ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಅಧಿಕೃತ ಸರ್ಕಾರಿ ನಿವಾಸ ಕಾವೇರಿಗೆ ಇಂದು ಶಿಫ್ಟ್ ಆಗುತ್ತಿದ್ದಾರೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿ ಬೆಳವಣಿಗೆಗಳನ್ನು (Karnataka live news) ಇಲ್ಲಿ ಗಮನಿಸಿ.
ಕೈ ತೋರಿದರೂ ನಿಲ್ಲಿಸದ ಬಸ್; ಸಿಟ್ಟಿಗೆದ್ದ ವಿದ್ಯಾರ್ಥಿಗಳಿಂದ ಕಲ್ಲೆಸೆತ, ಗಾಜು ಪೀಸ್ ಪೀಸ್
ದೊಡವಾಡ ಗ್ರಾಮದಿಂದ ಬೈಲಹೊಂಗಲಕ್ಕೆ ಬಸ್ ಹೊರಟಿತ್ತು. ವಿದ್ಯಾರ್ಥಿಗಳು ಬಸ್ ನಿಲ್ಲಿಸುವಂತೆ ಕೈ ತೋರಿಸಿದ್ದಾರೆ. ಆದರೆ ಚಾಲಕ ನಿಲ್ಲಿಸದೆ ಬಸ್ ಮುಂದಕ್ಕೆ ಹೋಗಿದೆ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಬಸ್ಸಿಗೆ ಕಲ್ಲು ಎಸೆದು ಆಕ್ರೋಶ ಹೊರ ಹಾಕಿದ್ದಾರೆ.
Shakti Scheme : ಕೈ ತೋರಿದರೂ ನಿಲ್ಲಿಸದ ಬಸ್; ಸಿಟ್ಟಿಗೆದ್ದ ವಿದ್ಯಾರ್ಥಿಗಳಿಂದ ಕಲ್ಲೆಸೆತ, ಗಾಜು ಪೀಸ್ ಪೀಸ್!
ಎಚ್‌ಡಿ ಕುಮಾರಸ್ವಾಮಿ ಬಳಿಕ ಈಗ ರಾಜ್ಯಪಾಲರ ಮೇಲೆ ಸೈಬರ್ ವಂಚಕರ ಕಣ್ಣು!
ಇತ್ತೀಚೆಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರ ಫೇಸ್‌ಬುಕ್ ಪೇಜ್ ಹ್ಯಾಕ್ ಆಗಿತ್ತು. ಈಗ ಸೈಬರ್ ವಂಚಕರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ (Cyber Crime) ತೆರೆದಿದ್ದಾರೆ.
Cyber Crime : ಎಚ್‌ಡಿ ಕುಮಾರಸ್ವಾಮಿ ಬಳಿಕ ಈಗ ರಾಜ್ಯಪಾಲರ ಮೇಲೆ ಸೈಬರ್ ವಂಚಕರ ಕಣ್ಣು!
ಪತ್ರಕರ್ತನ ಮೇಲೆ ದಾಳಿ ಮಾಡಿದ್ದ ಚಿರತೆ ನಿಗೂಢ ಸಾವು!
ಬೀದರ್‌ನ ಕಾರಂಜಾ ಡ್ಯಾಂ ಹಿನ್ನೀರಿನಲ್ಲಿ ಚಿರತೆ ಮೃತದೇಹವು ಪತ್ತೆ ಆಗಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಚಿಕ್ಕಮಗಳೂರಿನ ಶಿವಗಂಗಾ ಗಿರಿಯಲ್ಲಿ ಮೂರು ಚಿರತೆಗಳು (Leopard Attack) ಪತ್ತೆಯಾಗಿವೆ.
Leopard Death : ಪತ್ರಕರ್ತನ ಮೇಲೆ ದಾಳಿ ಮಾಡಿದ್ದ ಚಿರತೆ ನಿಗೂಢ ಸಾವು!
ಮಳೆಗೆ ಮನೆ ಗೋಡೆ ಕುಸಿತ; 100ಕ್ಕೂ ಹೆಚ್ಚು ಕುರಿಗಳ ಸಾವು!
ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಕೊರವಿ ಗ್ರಾಮದಲ್ಲಿ ಸತತ ಮಳೆಗೆ (Rain news) ಮನೆ ಗೋಡೆ ಕುಸಿದು (wall collapses) 100ಕ್ಕೂ ಅಧಿಕ ಕುರಿಗಳು (sheep Dead) ಮೃತಪಟ್ಟಿವೆ. ಮಲ್ಲಪ್ಪ ಪೂಜಾರಿ ಮತ್ತು ಅಣ್ಣಪ್ಪ ಪೂಜಾರಿ ಎಂಬುವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ.
Rain News : ಮಳೆಗೆ ಮನೆ ಗೋಡೆ ಕುಸಿತ; 100ಕ್ಕೂ ಹೆಚ್ಚು ಕುರಿಗಳ ಸಾವು!
ಬೆಂಗಳೂರು ಸೇರಿ ಹಲವೆಡೆ ಬಿರುಗಾಳಿ ಸಹಿತ ಮಳೆ!
ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಒಳನಾಡಿನಲ್ಲಿ ಮುಂಗಾರು ಚುರುಕುಗೊಂಡಿದ್ದು, ಮುಂದಿನ 24 ಗಂಟೆಯಲ್ಲಿ ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಗುಡುಗು ಸಹಿತ (weather report) ಮಳೆಯಾಗಲಿದೆ. ಕರಾವಳಿಯ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ (Rain news) ಸೂಚನೆ ಇದೆ.
Weather report : ಬೆಂಗಳೂರು ಸೇರಿ ಹಲವೆಡೆ ಬಿರುಗಾಳಿ ಸಹಿತ ಮಳೆ!