ಬೆಂಗಳೂರು: ಚಿತ್ರದುರ್ಗದ ಕಾವಾಡಿಗರ ಹಟ್ಟಿಯಲ್ಲಿ ನಡೆದ ವಿಷ ಜಲ ದುರಂತದಲ್ಲಿ ಆರನೇ ಜೀವ ಬಲಿಯಾಗಿದೆ. ತಾಯಿಯ ಹೊಟ್ಟೆಯೊಳಗಿದ್ದ ಮಗುವೇ ಪ್ರಾಣ ಕಳೆದುಕೊಂಡಿದೆ. ಇದೂ ಸೇರಿದಂತೆ ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿ ಬೆಳವಣಿಗೆಗಳಿಗಾಗಿ (Karnataka Live News) ಇಲ್ಲಿ ಗಮನಿಸಿ.
ರಾಜ್ಯದಲ್ಲಿಂದು ಎಲ್ಲೆಲ್ಲಿ ಗುಡುಗು ಸಹಿತ ಮಳೆ?
ಹವಾಮಾನ ಇಲಾಖೆಯು ಮತ್ತೆ ಮಳೆ (rain news) ಮುನ್ಸೂಚನೆಯನ್ನು ನೀಡಿದೆ. ನೈರುತ್ಯ ಮುಂಗಾರು ದುರ್ಬಲಗೊಂಡಿದ್ದರೂ ಕರಾವಳಿಯ ಹಲವು ಕಡೆ ಹಾಗೂ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗುವ (weather report) ಸಾಧ್ಯತೆ ಇದೆ.
Weather report: ರಾಜ್ಯದಲ್ಲಿಂದು ಎಲ್ಲೆಲ್ಲಿ ಗುಡುಗು ಸಹಿತ ಮಳೆ?
ವಿದೇಶ ಪ್ರವಾಸದಿಂದ ಮರಳಿದ ಕುಮಾರಸ್ವಾಮಿ
ಬೆಂಗಳೂರು: ಕುಟುಂಬ ಸಮೇತ ಯುರೋಪ್‌ಗೆ ಪ್ರವಾಸಕ್ಕೆ ಹೋಗಿದ್ದ ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ ಬೆಂಗಳೂರಿಗೆ ಮರಳಿದ್ದಾರೆ. ಏರ್‌ಪೋರ್ಟ್‌ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಎಚ್‌ಡಿಕೆ, ಸರ್ಕಾರ ಪತನಕ್ಕೆ ಸಿಂಗಾಪುರದಲ್ಲಿ ಷಡ್ಯಂತ್ರ ಮಾಡಲಾಗ್ತಿದೆ ಎಂದಿದ್ದ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.