Site icon Vistara News

Karnataka live news: ಎನ್‌ಕೌಂಟರ್‌ ಸುದ್ದಿ ಸುಳ್ಳು, ಮುಸ್ಲಿಮರು ಬಳಸಿದ್ದು ಆಟಿಕೆ ತಲವಾರ್‌ ಎಂದ ಎಸ್ಪಿ

G parameshwar Shivamogga riots

ಬೆಂಗಳೂರು: ಶಿವಮೊಗ್ಗದ ಈದ್‌ ಮೆರವಣಿಗೆ ಪುಂಡಾಟಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸೆಕ್ಷನ್‌ 144 ಹಾಗೂ ರಾಜ್ಯ ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ, ಮಾತಿನ ಚಕಮಕಿ ಮುಂದುವರಿದಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿಗಳನ್ನು (Karnataka live news) ತಿಳಿಯಲು ಇಲ್ಲಿ ನೋಡಿ.

Prabhakar R

ಬೆಳಗಾವಿಯಲ್ಲಿ ಬೃಹತ್‌ ಕುರುಬ ಸಮಾವೇಶದ ಮೂಲಕ ಸಿದ್ದರಾಮಯ್ಯ ಮತ್ತೊಮ್ಮೆ ಶಕ್ತಿ ಪ್ರದರ್ಶನ

ಕಾಂಗ್ರೆಸ್‌ನಲ್ಲಿ ಲಿಂಗಾಯತ ಸಿಎಂ ಮತ್ತು ಮೂವರು ಡಿಸಿಎಂಗಳನ್ನು ಮಾಡಬೇಕು ಎಂಬ ಕೂಗು ಎದ್ದಿರುವ ಹೊತ್ತಿನಲ್ಲಿ ಸಿದ್ದರಾಮೋತ್ಸವ ಮಾದರಿಯಲ್ಲಿ ಬೃಹತ್ ಕುರುಬ ಸಮಾವೇಶ (Kuruba Conference) ನಡೆಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.

Kuruba Conference: ಬೆಳಗಾವಿಯಲ್ಲಿ ಬೃಹತ್‌ ಕುರುಬ ಸಮಾವೇಶದ ಮೂಲಕ ಸಿದ್ದರಾಮಯ್ಯ ಮತ್ತೊಮ್ಮೆ ಶಕ್ತಿ ಪ್ರದರ್ಶನ
Deepa S

ಮುಕ್ಕಾಲು ಜಿಲ್ಲೆಗೆ ಕೈಕೊಟ್ಟ ಮಳೆರಾಯ; ಮತ್ತೆ ಮುಂಗಾರು ದುರ್ಬಲ

ಸಕ್ರಿಯವಾಗಿದ್ದ ಮುಂಗಾರು ರಾಜ್ಯದಲ್ಲಿ (karnataka weather forecast) ಮತ್ತೆ ದುರ್ಬಲಗೊಂಡಿದೆ. ಅಕ್ಟೋಬರ್‌ ಮೊದಲ ವಾರದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇತ್ತು. ಆದರೆ ಇದೀಗ ವರುಣ ಕೈಕೊಟ್ಟಿದ್ದಾನೆ. ಮುಂದಿನ 24 ಗಂಟೆಯಲ್ಲಿ ಒಣ ಹವೆ ಇರಲಿದ್ದು, ಉತ್ತರ ಒಳನಾಡಿನಲ್ಲಿ ಚದುರಿದಂತೆ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.

https://vistaranews.com/weather/karnataka-weather-forecast-southwest-monsoon-weakens-in-state-rain-alert-issued-only-for-this-district/470589.html

Deepa S

ವಿಷಕಾರಿ ಹಣ್ಣಿನ ಜ್ಯೂಸ್ ಕುಡಿದ ಯುವತಿ ಸಾವು

ಮಂಗಳೂರು: ಇಲ್ಲಿನ ಸುಳ್ಯ ಬೆಳ್ಳಾರೆ ಸಮೀಪದ ಶೇಣಿ‌ ಎಂಬಲ್ಲಿ ವಿಷಕಾರಿ ಹಣ್ಣಿನ (Poison juice‌) ಜ್ಯೂಸ್ ಕುಡಿದು ಅಸ್ವಸ್ಥಗೊಂಡಿದ್ದ ಯುವತಿ (Mangaluru News) ಮೃತಪಟ್ಟಿದ್ದಾಳೆ. ಶೇಣಿಯ ಕುಳ್ಳಾಜೆ ನಿವಾಸಿ ಲೀಲಾವತಿ (35) ಮೃತ ದುರ್ದೈವಿ.

Mangaluru News : ವಿಷಕಾರಿ ಹಣ್ಣಿನ ಜ್ಯೂಸ್ ಕುಡಿದು ಯುವತಿ ಸಾವು
Deepa S

ಬಿಜಿಎಸ್‌ ಕಾಲೇಜಿನ ಉಪನ್ಯಾಸಕ ನೇಣಿಗೆ ಶರಣು; ಸಾವಿನ ಸುತ್ತ ಅನುಮಾನದ ಹುತ್ತ

ಚಿಕ್ಕಬಳ್ಳಾಪುರದ ಅವಲಗುರ್ಕಿ ಗ್ರಾಮದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಉಪನ್ಯಾಸಕರೊಬ್ಬರು (Lecturer Death) ಮೃತಪಟ್ಟಿದ್ದಾರೆ. ಸುದರ್ಶನ್ (25) ಮೃತ ಉಪನ್ಯಾಸಕ.

https://vistaranews.com/karnataka/chikkaballapura/lecturer-death-bgs-college-lecturer-commits-suicide/470510.html

Deepa S

ಮೊಬೈಲ್ ಫ್ಲಾಶ್‌ ಮಾಡಲ್ಲ ಎಂದವನಿಗೆ ಲಾಂಗ್‌ನಿಂದ ಹೊಡೆದು ಅಟ್ಟಾಡಿಸಿದ ಕಳ್ಳಿ!

ಆಕೆ ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದಳು. ಕ್ಷಣಾರ್ಧದಲ್ಲೇ ಮೊಬೈಲ್‌ ಕದ್ದು ಮಾಯವಾಗುತ್ತಿದ್ದಳು. ಹೀಗೆ ಕದ್ದ ಮೊಬೈಲ್‌ ಅನ್ನು ಪರಿಚಯಸ್ಥ ಯುವಕನ ಬಳಿ ಫ್ಲಾಶ್‌ ಮಾಡಿಸಿದ್ದಳು. ಆದರೆ ಈ ಬಾರಿ ಕದ್ದು ತಂದಿದ್ದ ಮೊಬೈಲ್‌ ಅನ್ನು ಆ ಯುವಕ ಫ್ಲಾಶ್‌ ಮಾಡಿ ಕೊಡಲ್ಲ‌ ಎಂದಿದ್ದ. ಇದಕ್ಕೆ ಸಿಟ್ಟಾದ ಕಳ್ಳಿ ಅಟ್ಟಾಡಿಸಿ ಕೊಲ್ಲಲು (Attempt to murder) ಮುಂದಾಗಿದ್ದಾಳೆ.

https://vistaranews.com/karnataka/bengaluru/attempt-to-murder-man-beaten-up-for-not-flashing-mobile-phone/470457.html

Exit mobile version