ಬೆಂಗಳೂರು: ಚಿತ್ರದುರ್ಗದ ಕಾವಾಡಿಗರ ಹಟ್ಟಿಯಲ್ಲಿ ನಡೆದ ವಿಷ ಜಲ ದುರಂತದಲ್ಲಿ ಆರನೇ ಜೀವ ಬಲಿಯಾಗಿದೆ. ತಾಯಿಯ ಹೊಟ್ಟೆಯೊಳಗಿದ್ದ ಮಗುವೇ ಪ್ರಾಣ ಕಳೆದುಕೊಂಡಿದೆ. ಇದೂ ಸೇರಿದಂತೆ ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿ ಬೆಳವಣಿಗೆಗಳಿಗಾಗಿ (Karnataka Live News) ಇಲ್ಲಿ ಗಮನಿಸಿ.
ಸಾಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಪ್ರಯಾಣಿಕರು ಗಂಭೀರ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಉಳ್ಳೂರು ಸಮೀಪದ ಸಂಪಿಗೆಸರ ಬಳಿ ಕೆಎಸ್ಆರ್‌ಟಿಸಿ ಬಸ್ ಪಲ್ಟಿ (Road Accident) ಆಗಿದೆ. ದ್ವಿಚಕ್ರ ವಾಹನ ಸವಾರನನ್ನು ತಪ್ಪಿಸಲು ಹೋಗಿ ಹೆದ್ದಾರಿ ಪಕ್ಕದ ಹಳ್ಳಕ್ಕೆ ಬಸ್ (Ksrtc bus) ಪಲ್ಟಿ ಆಗಿದೆ.
Road Accident : ಸಾಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ; ಪ್ರಯಾಣಿಕರು ಗಂಭೀರ
ಕುಡಿದ ಅಮಲಿನಲ್ಲಿ ಸ್ನೇಹಿತನಿಗೆ ಚಾಕು ಹಾಕಿದ
ಪ್ರತ್ಯೇಕ ಕಡೆಗಳಲ್ಲಿ ಚಾಕು ಇರಿತ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಲ್ಲಿ ಸ್ನೇಹಿತರೇ ಗಲಾಟೆ ಮಾಡಿಕೊಂಡಿದ್ದರೆ, ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿಯಲಾಗಿದೆ.
Attempt To Murder : ಕುಡಿದ ಅಮಲಿನಲ್ಲಿ ಸ್ನೇಹಿತನಿಗೆ ಚಾಕು ಹಾಕಿದ
ಯಾವನೋ ಅವನು ಬಾಸ್ ಅಂದಿದ್ದಕ್ಕೆ ಲಾಂಗ್‌ನಿಂದ ಹಲ್ಲೆ
ಏರಿಯಾದಲ್ಲಿ ನಮ್ಮದೇ ಹವಾ ಇರಬೇಕು. ಎಲ್ಲರೂ ನನ್ನನ್ನು ಬಾಸ್ ಎಂದರೆ ಓಕೆ, ಇಲ್ಲದಿದ್ದರೇ ಜೋಕೆ ಎಂದು ಪುಡಿ ರೌಡಿಯೊಬ್ಬ ದಾಂಧಲೆ (Assault Case) ನಡೆಸಿದ್ದಾನೆ. ಮಂಡ್ಯದ ಹೊಳಲು ಗ್ರಾಮದಲ್ಲಿ ಯುವಕನ ಮೇಲೆ ಪುಡಿ ರೌಡಿಗಳ ಗ್ಯಾಂಗ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ. ಮಾದ ಅಲಿಯಾಸ್ ಮಾದಪ್ಪ ಎಂಬಾತ ಗ್ಯಾಂಗ್ ಕಟ್ಟಿಕೊಂಡು ಶಾರಂತ್ (29) ಎಂಬಾತ ಮೇಲೆ ಹಲ್ಲೆ ನಡೆಸಿದ್ದಾರೆ.
Assault case : ಯಾವನೋ ಅವನು ಬಾಸ್ ಅಂದಿದ್ದಕ್ಕೆ ಲಾಂಗ್‌ನಿಂದ ಹಲ್ಲೆ
ಬೈಕ್‌ಗೆ ಲಾರಿ ಡಿಕ್ಕಿ; ಸವಾರನ ದೇಹ ಛಿದ್ರ ಛಿದ್ರ
ಹಾವೇರಿಯಲ್ಲಿ ಬೈಕ್ ಸವಾರನ ಮೇಲೆ ಲಾರಿಯೊಂದು ಹರಿದ ಪರಿಣಾಮ ಸ್ಥಳದಲ್ಲೇ ಸವಾರ ಪ್ರಾಣ ಕಳೆದುಕೊಂಡಿದ್ದರೆ, ಇತ್ತ ಸಾಲಭಾದೆಗೆ ಅಂಜಿ ಧಾರವಾಡದಲ್ಲಿ ರೈತ ಆತ್ಮಹತ್ಯೆಗೆ (Self Harming )ಶರಣಾಗಿದ್ದಾರೆ.
Road Accident : ಬೈಕ್‌ಗೆ ಲಾರಿ ಡಿಕ್ಕಿ; ಸವಾರನ ದೇಹ ಛಿದ್ರ ಛಿದ್ರ
ವಂಚಕ ಕೊಟ್ಟ ದೂರಿಗೆ ಕೇರಳದಲ್ಲಿ ಜೈಲುಪಾಲಾಗಿದ್ದ ಸೈಬರ್ ಕ್ರೈಂ ಪೊಲೀಸರು ಅಮಾನತು
ವಂಚನೆ ಪ್ರಕರಣವೊಂದರಲ್ಲಿ ತನಿಖೆ ನಡೆಸಲು ಹೋಗಿದ್ದ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು (Cyber Crime Police) ಕೇರಳದಲ್ಲಿ ಬಂಧಿತರಾಗಿದ್ದರು. ಸದ್ಯ ಜಾಮೀನು ಪಡೆದು ಹೊರ ಬಂದಿರುವ ನಾಲ್ವರನ್ನು ಎಸಿಪಿ ವರದಿ ಆಧರಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ (Bengaluru City Police Commissioner Dayanand) ಎಲ್ಲರನ್ನೂ ಅಮಾನತು ಮಾಡಿದ್ದಾರೆ.
ವಂಚಕ ಕೊಟ್ಟ ದೂರಿಗೆ ಕೇರಳದಲ್ಲಿ ಜೈಲುಪಾಲಾಗಿದ್ದ ಸೈಬರ್ ಕ್ರೈಂ ಪೊಲೀಸರು ಅಮಾನತು!