ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಅಧಿಕೃತ ಸರ್ಕಾರಿ ನಿವಾಸ ಕಾವೇರಿಗೆ ಇಂದು ಶಿಫ್ಟ್ ಆಗುತ್ತಿದ್ದಾರೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿ ಬೆಳವಣಿಗೆಗಳನ್ನು (Karnataka live news) ಇಲ್ಲಿ ಗಮನಿಸಿ.
ಖಾಸಗಿ ಶಾಲಾ ಬಸ್‌ನಿಂದ ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು
ಖಾಸಗಿ ಶಾಲಾ ಬಸ್‌ನಿಂದ ಬಿದ್ದು 4ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ. ಬಿಜಿಎಸ್ ಪಬ್ಲಿಕ್ ಸ್ಕೂಲ್ ಬಸ್‌ನಿಂದ ವಿದ್ಯಾರ್ಥಿ ಆಯತಪ್ಪಿ ಕೆಳಗೆ ಬಿದ್ದಾಗ, ತಲೆ ಮೇಲೆ ಚಕ್ರ ಹರಿದಿದ್ದರಿಂದ ದುರಂತ (Bus Accident) ಸಂಭವಿಸಿದೆ.
Bus Accident: ಖಾಸಗಿ ಶಾಲಾ ಬಸ್‌ನಿಂದ ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು
ಉತ್ತರ ಕರ್ನಾಟಕದಲ್ಲಿ ಇನ್ನೊಂದು ವಾರ ಭರ್ಜರಿ ಮಳೆ; ಯೆಲ್ಲೋ ಅಲರ್ಟ್ ಘೋಷಣೆ
ರಾಜ್ಯಾದ್ಯಂತ ಇನ್ನೊಂದು ವಾರ ಭಾರಿ ಮಳೆಯಾಗುವ (Rain News) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
Weather Report : ಉತ್ತರ ಕರ್ನಾಟಕದಲ್ಲಿ ಇನ್ನೊಂದು ವಾರ ಭರ್ಜರಿ ಮಳೆ; ಯೆಲ್ಲೋ ಅಲರ್ಟ್ ಘೋಷಣೆ
ಮೈಸೂರಲ್ಲಿ ಹುಲಿ ದಾಳಿ; ಮರದಡಿ ಕುಳಿತಿದ್ದ ಬಾಲಕ ಬಲಿ
ಮೈಸೂರಲ್ಲಿ (Mysore news) ಮತ್ತೆ ನರಹಂತಕ ವ್ಯಾಘ್ರ ಹುಲಿ ದಾಳಿ ಮುಂದುವರಿದಿದ್ದು, 7 ವರ್ಷದ ಬಾಲಕನೊಬ್ಬ (Tiger attack) ಬಲಿಯಾಗಿದ್ದಾನೆ. ಚರಣ್ ನಾಯಕ್ (7) ಮೃತ ಬಾಲಕ.
Tiger attack : ಮೈಸೂರಲ್ಲಿ ಹುಲಿ ದಾಳಿ; ಮರದಡಿ ಕುಳಿತಿದ್ದ ಬಾಲಕ ಬಲಿ
ಜ್ಯೂಸ್ ಎಂದು ಕೀಟನಾಶಕ ಸೇವಿಸಿದ 2 ವರ್ಷದ ಮಗು ಸಾವು
ಜ್ಯೂಸ್ ಎಂದು ಕೀಟನಾಶಕ (Pesticide) ಸೇವಿಸಿದ 2 ವರ್ಷದ ಗಂಡು ಮಗುವೊಂದು (Child Death) ದಾರುಣವಾಗಿ ಮೃತಪಟ್ಟಿದೆ. ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಭಾನುವಾರ ಈ ದುರ್ಘಟನೆ ನಡೆದಿದೆ. ಗ್ರಾಮದ ಹನುಮಂತು ಹಾಗೂ ಪುಷ್ಪ ದಂಪತಿಯ ಪುತ್ರ ಯಶ್ವಿಕ್ (2) ಮೃತ ದುರ್ದೈವಿ.
Child Death : ಜ್ಯೂಸ್ ಎಂದು ಕೀಟನಾಶಕ ಸೇವಿಸಿದ 2 ವರ್ಷದ ಮಗು ಸಾವು