Site icon Vistara News

Karnataka Live News: ಜೆಡಿಎಸ್‌ನಲ್ಲಿ ರಾಜ್ಯಾಧ್ಯಕ್ಷರಿಗೆ ನಿರ್ಧಾರ ಮಾಡುವ ಹಕ್ಕಿಲ್ಲವೆಂದ ಸಿ.ಎಂ. ಇಬ್ರಾಹಿಂ

karnataka live news

ಬೆಂಗಳೂರು: ರಾಜ್ಯದಲ್ಲೂ ಜಾತಿಗಣತಿಗೆ ಹೆಚ್ಚಿದ ಬೇಡಿಕೆ, ಜೆಡಿಎಸ್‌ನಿಂದ ಹೊರಬರಲು ನಿರ್ಧರಿಸಿರುವ ಸಿ.ಎಂ. ಇಬ್ರಾಹಿಂ ಸುದ್ದಿಗೋಷ್ಠಿ , ಶಿವಮೊಗ್ಗದ ಪರಿಸ್ಥಿತಿ ಮುಂತಾದ ರಾಜ್ಯದ ಇಂದಿನ ಮಹತ್ವದ ಸುದ್ದಿ ಬೆಳವಣಿಗೆಗಳನ್ನು (Karnataka Live News) ಹಿಂಬಾಲಿಸಲು ಇಲ್ಲಿ ಗಮನಿಸಿ.

Adarsha Anche

JDS Politics : ಮೈತ್ರಿ ಬಗ್ಗೆ ಜೆಡಿಎಸ್‌ನ 19 ಶಾಸಕರಲ್ಲಿ ಅಸಮಾಧಾನ; ಗಾಂಧೀಜಿ ಎಲೆಕ್ಷನ್‌ಗೆ ನಿಂತರೂ 20 ಕೋಟಿ ರೂ ಬೇಕು!

ಬಿಜೆಪಿ – ಜೆಡಿಎಸ್‌ ಮೈತ್ರಿ ಬಗ್ಗೆ ಪಕ್ಷದೊಳಗೆ ಇನ್ನೂ ಅಸಮಾಧಾನ ಇದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ. ಅಲ್ಲದೆ, ತಾವು ಮುಂದೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

https://vistaranews.com/karnataka/jds-politics-19-party-mlas-still-unhappy-with-alliance-with-bjp-says-cm-ibrahim/471295.html

Adarsha Anche

Hubballi Riots : ಹುಬ್ಬಳ್ಳಿ ಗಲಭೆ ಕೈಬಿಡುವಂತೆ ಡಿಕೆಶಿ ಪತ್ರ ಬರೆದಿದ್ದರಲ್ಲಿ ಏನು ತಪ್ಪಿದೆ? ಗೃಹ ಸಚಿವ ಪರಮೇಶ್ವರ್‌

ಕಳೆದ ವರ್ಷ ಹುಬ್ಬಳ್ಳಿ ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿದ್ದ ಪ್ರಕರಣದ ಬಗ್ಗೆ ಮರು ಪರಿಶೀಲನೆ ಮಾಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಗೃಹ ಸಚಿವರಿಗೆ ಪತ್ರ ಬರೆದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಲ್ಲದೆ, ಈ ಪತ್ರದ ಬಗ್ಗೆ ಡಾ. ಜಿ. ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದು, ನಾನಿನ್ನೂ ಪತ್ರವನ್ನು ನೋಡಿಲ್ಲ. ಒಂದು ವೇಳೆ ಅವರು ಪತ್ರ ಬರೆದಿದ್ದರೆ ಏನು ತಪ್ಪು ಎಂದು ಪ್ರಶ್ನೆ ಮಾಡಿದ್ದಾರೆ.

https://vistaranews.com/politics/what-is-wrong-in-dk-shivakumar-letter-to-call-off-hubballi-riots-says-g-parameshwara/471085.html

Adarsha Anche

karnataka weather forecast : ರಾಜ್ಯದ ಬಹುತೇಕ ಕಡೆ ಬಿಸಿಲೇ ಹೆಚ್ಚು; ಸದ್ಯ ಮಳೆ ಸುರಿದರೂ ಬೊಗಸೆಯಷ್ಟು!

ರಾಜ್ಯಾದ್ಯಂತ ಮುಂಗಾರು ದುರ್ಬಲಗೊಂಡಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ಉಲ್ಲೇಖಿಸಿದೆ. ಉಳಿದಂತೆ ಒಣ ಹವೆ ಇರಲಿದೆ ಎಂದು ಹೇಳಲಾಗಿದೆ.

karnataka weather forecast : ರಾಜ್ಯದ ಬಹುತೇಕ ಕಡೆ ಬಿಸಿಲೇ ಹೆಚ್ಚು; ಸದ್ಯ ಮಳೆ ಸುರಿದರೂ ಬೊಗಸೆಯಷ್ಟು!
Harish Kera

ಶಿವಮೊಗ್ಗ ಶಾಂತ, ರಾಗಿಗುಡ್ಡದಲ್ಲಿ ಸೆಕ್ಷನ್‌ 144

ಶಿವಮೊಗ್ಗ: ಇಲ್ಲಿನ ರಾಗಿಗುಡ್ಡದಲ್ಲಿ ನಡೆದಿದ್ದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಶಾಂತವಾಗಿದ್ದು, ಸೆಕ್ಷನ್‌ 144 ಹಿಂದೆಗೆದುಕೊಳ್ಳಲಾಗಿದೆ. ಆದರೆ ರಾಗಿಗುಡ್ಡದಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಮುಂದುವರಿಸಲಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಮುಂದುವರಿದಿದೆ.

Harish Kera

ಜಾತಿಗಣತಿ ಪರ ಗೃಹ ಸಚಿವರ ಬ್ಯಾಟಿಂಗ್

ಬೆಂಗಳೂರು: ರಾಜ್ಯದಲ್ಲಿ ಹೆಚ್ಚಿನ ಮೀಸಲಾತಿಗೆ ಕೂಗು ಕೇಳಿಬರುತ್ತಿದೆ. ಹೀಗಾಗಿ ಜಾತಿಗಣತಿ ವರದಿಯಿಂದ ಅನುಕೂಲವಾಗಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ. ಸಮಿತಿ ಶೀಘ್ರವೇ ವರದಿ ಸಲ್ಲಿಸಲಿದೆ ಎಂದಿದ್ದಾರೆ.

Exit mobile version