ಬೆಂಗಳೂರು: ಲಿಂಗಾಯತರಿಗೆ ಪ್ರಮುಖ ಸ್ಥಾನ ವಿಚಾರದಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯಿಂದ ಸರ್ಕಾರಕ್ಕೆ ಉಂಟಾಗಿರುವ ಮುಜುಗರ, ಬಿಎಸ್‌ವೈಗೆ ಬಿಜೆಪಿ ಹೈಕಮಾಂಡ್ ನೀಡಿರುವ ಟಾಸ್ಕ್ ಸೇರಿದಂತೆ ಇಂದಿನ ಹತ್ತು ಹಲವಾರು ಪ್ರಮುಖ ಸುದ್ದಿ ಬೆಳವಣಿಗೆಗಳು (Karnataka Live News) ಇಲ್ಲಿ ನಿಮಗೆ ಸಿಗಲಿವೆ, ಗಮನಿಸಿ.
ರೈಲಿಗೆ ತಲೆಕೊಟ್ಟು ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಸಾಲಬಾಧೆಗೆ ಬೇಸತ್ತ ಒಂದೇ ಕುಟುಂಬದ ಮೂವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ತುಮಕೂರಿನ (Tumkur News) ಪಂಡಿತನಹಳ್ಳಿ ರೈಲ್ವೆ ಹಳಿ ಬಳಿ ರೈಲಿಗೆ ಸಿಲುಕಿ ತಂದೆ, ತಾಯಿ, ಮಗಳು ಮೃತಪಟ್ಟಿದ್ದಾರೆ. ಸಿದ್ದಗಂಗಯ್ಯ (62), ಸುನಂದಮ್ಮ, ಗೀತಾ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.
https://vistaranews.com/karnataka/tumakuru/tumkur-news-three-members-of-a-family-commit-suicide-by-hanging-themselves-from-train/469255.html
ಡ್ರಂಕ್ ಆ್ಯಂಡ್ ಡ್ರೈವ್‌ನಲ್ಲಿ ನಟ ನಾಗಭೂಷಣ್ ನೆಗಟಿವ್; ವಿಚಾರಣೆಗೆ ಕರೆದ ಪೊಲೀಸರು
ನಟ ನಾಗಭೂಷಣ್ (Actor Nagabhushana) ಕಾರು ಅಪಘಾತ ಪ್ರಕರಣಕ್ಕೆ (car Accident) ಸಂಬಂಧಿಸಿದ್ದಂತೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಕುಡಿದು ವಾಹನ ಚಲಾಯಿಸಿರುವ ಶಂಕೆ ಇದ್ದ ಕಾರಣಕ್ಕೆ ನಿನ್ನೆ ಭಾನುವಾರ ಪರೀಕ್ಷಗೆ ಒಳಪಡಿಸಲಾಗಿತ್ತು. ಇದೀಗ ರಕ್ತಪರೀಕ್ಷೆ ಹಾಗೂ ಮದ್ಯಪಾನದ ರಿಪೋರ್ಟ್ ನೆಗೆಟಿವ್ ಬಂದಿದೆ.
https://vistaranews.com/karnataka/bengaluru/actor-nagabhushan-tests-negative-for-drink-and-drive-police-summoned-for-questioning/469177.html
ಬೆಂಗಳೂರಲ್ಲಿ ಗಳಿಗೆಗೊಂದು ವಾತಾವರಣ; ಕರಾವಳಿಯಲ್ಲಿ ಬಿಡುವಿಲ್ಲದ ಮಳೆ
ನೈರುತ್ಯ ಮುಂಗಾರು ಕರಾವಳಿಯಲ್ಲಿ ಬಲಿಷ್ಠವಾಗಿದ್ದರೆ, ಒಳನಾಡಿನಲ್ಲಿ ಸಾಮಾನ್ಯವಾಗಿದೆ. ಮುಂದಿನ 24 ಗಂಟೆಯಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ಭಾರಿ ಮಳೆಯಾಗುವ (Rain news) ಮುನ್ಸೂಚನೆಯನ್ನು ಹವಾಮಾನ ಇಲಾಖೆ (karnataka weather forecast) ನೀಡಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯೊಂದಿಗೆ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದೆ. ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದೆ.
karnataka weather forecast : ಬೆಂಗಳೂರಲ್ಲಿ ಗಳಿಗೆಗೊಂದು ವಾತಾವರಣ; ಕರಾವಳಿಯಲ್ಲಿ ಬಿಡುವಿಲ್ಲದ ಮಳೆ