ಬೆಂಗಳೂರು: ಶಿವಮೊಗ್ಗದ ಈದ್ ಮೆರವಣಿಗೆ ಪುಂಡಾಟಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸೆಕ್ಷನ್ 144 ಹಾಗೂ ರಾಜ್ಯ ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ, ಮಾತಿನ ಚಕಮಕಿ ಮುಂದುವರಿದಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿಗಳನ್ನು (Karnataka live news) ತಿಳಿಯಲು ಇಲ್ಲಿ ನೋಡಿ.
ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್ ರೈಲು; ಎಂದಿನಂತೆ ಮೆಟ್ರೋ ಓಡಾಟ
ಅಂತೂ 12 ಗಂಟೆಗಳ ಕಾರ್ಯಾಚರಣೆ ನಡೆಸಿ ಹಳಿಯಲ್ಲಿ ಸಿಲುಕಿದ್ದ ಮೆಂಟೈನ್ಸ್ ವೆಹಿಕಲ್‌ನ್ನು ಕ್ರೇನ್ ಮೂಲಕ ಲಿಫ್ಟ್ ಮಾಡಲಾಗಿದೆ. ಅಕ್ಟೋಬರ್ 2ರ ರಾತ್ರಿ ರಾಜಾಜಿನಗರ ಮೆಟ್ರೊ (namma metro) ನಿಲ್ದಾಣದ ತಿರುವಿನಲ್ಲಿ ನಿರ್ವಹಣೆಗಾಗಿ ಹೋಗಿದ್ದ ರೈಲ್ವೆ ವಾಹನವು (ರೀ ರೈಲ್ ವಾಹನ) ಹಳಿಯಲ್ಲೇ ಸಿಲುಕಿತ್ತು. ಪರಿಣಾಮ ಅ.3ರ ಬೆಳಗ್ಗೆ ಹಸಿರು ಮಾರ್ಗದಲ್ಲಿ ಮೆಟ್ರೋ ಓಡಾಟದಲ್ಲಿ ವ್ಯತ್ಯಯ ಉಂಟಾಗಿತ್ತು. ಕೊನೆಗೂ ಮೆಂಟೈನ್ಸ್ ವೆಹಿಕಲ್ ಅನ್ನು ಕ್ರೇನ್ ಮೂಲಕ ಟ್ರ್ಯಾಕ್‌ನಿಂದ ಕೆಳಗೆ ಇಳಿಸಲಾಗಿದೆ.
https://vistaranews.com/karnataka/bengaluru/namma-metro-the-maintenance-train-finally-lifted-metro-services-as-usual/470407.html
ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?
ಬಿಗ್ ಬಾಸ್ ಹತ್ತನೇ (BBK Season 10) ಸೀಸನ್ ಗ್ರ್ಯಾಂಡ್ ಪ್ರೀಮಿಯರ್ ಅಕ್ಟೋಬರ್ 8ರ ಸಂಜೆ 6ಕ್ಕೆ ನಡೆಯಲಿದೆ. 100 ದಿನದ ಬಿಗ್ ಬಾಸ್ ಹತ್ತನೇ ಸೀಸನ್ ಆಟವು ಅ.9 ರಿಂದ ಪ್ರತಿ ರಾತ್ರಿ 9:30ಕ್ಕೆ ನಡೆಯಲಿದೆ. ಈ ಸಂಬಂಧ ಮಂಗಳವಾರ ಬಿಗ್ ಬಾಸ್ (Bigg Boss Kannada) ಟೀಂ ಸುದ್ದಿಗೋಷ್ಠಿ ನಡೆಸಿತು.
https://vistaranews.com/cinema-film/bbk-season-10-bigg-boss-to-begin-from-october-8/470320.html
Karnataka Politics : ಬಿಜೆಪಿಗೆ ಚಿಲುಮೆ ತಂದ ಸಂಕಟ! ರಾಜ್ಯ ಸರ್ಕಾರದಿಂದ ಮತ್ತೊಂದು ತನಿಖಾಸ್ತ್ರ
ಬಿಜೆಪಿ ವಿರುದ್ಧ ರಾಜ್ಯ ಸರ್ಕಾರದ ತನಿಖಾಸ್ತ್ರ ಮುಂದುವರಿದಿದೆ. ಈಗ ಮಾಜಿ ಸಚಿವ ಅಶ್ವತ್ಥನಾರಾಯಣ ವಿರುದ್ಧ ಕೇಳಿಬಂದಿದ್ದ ಮತದಾರರ ಮಾಹಿತಿ ಸೋರಿಕೆ ಹಗರಣದ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ಒಪ್ಪಿಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
Karnataka Politics : ಬಿಜೆಪಿಗೆ ಚಿಲುಮೆ ತಂದ ಸಂಕಟ! ರಾಜ್ಯ ಸರ್ಕಾರದಿಂದ ಮತ್ತೊಂದು ತನಿಖಾಸ್ತ್ರ
Caste Census Report : ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡಲಿ ಎಂದ ಬಿ.ಕೆ. ಹರಿಪ್ರಸಾದ್
2018ರಲ್ಲಿ ಸಿದ್ಧಪಡಿಸಲಾಗಿದ್ದ ಕಾಂತರಾಜು ನೇತೃತ್ವದ ಸಮಿತಿಯು ಜಾತಿಗಣತಿ ವರದಿಯನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದ್ದಾರೆ. ಈ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
Caste Census Report : ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡಲಿ ಎಂದ ಬಿ.ಕೆ. ಹರಿಪ್ರಸಾದ್
BK Hariprasad : ಹೈಕಮಾಂಡ್‌ಗೆ ನನ್ನ ಮೇಲೆ ಲವ್ ಜಾಸ್ತಿ; ನಾನೇನು ಮಾತನಾಡಲ್ಲ, ಮಾತನಾಡಿದ್ರೆ ನೋಟಿಸ್ ಕೊಡ್ತಾರೆ!
ರಾಜ್ಯ ಸರ್ಕಾರದಲ್ಲಿ ಲಿಂಗಾಯತರ ಕಡೆಗಣನೆ ಹಾಗೂ ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡಿರುವ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ನಿರಾಕರಿಸಿದ್ದಾರೆ. ಅಲ್ಲದೆ, ತಾವು ಹೆಚ್ಚಿಗೆ ಮಾತನಾಡಿದರೆ ಹೈಕಮಾಂಡ್‌ನಿಂದ ನೋಟಿಸ್ ಬರಲಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
BK Hariprasad : ಹೈಕಮಾಂಡ್‌ಗೆ ನನ್ನ ಮೇಲೆ ಲವ್ ಜಾಸ್ತಿ; ನಾನೇನು ಮಾತನಾಡಲ್ಲ, ಮಾತನಾಡಿದ್ರೆ ನೋಟಿಸ್ ಕೊಡ್ತಾರೆ!