ಬೆಂಗಳೂರು: ಗ್ಯಾರಂಟಿ ಸ್ಕೀಮ್‌ಗಳಿಗೆ ಹಣ ಹೊಂಚಲು ಮದ್ಯ ವ್ಯಾಪಾರಿಗಳಿಗೆ ಸರ್ಕಾರ ನೀಡಿರುವ ಟಾರ್ಗೆಟ್ ಸಂಕಷ್ಟಕ್ಕೆ ಸಿಲುಕಿಸಿದೆ. ಇದರೊಂದಿಗೆ ರಾಜ್ಯದ ಇಂದಿನ ಮಹತ್ವದ ಸುದ್ದಿಗಳನ್ನು (Karnataka Live News) ಇಲ್ಲಿ ನೋಡಿ.
ಡ್ರೋನ್ ಬಳಿಕ ಟ್ರಾಫಿಕ್ ಕಂಟ್ರೋಲ್‌ಗೆ ಜಿಪಿಎಸ್; ಬೆಂಗಳೂರಿಗೆ ಟನಲ್ ರೋಡ್!
ಬೆಂಗಳೂರು ನಗರ ಪ್ರದೇಶದ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಸಂಚಾರಿ ಪೊಲೀಸರು ಡ್ರೋನ್ ಹಾರಿಸಿದ್ದು ಆಯಿತು. ಇದೀಗ ಟ್ರಾಫಿಕ್ ಸಿಗ್ನಲ್‌ಗೆ ಜಪಾನ್ ತಂತ್ರಜ್ಞಾನಾಧಾರಿತ ಜಿಪಿಎಸ್ (GPS) ಅಳವಡಿಸಿ ಆ ಮೂಲಕ ಟ್ರಾಫಿಕ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಜತೆಗೆ ಬೆಂಗಳೂರಲ್ಲಿ ಟನಲ್ ರೋಡ್ ನಿರ್ಮಾಣಕ್ಕೂ ಸರ್ಕಾರ ಯೋಜನೆ ರೂಪಿಸಿದೆ.
https://vistaranews.com/karnataka/bengaluru/bangalore-traffic-gps-for-traffic-control-tunnel-road-in-bengaluru/473317.html
ಬಡ್ಡಿ ಹಣ ಕೊಡಲು ತಡವಾಗಿದ್ದಕ್ಕೆ ಕೋಳಿ ಕಟ್ ಮಾಡುವ ಮಚ್ಚಿನಿಂದ ಕೊಚ್ಚಿದ!
ಮಗಳ ಮದುವೆಗಾಗಿ ಮಾಡಿದ್ದ ಸಾಲಕ್ಕೆ ಬಡ್ಡಿ ಹಣ ನೀಡುವುದು ತಡವಾಗಿದ್ದಕ್ಕೆ ವ್ಯಕ್ತಿಯೊಬ್ಬ ಕೊಲೆಯಾಗಿ ಹೋಗಿದ್ದಾನೆ.
https://vistaranews.com/karnataka/tumakuru/murder-case-man-killed-for-delay-in-paying-interest/473165.html
ಮಂಡ್ಯ-ಮೈಸೂರಲ್ಲಿ ಬೆವರಿಳಿಸುವ ಬಿಸಿಲು; ಬೆಂಗಳೂರಲ್ಲೂ ಧಗೆ
ರಾಜ್ಯದಲ್ಲಿ ಗಳಿಗೆಗೊಂದು ವಾತಾವರಣವು ಜನರ ತಲೆ ಬಿಸಿ ಮಾಡಿದೆ. ರಾಜ್ಯದಲ್ಲಿ ಮಳೆ ಕೈಕೊಟ್ಟಿದ್ದು (karnataka weather forecast) ಸೂರ್ಯನ ಶಾಖಕ್ಕೆ ಜನರು ಹೈರಾಣಾಗಿದ್ದಾರೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಏರಿಕೆ (Temperature warning) ಆಗಲಿದೆ.
karnataka weather forecast : ಮಂಡ್ಯ-ಮೈಸೂರಲ್ಲಿ ಬೆವರಿಳಿಸುವ ಬಿಸಿಲು; ಬೆಂಗಳೂರಲ್ಲೂ ಧಗೆ
ವಿದ್ಯುತ್ ತಗುಲಿ ಅಸುನೀಗಿದ್ದ ಕೋತಿ; ತಿಥಿ ಕಾರ್ಯ ನಡೆಸಿ ಕಣ್ಣೀರಿಟ್ಟ ಗ್ರಾಮಸ್ಥರು
ಊರಿನ ಜನರೊಂದಿಗೆ ಮನೆಯ ಸದಸ್ಯನಂತಿದ್ದ ಕೋತಿಯೊಂದು ಕಳೆದ ತಿಂಗಳು ವಿದ್ಯುತ್ ಶಾಕ್‌ನಿಂದ ಮೃತಪಟ್ಟಿತ್ತು. ಆ ದಿನ ಮನುಷ್ಯರಂತೆಯೇ ಅಂತ್ಯ ಸಂಸ್ಕಾರ ನಡೆಸಿದ್ದ ಜನರು, ಇಂದು ತಿಥಿ ಕಾರ್ಯವನ್ನೂ ನಡೆಸಿದ್ದಾರೆ.
Monkey death : ವಿದ್ಯುತ್ ತಗುಲಿ ಅಸುನೀಗಿದ್ದ ಕೋತಿ; ತಿಥಿ ಕಾರ್ಯ ನಡೆಸಿ ಕಣ್ಣೀರಿಟ್ಟ ಗ್ರಾಮಸ್ಥರು
ಮನೆಯಲ್ಲಿ ನೇತಾಡುತ್ತಿದ್ದ ದಂಪತಿ ಶವ! ಕೈ ಹಿಡಿದವಳ ವೇಲೇ ಕುಣಿಕೆ
ಅವರಿಬ್ಬರು ಮೂರು ವರ್ಷದ ಹಿಂದಷ್ಟೇ ಮದುವೆ ಆಗಿದ್ದರು. ಆದರೆ ಅದೇನಾಯಿತೋ ಏನೋ ಪತಿ-ಪತ್ನಿ ಇಬ್ಬರು ಒಂದೇ ವೇಲಿನಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ (Tumkur News) ಪಾವಗಡ ತಾಲೂಕಿನ ರೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ.
Tumkur News : ಮನೆಯಲ್ಲಿ ನೇತಾಡುತ್ತಿದ್ದ ದಂಪತಿ ಶವ! ಕೈ ಹಿಡಿದವಳ ವೇಲೇ ಕುಣಿಕೆ