Site icon Vistara News

Karnataka live news: ಎನ್‌ಕೌಂಟರ್‌ ಸುದ್ದಿ ಸುಳ್ಳು, ಮುಸ್ಲಿಮರು ಬಳಸಿದ್ದು ಆಟಿಕೆ ತಲವಾರ್‌ ಎಂದ ಎಸ್ಪಿ

G parameshwar Shivamogga riots

ಬೆಂಗಳೂರು: ಶಿವಮೊಗ್ಗದ ಈದ್‌ ಮೆರವಣಿಗೆ ಪುಂಡಾಟಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸೆಕ್ಷನ್‌ 144 ಹಾಗೂ ರಾಜ್ಯ ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ, ಮಾತಿನ ಚಕಮಕಿ ಮುಂದುವರಿದಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿಗಳನ್ನು (Karnataka live news) ತಿಳಿಯಲು ಇಲ್ಲಿ ನೋಡಿ.

Deepa S

ಮೆಟ್ರೋ ಟ್ರ್ಯಾಕ್‌ನಲ್ಲಿ ಲಾಕ್‌ ಆದ ಮೆಂಟೈನ್ಸ್‌ ವೆಹಿಕಲ್‌! ಮೇಲೆತ್ತಲು ಕ್ರೇನ್‌ ಬಳಕೆ

ರಾಜಾಜಿನಗರ ಮೆಟ್ರೊ (namma metro) ನಿಲ್ದಾಣದ ತಿರುವಿನಲ್ಲೇ ನಿರ್ವಹಣೆಗಾಗಿ ಹೋಗಿದ್ದ ವಾಹನವು (ರೀ ರೈಲ್ ವಾಹನ) ಹಳಿಯಲ್ಲೇ ಸಿಲುಕಿದೆ. ಪರಿಣಾಮ ಹಸಿರು ಮಾರ್ಗದಲ್ಲಿ ಮೆಟ್ರೋ ಓಡಾಟದಲ್ಲಿ ವ್ಯತ್ಯಯ ಉಂಟಾಗಿದೆ. ಮೆಂಟೈನ್ಸ್‌ ವೆಹಿಕಲ್‌ ಆಯತಪ್ಪಿ ಟ್ರ್ಯಾಕ್‌ನಿಂದ ವಾಲಿದ ಪರಿಣಾಮ ಹೀಗಾಗಿದೆ ಎನ್ನಲಾಗಿದೆ.

Namma Metro: ಮೆಟ್ರೋ ಟ್ರ್ಯಾಕ್‌ನಲ್ಲಿ ಲಾಕ್‌ ಆದ ಮೆಂಟೈನ್ಸ್‌ ವೆಹಿಕಲ್‌! ಮೇಲೆತ್ತಲು ಕ್ರೇನ್‌ ಬಳಕೆ
Deepa S

ನಟ ನಾಗಭೂಷಣ್‌ ಕಾರು ಅಪಘಾತ; ರಹಸ್ಯ ಭೇದಿಸಲು ಆರ್‌ಟಿಓ ಅಧಿಕಾರಿಗಳಿಗೆ ಪತ್ರ

ನಟ ನಾಗಭೂಷಣ್‌ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು (Actor Nagabhushana) ಮುಂದುವರಿಸಿದ್ದಾರೆ. ಈಗಾಗಲೇ ಡ್ರಂಕ್‌ ಆ್ಯಂಡ್‌ ಡ್ರೈವ್‌ನಿಂದ ಕಾರು ಅಪಘಾತ (Car Accident) ಆಗಿಲ್ಲ ಎಂದು ತಿಳಿದು ಬಂದಿದೆ. ಜತೆಗೆ ಕಾರು ಚಲಾಯಿಸುವಾಗ ಮೊಬೈಲ್‌ ಬಳಕೆ ಏನಾದರೂ ಮಾಡಿದ್ದರಾ. ಅಪಘಾತವಾಗಿದ್ದು ಹೇಗೆ ಎಂಬುದೇ ನಿಗೂಢ‌ವಾಗಿದೆ.

https://vistaranews.com/karnataka/bengaluru/actor-nagabhushana-actor-nagabhushans-car-meets-with-an-accident-letter-to-rto-officials-to-crack-mystery/470076.html

Deepa S

ಕರಾವಳಿಯಲ್ಲಿ ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಫುಲ್‌ ಸ್ಟಾಪ್‌

ರಾಜ್ಯಾದ್ಯಂತ ಮಳೆ ಅಬ್ಬರ (Rain News) ತಗ್ಗಿದೆ. ಆದರೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸಾಧಾರಣವಾಗಿದೆ. ದಕ್ಷಿಣ ಒಳನಾಡಲ್ಲಿ ನೈರುತ್ಯ ಮುಂಗಾರು ದುರ್ಬಲಗೊಂಡಿದ್ದು, ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುವ (Karnataka Weather Forecast) ಸಾಧ್ಯತೆ ಇದೆ.

https://vistaranews.com/weather/karnataka-weather-forecast-rain-forecast-for-coastal-areas-and-no-rain-in-bengaluru/469985.html

Harish Kera

ಶಿವಮೊಗ್ಗದಲ್ಲಿ ಸೆಕ್ಷನ್‌ 144 ಮುಂದುವರಿಕೆ

ಶಿವಮೊಗ್ಗ: ‌ಕಳೆದ ಎರಡು ದಿನಗಳಿಂದ ಪ್ರಕ್ಷುಬ್ಧ ವಾತಾವರಣದಲ್ಲಿದ್ದ ಶಿವಮೊಗ್ಗದಲ್ಲಿ 144 ಸೆಕ್ಷನ್ ಮುಂದುವರಿಸಲಾಗಿದ್ದು, ಸಹಜ ಜನ ಜೀವನದತ್ತ ಸಾಗುತ್ತಿದೆ. ಬೆಳಗ್ಗೆ 7 ರಿಂದ ಸಂಜೆ 7 ರ ವರೆಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದ್ದು, ಆಯಕಟ್ಟಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ.

Harish Kera

ನಮ್ಮ ಮೆಟ್ರೋ ಸಂಚಾರದಲ್ಲಿ ಭಾರಿ ವ್ಯತ್ಯಯ

ಬೆಂಗಳೂರು: ರಾಜಾಜಿನಗರ ಮೆಟ್ರೋ ರೈಲು ನಿಲ್ದಾಣದಲ್ಲಿ ರಿರೈಲ್‌ ಟ್ರ್ಯಾಕ್‌ ತಪ್ಪಿದ ಪರಿಣಾಮ, ಯಶವಂತಪುರ ಹಾಗೂ ಮಂತ್ರಿ ಮಾಲ್‌ ನಡುವಿನ ಹಸಿರು ಮಾರ್ಗದ ಮೆಟ್ರೋ ಸಂಚಾರ ನಿಂತುಹೋಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ಜನ ತುಂಬಿ ತುಳುಕುತ್ತಿದ್ದು, ಸಂಚಾರ ಭಾರಿ ವ್ಯತ್ಯಯ ಉಂಟಾಗಿದೆ.

Exit mobile version