ಬೆಂಗಳೂರು: ಒಂದೆಡೆ ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆಗಾಗಿ ದಿಲ್ಲಿಗೆ ತೆರಳಿದ್ದರೆ, ಇನ್ನೊಂದೆಡೆ ಬೆಂಗಳೂರಿನಲ್ಲಿ ಪ್ರತಿಭಟನೆಗಾಗಿ ಬಿಜೆಪಿ ನಾಯಕರು ಒಟ್ಟಾಗುತ್ತಿದ್ದಾರೆ. ರಾಜ್ಯದ ಇಂದಿನ ಮಹತ್ವದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸುದ್ದಿ ಬೆಳವಣಿಗೆಗಳು (Karnataka Live news) ಇಲ್ಲಿವೆ.
ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮತ್ತೆ ಬಿಜೆಪಿ ಸೇರ್ಪಡೆ; ಕಮಲ ಪಾಳಯ ಸೇರಿದ ಹಲವು ಮುಖಂಡರು
ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್, ಗುರುಸಿದ್ದನಗೌಡ, ಡಾ. ರವಿಕುಮಾರ್ ಸೇರಿ ಹಲವು ಮುಖಂಡರು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ (BJP Karnataka) ಸೇರ್ಪಡೆಯಾಗಿದ್ದಾರೆ. ಚನ್ನಗಿರಿ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿ ಬಂಡಾಯ ಅಭ್ಯರ್ಥಿಯಾಗಿ ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರರಾಗಿ ಕಣಕ್ಕಿಳಿದು ಸೋಲು ಕಂಡಿದ್ದರು. ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರಿಂದ 6 ವರ್ಷ ಉಚ್ಚಾಟನೆಗೊಂಡಿದ್ದ ಅವರು ಇದೀಗ ಪಕ್ಷಕ್ಕೆ ಪುನಃ ಮರಳಿದ್ದಾರೆ.
BJP Karnataka: ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮತ್ತೆ ಬಿಜೆಪಿ ಸೇರ್ಪಡೆ; ಕಮಲ ಪಾಳಯ ಸೇರಿದ ಹಲವು ಮುಖಂಡರು
2ನೇ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಕ್ಕೆ ಯಾಕೀ ಅನ್ಯಾಯ: ಸಿದ್ದರಾಮಯ್ಯ ಆಕ್ರೋಶ
ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ಕೇಂದ್ರ ಸರ್ಕಾರದಿಂದ ನಿರಂತರ ದ್ರೋಹ, ವಂಚನೆಯಾಗುತ್ತಿದೆ ಎಂದು ಆರೋಪಿಸಿ ನಗರದ ಜಂತರ್ ಮಂತರ್‌ನಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವತಿಯಿಂದ (Congress Protest) ಪ್ರತಿಭಟನೆ ನಡೆಸಲಾಯಿತು.
Congress Protest: 2ನೇ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಕ್ಕೆ ಯಾಕೀ ಅನ್ಯಾಯ: ಸಿದ್ದರಾಮಯ್ಯ ಆಕ್ರೋಶ
Gruhajyoti scheme: ಬಾಡಿಗೆದಾರರಿಗೆ ಗುಡ್ ನ್ಯೂಸ್; ಹೊಸ ವಿಳಾಸಕ್ಕೆ De-Link ಆಯ್ಕೆ ಕೊಟ್ಟ ಸರ್ಕಾರ!
ಇನ್ನು ಮುಂದೆ ಬಾಡಿಗೆದಾರರು ಮನೆಯನ್ನು ಬದಲಾವಣೆ ಮಾಡಿದರೆ ತಲೆಬಿಸಿ ಮಾಡಿಕೊಳ್ಳಬೇಕಿಲ್ಲ. ಬಾಡಿಗೆ ಮನೆಯನ್ನು ಬದಲಾವಣೆ ಮಾಡಿದವರಿಗೆ ಕೂಡಲೇ ಹಳೇ ವಿಳಾಸದ ಸಂಪರ್ಕವನ್ನು ರದ್ದು ಪಡಿಸಿ, ಹೊಸ ವಿಳಾಸಕ್ಕೆ ಯೋಜನೆಯ ಫಲವನ್ನು ಪಡೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
BJP Protest: ರಾಜ್ಯದಲ್ಲಿ ಸತ್ತು ಹೋದ ಕಾಂಗ್ರೆಸ್ ಸರ್ಕಾರ; ವಿಧಾನಸೌಧಕ್ಕೆ ಬೀಗ ಜಡಿಯಲು ಹೋದ ಬಿಜೆಪಿ!
ಬರ ನಿರ್ವಹಣೆ ಸೇರಿದಂತೆ ಹಲವಾರು ವಿಷಯಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಕರ್ನಾಟಕ ಬಿಜೆಪಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದೆ. ಅಲ್ಲದೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಬೀಗ ಹಾಕಲೂ ಮುಂದಾಗಿದೆ.
Congress Protest: ‘ಅಮ್ಮಾ, ತಾಯಿ ನಿರ್ಮಲಾ ನಮ್ಮ ದುಡ್ಡು ಕೊಡಮ್ಮಾ’ ಎಂದ ಸಿಎಂ ಸಿದ್ದರಾಮಯ್ಯ
ರಾಜ್ಯಗಳಿಗೆ ಜಿಎಸ್‌ಟಿ ವಿಚಾರವಾಗಿ ಅನ್ಯಾಯ ಆಗಿದೆ. ಅನ್ಯಾಯ ಆದ ಮೇಲೆ ಪ್ರತಿಭಟನೆ ಮಾಡಬೇಕಾ ಬೇಡವೇ? 11495 ಕೋಟಿ ರೂಪಾಯಿ ಹಣ ಬರಬೇಕು. ಹೀಗಾಗಿ ನಿರ್ಮಲಾ ಸೀತಾರಾಮನ್ ಅವರ ಬಳಿ ದುಡ್ಡು ಕೊಡಬೇಕು ಎಂದು ಕೇಳಿಕೊಂಡೆ. ಅದಕ್ಕೆ ಅವರು “ತಾವು ಫೈನಾನ್ಸ್ ಕಮಿಷನ್ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಲ್ಲ” ಎಂದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
https://vistaranews.com/politics/congress-karnataka-cm-siddaramaiah-slams-centre/575264.html