ಇನ್ನೂ 15 ವರ್ಷ ಚಲಾವಣೆಯಲ್ಲಿರುವೆ ಎಂದ ವಿ. ಸೋಮಣ್ಣ!
ನಾನಿನ್ನೂ 10-15 ವರ್ಷಗಳ ಕಾಲ ಚಲಾವಣೆಯಲ್ಲಿ ಇರುತ್ತೇನೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಸೇವೆಯಲ್ಲಿ ಇರುತ್ತೇನೆ ಎಂದು ಹೇಳುವ ಮೂಲಕ ಮಾಜಿ ಸಚಿವ ವಿ. ಸೋಮಣ್ಣ (V Somanna) ಬಿಜೆಪಿ ನಾಯಕರಿಗೆ ಪರೋಕ್ಷ ಸಂದೇಶವನ್ನು ರವಾನೆ ಮಾಡಿದ್ದಾರೆ. ವಿ.ಸೋಮಣ್ಣ ಪ್ರತಿಷ್ಠಾನದಿಂದ ಸಿದ್ದಗಂಗಾ ಮಠದಲ್ಲಿ ನಿರ್ಮಾಣಗೊಂಡಿರುವ ನೂತನ ಗುರುಭವನ ಕಟ್ಟಡದ ಉದ್ಘಾಟನೆ ವೇಳೆ ಮಾತಾನಾಡಿದರು.
V Somanna : ಇನ್ನೂ 15 ವರ್ಷ ಚಲಾವಣೆಯಲ್ಲಿರುವೆ ಎಂದ ವಿ. ಸೋಮಣ್ಣ!
ಜಾತಿ ಕಾರಣಕ್ಕೆ ಕಚೇರಿ ಪ್ರವೇಶ ಸಿಗಲಿಲ್ಲ ಎಂಬ ಗೂಳಿಹಟ್ಟಿ ಆರೋಪ ತಳ್ಳಿಹಾಕಿದ ಆರ್‌ಎಸ್‌ಎಸ್
ಜಾತಿ ಕಾರಣಕ್ಕೆ ನಾಗಪುರದ ಆರ್‌ಎಸ್‌ಎಸ್ ಕಚೇರಿಯೊಳಗೆ ತಮಗೆ ಪ್ರವೇಶ ನಿರಾಕರಿಸಲಾಯಿತು ಎಂಬ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ (Gulihatty D Shekhar) ಆರೋಪವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಸ್ಪಷ್ಟವಾಗಿ ತಳ್ಳಿಹಾಕಿದೆ. ನಾಗಪುರದಲ್ಲಿ ಸಂಘ ಕಾರ್ಯಾಲಯವನ್ನು ನೋಡಲು ಬಂದವರ ಹೆಸರನ್ನು ನೋಂದಾಯಿಸಿ ಪ್ರವೇಶ ನೀಡುವ ವ್ಯವಸ್ಥೆಯೇ ಇಲ್ಲ. ಇದೊಂದು ನಿರಾಧಾರದ ಹಾಗೂ ಹುರುಳಿಲ್ಲದ ಆರೋಪ ಎಂದು ಆರ್‌ಎಸ್‌ಎಸ್ ತಿಳಿಸಿದೆ.
https://vistaranews.com/karnataka/rss-rejects-goolihatti-sekhars-allegation-that-he-was-denied-entry-into-rss-office-on-caste-grounds/525568.html
CM Siddaramaiah: ಸಿಎಂ ಪಕ್ಕ ಐಸಿಸ್ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!
ಸಿಎಂ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಸರಣಿ ಫೋಟೊಗಳನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ಇಂಥ ಭಯೋತ್ಪಾದನೆ ಪರ ಇರುವ ವ್ಯಕ್ತಿಯ ಹಿನ್ನೆಲೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿದಿದೆಯೇ? ತನ್ವೀರ್ ಪೀರಾ ಅವರ ಸೌದಿ ಮತ್ತು ಮಧ್ಯಪ್ರಾಚ್ಯ ಭೇಟಿ ಸೇರಿ ಎಲ್ಲವನ್ನೂ ನಾನು ಬಹಿರಂಗಪಡಿಸುತ್ತೇನೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತಿರುವೇ-ಮಾವುತನ ಶಪಥ!
ಸಾಕಾನೆ ಅರ್ಜುನನನ್ನು (Elephant Arjuna) ಕೊಂದ ಕಾಡಾನೆಯನ್ನು ಹಿಡಿದೇ ಹಿಡಿಯುತ್ತೇವೆ ಎಂದು ಮಾವುತ ಗುಂಡಣ್ಣ ಶಪಥ ಮಾಡಿದ್ದಾರೆ. ಹಾಸನದ ಯಳಸೂರು ಕಾಡಿನಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಮೃತಪಟ್ಟ ಅರ್ಜುನನ ನೆನೆದು ಬೇಲೂರು ತಾಲ್ಲೂಕಿನ ಬಿಕ್ಕೋಡು ಸಮೀಪದ ಆನೆ ಕ್ಯಾಂಪ್‌ನಲ್ಲಿ ನೀರವ ಮೌನ ಆವರಿಸಿದೆ. ಕುಟುಂಬದ ಸದಸ್ಯನಂತಿದ್ದ ಅರ್ಜುನನ ಕಳೆದುಕೊಂಡ ದುಃಖದಲ್ಲಿ ಮಾವುತರು ಇದ್ದಾರೆ.
ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!
Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ
ಸರ್ಕಾರಿ ಇಲಾಖೆಯಲ್ಲಿ 7 ಲಕ್ಷ ಜನ ಮಾಡಬೇಕಾದ ಕೆಲಸವನ್ನು ಈಗ 4 ಲಕ್ಷ ಜನರು ಮಾಡುತ್ತಲಿದ್ದಾರೆ. ಇದರ ಬಗ್ಗೆ ವಿಸ್ತಾರ ನ್ಯೂಸ್‌ನಲ್ಲಿ (Vistara News) ಪ್ರಸಾರ ಮಾಡಲಾಗಿದೆ. ಸರ್ಕಾರ ಹುದ್ದೆಗಳ ಬಗ್ಗೆ ಕೊಟ್ಟ ಉತ್ತರ ಅಸಮರ್ಪಕವಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಉತ್ತರ ಕೊಡಬೇಕು ಎಂದು ಪಟ್ಟು ಹಿಡಿದಿದ್ದು, ಗದ್ದಲಕ್ಕೆ ಕಾರಣವಾಗಿದೆ.
Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ