Site icon Vistara News

Karnataka live news: ರಾಜ್ಯದ ಇಂದಿನ ಮಹತ್ವದ ಸುದ್ದಿಗಳು; ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ, ಅಸಿಂಧುಗೊಳಿಸಿದ ಹೈಕೋರ್ಟ್

Prajwal Revanna

ಬೆಂಗಳೂರು: ಆಗಸ್ಟ್‌ ತಿಂಗಳಿಡೀ ಕಾಣೆಯಾಗಿದ್ದ ಮಳೆ ನಿನ್ನೆ ರಾತ್ರಿ ರಾಜಧಾನಿಯಲ್ಲಿ ಸುರಿದು ತಂಪಾಗಿಸಿದ್ದಲ್ಲದೆ, ತಗ್ಗು ಪ್ರದೇಶಗಳನ್ನು ಮುಳುಗಿಸಿತು. ಅತ್ತ ಮಂಡ್ಯದಲ್ಲಿ ಕಾವೇರಿ ನೀರಿಗಾಗಿ ರೈತರ ಹೋರಾಟ ಮುನ್ನಡೆಸುವವರಿಲ್ಲದೆ ದಿಕ್ಕೆಟ್ಟಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳಿಗಾಗಿ (Karnataka live news) ಇಲ್ಲಿ ಗಮನಿಸಿ.

Harish Kera

ಮುಂದುವರಿದ ರೈತರ ಕಾವೇರಿ ಪ್ರತಿಭಟನೆ

ಮಂಡ್ಯ: ಇಂದು ಸಹಾ ಮಂಡ್ಯದಲ್ಲಿ ಕಾವೇರಿ ಕಿಚ್ಚು ಮುಂದುವರಿದಿದೆ. ಬೆಳಗ್ಗೆ 11 ಗಂಟೆಗೆ ಮಂಡ್ಯದ ಸಂಜಯ್ ಸರ್ಕಲ್‌ನಲ್ಲಿ ರಾಜ್ಯ ರೈತಸಂಘ ಕಾರ್ಯಕರ್ತರಿಂದ ಪ್ರತಿಭಟನೆ, ಮತ್ತೊಂದೆಡೆ ಶ್ರೀರಂಗಪಟ್ಟಣದಲ್ಲೂ ಪ್ರತಿಭಟನೆ, ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರಿಂದ ಬಾರುಕೋಲು ಚಳುವಳಿ ನಡೆಯಲಿದೆ.

Deepa S

22 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ

ರಾಜ್ಯದಲ್ಲಿ ನೈರುತ್ಯ ಮುಂಗಾರು (Southwest monsoon) ಸಕ್ರಿಯಗೊಂಡಿದೆ. ಮುಂದಿನ ಐದು ದಿನಗಳು ಭರ್ಜರಿ ಮಳೆಯಾಗುವ (Rain news) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಲಿದ್ದು, ಉತ್ತರ ಒಳನಾಡು ಹಾಗೂ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಲಘು ಮಳೆಯಾಗಲಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಸಹಿತ ಗುಡುಗು ಮಳೆಯಾಗುವ ಸಾಧ್ಯತೆ ಇದೆ.

Weather report : 22 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ
Harish Kera

ರಾತ್ರಿ ಮಳೆಗೆ ರಾಜಧಾನಿ ನಡುಕ

ಬೆಂಗಳೂರು: ಆಗಸ್ಟ್‌ ತಿಂಗಳಿಡೀ ತಲೆ ಮರೆಸಿಕೊಂಡಿದ್ದ ಮಳೆ ತಿಂಗಳ ಕೊನೆಯ ದಿನ ರಾಜಧಾನಿಯ ಜನತೆಗೆ ಶಾಕ್‌ ಕೊಟ್ಟಿತು. ಭಾರಿ ಮಳೆಗೆ ರಸ್ತೆಗಳು, ತಗ್ಗು ಪ್ರದೇಶಗಳು ಜಲಾವೃತಗೊಂಡವು. ವಾಹನಗಳು ಮುಳುಗಿದವು.

Exit mobile version