ಬೆಂಗಳೂರು: ರಾಜ್ಯದಲ್ಲೂ ಜಾತಿಗಣತಿಗೆ ಹೆಚ್ಚಿದ ಬೇಡಿಕೆ, ಜೆಡಿಎಸ್‌ನಿಂದ ಹೊರಬರಲು ನಿರ್ಧರಿಸಿರುವ ಸಿ.ಎಂ. ಇಬ್ರಾಹಿಂ ಸುದ್ದಿಗೋಷ್ಠಿ , ಶಿವಮೊಗ್ಗದ ಪರಿಸ್ಥಿತಿ ಮುಂತಾದ ರಾಜ್ಯದ ಇಂದಿನ ಮಹತ್ವದ ಸುದ್ದಿ ಬೆಳವಣಿಗೆಗಳನ್ನು (Karnataka Live News) ಹಿಂಬಾಲಿಸಲು ಇಲ್ಲಿ ಗಮನಿಸಿ.
ಸಿಹಿ ಸುದ್ದಿ ನೀಡಿದ ಆಹಾರ ಇಲಾಖೆ; ಅ.5ರಿಂದ ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಅವಕಾಶ
ಪಡಿತರ ಚೀಟಿದಾರರಿಗೆ ಆಹಾರ ಇಲಾಖೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ಗೃಹಲಕ್ಷ್ಮಿ, ಅನ್ನ ಭಾಗ್ಯ ಸೇರಿ ವಿವಿಧ ಸರ್ಕಾರಿ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಹಣ ಜಮೆ ಆಗುವಲ್ಲಿ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್‌ನಲ್ಲಿ (Ration Card) ಫಲಾನುಭವಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಮಾಡಲು ಅ.5ರಿಂದ ಅವಕಾಶ ನೀಡಲಾಗಿದೆ.
http://vistaranews.com/karnataka/bpl-card-correction-allowed-from-october-5/471747.html
ನಾಳೆ ವಾಟಾಳ್ ನೇತೃತ್ವದಲ್ಲಿ ಕೆಆರ್‌ಎಸ್ ಮುತ್ತಿಗೆ; ಬೆಂಗಳೂರಿನಿಂದ ಬೃಹತ್ ರ‍್ಯಾಲಿ
ರಾಜ್ಯದಲ್ಲಿ ಕಾವೇರಿಗಾಗಿ (Cauvery Water Dispute) ಎದ್ದಿದ್ದ ಕಿಚ್ಚಿನ ಜ್ವಾಲೆ ಮತ್ತೊಮ್ಮೆ ಕಾವು ಪಡೆಯೋಕೆ ಸಜ್ಜಾಗಿದೆ. ಈಗಾಗಲೇ ಕರ್ನಾಟಕ ಬಂದ್ ಮೂಲಕ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕನ್ನಡ ಪರ ಸಂಘಟನೆಗಳು, ಅ.5ರಂದು ಕನ್ನಡಪರ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಮರಕ್ಕೆ ರಣಕಹಳೆ ಊದಿವೆ.
Cauvery Water Dispute: ನಾಳೆ ವಾಟಾಳ್ ನೇತೃತ್ವದಲ್ಲಿ ಕೆಆರ್‌ಎಸ್ ಮುತ್ತಿಗೆ; ಬೆಂಗಳೂರಿನಿಂದ ಬೃಹತ್ ರ‍್ಯಾಲಿ
ಬಿಬಿಎಂಪಿ ಸಮೀಕ್ಷೆ; ಬೆಂಗಳೂರಿನಲ್ಲಿವೆ 2.8 ಲಕ್ಷ ಬೀದಿ ನಾಯಿಗಳು
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಮೀಕ್ಷೆ ವರದಿ ಬಿಡುಗಡೆಯಾಗಿದೆ. ನಾಲ್ಕು ವರ್ಷಗಳ ಬಳಿಕ ಪಾಲಿಕೆಯಿಂದ ಬೀದಿ ನಾಯಿಗಳ ಸಮೀಕ್ಷೆ ಮಾಡಲಾಗಿದ್ದು, ಬಿಬಿಎಂಪಿಯ ಎಂಟು ವಲಯಗಳಲ್ಲಿ ಒಟ್ಟು 2,79,335 ಬೀದಿ ನಾಯಿಗಳಿವೆ ಎಂದು ಸಮೀಕ್ಷೆಯಲ್ಲಿ (Street Dogs Survey) ತಿಳಿದುಬಂದಿದೆ.
Street Dogs Survey: ಬಿಬಿಎಂಪಿ ಸಮೀಕ್ಷೆ; ಬೆಂಗಳೂರಿನಲ್ಲಿವೆ 2.8 ಲಕ್ಷ ಬೀದಿ ನಾಯಿಗಳು
5 ಸಾವಿರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುತ್ತೇವೆ: ಸಿದ್ದರಾಮಯ್ಯ
ಸಾವಿರಾರು ವರ್ಷಗಳಿಂದ ನಾವೆಲ್ಲಾ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದೆವು. ಬ್ರಿಟಿಷರು ಬಂದ ಮೇಲೆ ಶಿಕ್ಷಣದ ಅವಕಾಶಗಳು ತೆರೆದುಕೊಂಡವು. ಡಾ.ಬಿ.ಆರ್.ಅಂಬೇಡ್ಕರ್ ಅವರ ಕಾರಣದಿಂದ ವಂಚಿತರೆಲ್ಲರಿಗೂ ಶಿಕ್ಷಣ ಮೂಲಭೂತ ಹಕ್ಕಾಯಿತು. ಈ ಕಾರಣಕ್ಕೇ ನಾವೆಲ್ಲರೂ ಶಿಕ್ಷಿತರಾಗಬೇಕು. ಶಿಕ್ಷಣ ನಮ್ಮನ್ನು ಸ್ವಾಭಿಮಾನಿಯನ್ನಾಗಿಸಿ ಶೋಷಣೆಯಿಂದ ಮುಕ್ತಗೊಳಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Banjara Bhavan: 5 ಸಾವಿರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುತ್ತೇವೆ: ಸಿದ್ದರಾಮಯ್ಯ
ಬಿಬಿಎಂಪಿ ಮುಖ್ಯ ಆಯುಕ್ತರ ಕೊರಳಿಗೆ ಸುತ್ತಿಕೊಂಡ ಚಿಲುಮೆ ಹಗರಣ
ಚಿಲುಮೆ ಸಂಸ್ಥೆಯ ಹಗರಣ ಇದೀಗ ಬಿಬಿಎಂಪಿ ಮುಖ್ಯ ಆಯುಕ್ತರ ಕೊರಳಿಗೆ ಸುತ್ತಿಕೊಂಡಿದೆ. ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಚಿಲುಮೆ ಹಗರಣಕ್ಕೆ (Chilume Case) ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧವೇ ತನಿಖೆಗೆ ಆದೇಶ ನೀಡಿದೆ.
Chilume Case: ಬಿಬಿಎಂಪಿ ಮುಖ್ಯ ಆಯುಕ್ತರ ಕೊರಳಿಗೆ ಸುತ್ತಿಕೊಂಡ ಚಿಲುಮೆ ಹಗರಣ