್ವರಪ್ಪ (52) ಆತ್ಮಹತ್ಯೆಗೆ ಶರಣಾದ ರೈತ. ಎರಡು ದಿನಗಳ ಅಂತರದಲ್ಲಿ ಇಬ್ಬರು ರೈತರು ಚಿಕ್ಕಮಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಳೆ ಇಲ್ಲದೆ ಬೆಳೆ ನಾಶವಾದ ಹಿನ್ನೆಲೆ ಮನನೊಂದು ಪರಮೇಶ್ವರಪ್ಪ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಜ್ಜಂಪುರ ತಾಲೂಕಿನ ಚಿಕ್ಕನಲ್ಲೂರು ಗ್ರಾಮದಲ್ಲಿ ನಡೆದಿದೆ.

Farmer Death : ಮಳೆ ಇಲ್ಲದೆ ಬೆಳೆ ನಾಶ; ಮನನೊಂದ ರೈತ ನೇಣಿಗೆ ಶರಣು
Deepa S

ವಿದ್ಯುತ್‌ ಸ್ಪರ್ಶಿಸಿ ತಂದೆ- ಮಗ ದುರ್ಮರಣ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ವಿದ್ಯುತ್‌ ಸ್ಪರ್ಶಿಸಿ ತಂದೆ- ಮಗ ದುರ್ಮರಣ (Electric shock) ಹೊಂದಿದ್ದಾರೆ. ಪ್ರಭಾಕರ್ ಹುಂಡಿ (75), ಮಂಜುನಾಥ ಹುಂಡಿ (32) ಮೃತ ದುರ್ದೈವಿಗಳು.

Electric shock : ವಿದ್ಯುತ್‌ ಸ್ಪರ್ಶಿಸಿ ತಂದೆ- ಮಗ ದುರ್ಮರಣ
Deepa S

ಹಾಲಿಗೆ ಕ್ರಿಮಿನಾಶಕ ಬೆರೆಸಿ 5 ತಿಂಗಳ ಮಗು ಕೊಂದ ದುಷ್ಟ ಮಲತಾಯಿ!

ಸವತಿ ಮಗಳಿಗೆ ಆಸ್ತಿ ಪಾಲಾಗುತ್ತದೆ ಎಂದು ದುಷ್ಟ ಮಲತಾಯಿಯೊಬ್ಬಳು ಹಾಲಿನಲ್ಲಿ ಕ್ರಿಮಿನಾಶಕ ಬೆರೆಸಿ 5 ತಿಂಗಳ ಹೆಣ್ಣು ಮಗುವನ್ನು ಹತ್ಯೆ (Murder case) ಮಾಡಿದ್ದಾಳೆ. ದೇವಮ್ಮ ಎಂಬಾಕೆಯೇ ಈ ಕೃತ್ಯ ಎಸಗಿದ ಪಾಪಿ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ಆಗಸ್ಟ್‌ 30ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Murder Case : ಹಾಲಿಗೆ ಕ್ರಿಮಿನಾಶಕ ಬೆರೆಸಿ 5 ತಿಂಗಳ ಮಗು ಕೊಂದ ದುಷ್ಟ ಮಲತಾಯಿ!
Harish Kera

ಎಸ್‌ಟಿಎಸ್‌ ಮನವೊಲಿಕೆಗೆ ಬಿ.ಎಲ್ ಸಂತೋಷ್‌ ಯತ್ನ‌

ಬೆಂಗಳೂರು: ಮಾಜಿ ಸಚಿವ, ಬಿಜೆಪಿ ನಾಯಕ ಎಸ್‌ಟಿ ಸೋಮಶೇಖರ್‌ ಜತೆ ಬಿ.ಎಲ್‌ ಸಂತೋಷ್‌ ಮಾತುಕತೆ ನಡೆಸಿದ್ದಾರೆ. ನಿನ್ನೆ ಶಾಸಕರ ಸಭೆಗೆ ಗೈರಾಗಿದ್ದ ಹಿನ್ನೆಲೆಯಲ್ಲಿ ಖಾಸಗಿ ಹೊಟೇಲ್‌ಗೆ ಕರೆಸಿಕೊಂಡು ಸಂಜೆ 5 ಗಂಟೆಯಿಂದ 7 ಗಂಟೆವರೆಗೂ ನಡೆದ ಮಾತುಕತೆಯಲ್ಲಿ, ಪಕ್ಷ ಬಿಡದಂತೆ ಎಸ್‌ಟಿಎಸ್‌ ಮನವೊಲಿಕೆಗೆ ಸಂತೋಷ್‌ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

Exit mobile version