Site icon Vistara News

Karnataka live news: ಬಿಜೆಪಿ ಪರ ಪೋಸ್ಟ್‌ ಹಾಕುವವರಿಗೆ ಪೊಲೀಸ್‌ ದೌರ್ಜನ್ಯ, ಬೆದರಿಕೆ ; ಡಿಜಿಪಿಗೆ ದೂರು

karnataka live news

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪರ ಸಕ್ರಿಯರಾಗಿರುವ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದು, ಇದನ್ನು ತಕ್ಷಣವೇ ನಿಲ್ಲಿಸಬೇಕು. ಏನೇ ಇದ್ದರೂ ನೋಟಿಸ್‌ ನೀಡಿ ವಿವರಣೆ ಪಡೆಯಬೇಕು ಎಂದು ಬಿಜೆಪಿ ರಾಜ್ಯದ ಪೊಲೀಸ್‌ ಮಹಾನಿರ್ದೇಶಕರಿಗೆ ಮನವಿ ಮಾಡಿದೆ. ಪಕ್ಷದ ಕಾರ್ಯಕರ್ತರ ಮೇಲಿನ ಈ ಕ್ರಮಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ, ಕಾರ್ಯಕರ್ತರ ಮನೆಗಳಿಗೆ ನುಗ್ಗಿ ಬೆದರಿಕೆ ಹಾಕುವುದು ಅಕ್ಷಮ್ಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಅವರ ನೇತೃತ್ವದಲ್ಲಿ ಡಿಜಿಪಿ ಅವರಿಗೆ ಮನವಿ ಸಲ್ಲಿಸಲಾಗಿದೆ.

Harish Kera

ಕಾವೇರಿ ಅರ್ಜಿ ವಿಚಾರಣೆ ಇಂದು ಅಸಂಭವ

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದಲ್ಲಿ ನ್ಯಾ.ನರಸಿಂಹ ಅವರ ಅನುಪಸ್ಥಿತಿಯ ಕಾರಣ ಇಂದು ಕೂಡ ಕಾವೇರಿ ನೀರಿನ ಹಂಚಿಕೆ ಅರ್ಜಿ ವಿಚಾರಣೆ ಬಹುತೇಕ ಅನುಮಾನ ಎನಿಸಿದೆ. ಕಳೆದ ಶುಕ್ರವಾರ ನ್ಯಾ. ಗವಾಯಿ ಅನುಪಸ್ಥಿತಿ ಕಾರಣ ಇಂದಿಗೆ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿತ್ತು.

Exit mobile version