ಬೆಂಗಳೂರು: ಲಿಂಗಾಯತರಿಗೆ ಪ್ರಮುಖ ಸ್ಥಾನ ವಿಚಾರದಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯಿಂದ ಸರ್ಕಾರಕ್ಕೆ ಉಂಟಾಗಿರುವ ಮುಜುಗರ, ಬಿಎಸ್‌ವೈಗೆ ಬಿಜೆಪಿ ಹೈಕಮಾಂಡ್ ನೀಡಿರುವ ಟಾಸ್ಕ್ ಸೇರಿದಂತೆ ಇಂದಿನ ಹತ್ತು ಹಲವಾರು ಪ್ರಮುಖ ಸುದ್ದಿ ಬೆಳವಣಿಗೆಗಳು (Karnataka Live News) ಇಲ್ಲಿ ನಿಮಗೆ ಸಿಗಲಿವೆ, ಗಮನಿಸಿ.
ಮತಾಂಧ ಶಕ್ತಿಗಳನ್ನು ಬೆಳೆಸಲು ಅಧಿಕಾರಕ್ಕೆ ಬಂದ ಸರ್ಕಾರವಿದು: ಪ್ರಲ್ಹಾದ್ ಜೋಶಿ ಕಿಡಿ
ಕಾಂಗ್ರೆಸ್ ಆಡಳಿತದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹಿಂದುಗಳ ಹಬ್ಬಕ್ಕೆ ನಿರ್ಬಂಧ ವಿಧಿಸಿ, ಮತಾಂಧ ಶಕ್ತಿಗಳ ಅಟ್ಟಹಾಸಕ್ಕೆ (ಮೆರವಣಿಗೆಗೆ) ಬೆಂಬಲ ನೀಡಲಾಗುತ್ತಿದೆ. ಮತಾಂಧ ಶಕ್ತಿಗಳನ್ನು (Shivamogga Violence) ಪೋಷಿಸಿ ಬೆಳೆಸಲೆಂದೇ ಅಧಿಕಾರಕ್ಕೆ ಬಂದ ಸರ್ಕಾರವಿದು ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.
Shivamogga Violence: ಮತಾಂಧ ಶಕ್ತಿಗಳನ್ನು ಬೆಳೆಸಲು ಅಧಿಕಾರಕ್ಕೆ ಬಂದ ಸರ್ಕಾರವಿದು: ಪ್ರಲ್ಹಾದ್ ಜೋಶಿ ಕಿಡಿ
ಹೈವೇನಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಹುಷಾರ್; ಇನ್ಮುಂದೆ ವಿಡಿಯೊದಲ್ಲಿ ಸಿಕ್ಕಿಬಿಳ್ತಿರಿ
ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ (Highway Road) ನಡೆಯುವ ಅಪಘಾತ ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ನಾನಾ ತಂತ್ರವನ್ನು ರೂಪಿಸುತ್ತಿದೆ. ಇದೀಗ ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಅತಿ ವೇಗ ಚಾಲನೆ ಹಾಗೂ ಸಂಚಾರ ನಿಯಮ ಉಲ್ಲಂಘನೆ (Traffic Rules) ಮೇಲೆ ಕ್ಯಾಮೆರಾ ಕಣ್ಗಾವಲಿನ ಮೂಲಕ ದಂಡ ಪ್ರಾಯೋಗಿಸಲು ಮುಂದಾಗಿದೆ.
http://vistaranews.com/karnataka/highway-road-beware-of-breaking-traffic-rules-on-highways-get-caught-in-the-video-from-now-on/469047.html
ಐಟಿ ಉದ್ಯೋಗಿಗಳಿಗೆ ಗುಡ್ ನ್ಯೂಸ್; ಅ.6ಕ್ಕೆ ಚಲ್ಲಘಟ್ಟ- ವೈಟ್‌ಫೀಲ್ಡ್ ಮೆಟ್ರೋ ಸಂಚಾರ ಆರಂಭ ಸಾಧ್ಯತೆ
ಬೆಂಗಳೂರಿನ ಐಟಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ನಮ್ಮ ಮೆಟ್ರೋ ನೇರಳೆ ಮಾರ್ಗದ ಚಲ್ಲಘಟ್ಟ- ವೈಟ್‌ಫೀಲ್ಡ್ ನಡುವೆ ಪೂರ್ಣ ಪ್ರಮಾಣದಲ್ಲಿ ಮೆಟ್ರೋ ರೈಲು (Namma Metro) ವಾಣಿಜ್ಯ ಸೇವೆ ಅಕ್ಟೋಬರ್ 6ರಂದು ಆರಂಭವಾಗುವ ಸಾಧ್ಯತೆ ಇದೆ. ಇದರಿಂದ ಹೆಚ್ಚು ಐಟಿ ಕಂಪನಿಗಳು ಇರುವ ಐಟಿಪಿಬಿ, ವೈಟ್‌ಫೀಲ್ಡ್ ಭಾಗಕ್ಕೆ ತೆರಳಲು ಲಕ್ಷಾಂತರ ಮಂದಿಗೆ ಅನುಕೂಲವಾಗಲಿದೆ.
http://vistaranews.com/karnataka/challaghatta-whitefield-metro-services-likely-to-resume-from-october-6/469573.html
ನಾಳೆ ದಕ್ಷಿಣದಲ್ಲಿ ದುರ್ಬಲ; ಉತ್ತರ, ಕರಾವಳಿಯಲ್ಲಿ ಸಾಮಾನ್ಯ ಮಳೆ
ದಕ್ಷಿಣ ಒಳನಾಡಲ್ಲಿ ನೈರುತ್ಯ ಮುಂಗಾರು (Rain News) ದುರ್ಬಲಗೊಂಡಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ (Karnataka Weather Forecast) ಸಾಮಾನ್ಯವಾಗಿದೆ. ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ 32ರಷ್ಟು ದಾಖಲಾಗಿದ್ದರೆ, ಬಾಗಲಕೋಟೆಯಲ್ಲಿ ಅತೀ ಕಡಿಮೆ ಉಷ್ಣಾಂಶ 14.2ರಷ್ಟು ದಾಖಲಾಗಿದೆ.
http://vistaranews.com/weather/karnataka-weather-forecast-weak-rainfall-in-south-interior/469582.html