ಬೆಂಗಳೂರು: ಉಡುಪಿ: ಉಡುಪಿ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜು (Nethrajyothi Paramedical college) ವಿಡಿಯೋ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ಹಸ್ತಾಂತರ (Case transferred to CID) ಮಾಡಿದೆ. ಈ ಮೂಲಕ ಉನ್ನತ ಮಟ್ಟದ ತನಿಖೆಗೆ ಮುಂದಾಗಿದೆ. ಆದರೆ, ಈ ಬಗ್ಗೆ ವಿಶೇಷ ತನಿಖಾ ತಂಡ (Special Investigation Team- SIT) ದಿಂದ ತನಿಖೆ ನಡೆಸಬೇಕು ಎಂಬ ಬೇಡಿಕೆಯನ್ನು ಒಪ್ಪಿಲ್ಲ.
ರಾಜ್ಯದ ಇಂದಿನ ಪ್ರಮುಖ ಸುದ್ದಿ ಬೆಳವಣಿಗೆಗಳನ್ನು (Karnataka live news) ತಿಳಿಯಲು ಇಲ್ಲಿ ಗಮನಿಸಿ.
ರೌಡಿಶೀಟರ್ ಸಿದ್ದಾಪುರ ಮಹೇಶ್ ಕೊಲೆ ಪ್ರಕರಣ; 14 ಆರೋಪಿಗಳ ಬಂಧನ
ರೌಡಿಶೀಟರ್ ಸಿದ್ದಾಪುರ ಮಹೇಶ್ ಕೊಲೆ ಪ್ರಕರಣದಲ್ಲಿ (Murder Case) 14 ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಸುನೀಲ್ ಅಲಿಯಾಸ್ ಸಿದ್ದಾಪುರ ಸುನೀಲ್, ಗ್ರೇಸ್ ವಾಲ್ಟರ್ , ಶ್ರೀನಿವಾಸ್, ಕಾರ್ತೀಕ್ ಸೇರಿ ಒಟ್ಟು 14 ಆರೋಪಿಗಳ ಬಂಧನವಾಗಿದೆ. ಹೆಚ್ಚಿನ ವಿಚಾರಣೆಗೆ ಕಸ್ಟಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ ಹಿನ್ನೆಲೆಯಲ್ಲಿ 14 ದಿನಗಳವರೆಗೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲು ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.
Murder Case: ರೌಡಿಶೀಟರ್ ಸಿದ್ದಾಪುರ ಮಹೇಶ್ ಕೊಲೆ ಪ್ರಕರಣ; 14 ಆರೋಪಿಗಳ ಬಂಧನ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು; ಒಬ್ಬನ ಕೈ ಕಟ್, ಮೂವರಿಗೆ ಗಾಯ
ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಇನ್ನೋವಾ ಕಾರು ಪಲ್ಟಿಯಾಗಿ ಒಬ್ಬರ ಕೈ ಕಟ್ ಆಗಿ, ಮೂವರಿಗೆ ಗಾಯಗಳಾಗಿರುವ ಘಟನೆ (Car Accident) ಜಿಲ್ಲೆಯ ಬೇಲೂರು ತಾಲೂಕಿನ ಹಾರೋಹಳ್ಳಿ ಕ್ರಾಸ್ ಬಳಿ ನಡೆದಿದೆ. ಕೈ ತುಂಡಾಗಿರುವ ಗಾಯಾಳು ಸ್ಥಿತಿ ಗಂಭೀರವಾಗಿದೆ.
Car Accident: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು; ಒಬ್ಬನ ಕೈ ಕಟ್, ಮೂವರಿಗೆ ಗಾಯ
ಬೆಂಗಳೂರಿನ ಎಲ್ಲಾ ಕಾಮಗಾರಿಗಳು ಬಂದ್; ಸರ್ಕಾರದ ವಿರುದ್ಧ ತಿರುಗಿ ಬಿದ್ದ ಗುತ್ತಿಗೆದಾರರ ಸಂಘ
ಬಾಕಿ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಎಲ್ಲಾ ಕಾಮಗಾರಿಗಳನ್ನು ಬಂದ್ ಮಾಡಲು ಗುತ್ತಿಗೆದಾರರ ಸಂಘ ನಿರ್ಧರಿಸಿದೆ. ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಸಂಘ ಆಗ್ರಹಿಸಿತ್ತು. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಾಮಗಾರಿ ಅಕ್ರಮಗಳ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರ ತನಿಖಾ ಸಮಿತಿಗಳನ್ನು ರಚನೆ ಮಾಡಿರುವ ಹಿನ್ನೆಲೆಯಲ್ಲಿ ಬಾಕಿ ಬಿಲ್ ತಡೆಹಿಡಿಯುವ ಸಾಧ್ಯತೆ ಇದೆ. ಹೀಗಾಗಿ ಸೋಮವಾರಿಂದಲೇ ಕಾಮಗಾರಿಗಳನ್ನು ನಿಲ್ಲಿಸುವುದಾಗಿ ಗುತ್ತಿಗೆದಾರರ ಸಂಘ (Contractors Association) ಪ್ರಕಟಿಸಿದೆ.
Contractors Association: ಬೆಂಗಳೂರಿನ ಎಲ್ಲಾ ಕಾಮಗಾರಿಗಳು ಬಂದ್; ಸರ್ಕಾರದ ವಿರುದ್ಧ ತಿರುಗಿ ಬಿದ್ದ ಗುತ್ತಿಗೆದಾರರ ಸಂಘ
ನೈರುತ್ಯ ಮುಂಗಾರು ಮಂಕು; ನಾಳೆ ಚದುರಿದ ಮಳೆಯಷ್ಟೇ
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ (Rain news) ಸಾಧ್ಯತೆಯಿದೆ. ಮಲೆನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಮಧ್ಯಮ ಮಳೆಯಾಗುವ (weather report) ಸಾಧ್ಯತೆಯಿದೆ. ಇನ್ನು ದಕ್ಷಿನ ಒಳನಾಡಿನಲ್ಲಿ ಜಿಟಿ ಜಿಟಿ ಮಳೆಯಾಗಲಿದೆ.
Weather report : ನೈರುತ್ಯ ಮುಂಗಾರು ಮಂಕು; ನಾಳೆ ಚದುರಿದ ಮಳೆಯಷ್ಟೇ
ಬಸ್ ನಿಲ್ಲಿಸದ ಚಾಲಕ; ಚೇಸ್ ಮಾಡಿ ಅಡ್ಡಗಟ್ಟಿದ ಮಳಲಗಾಂ ಗ್ರಾಮಸ್ಥರು!
ಉತ್ತರ ಕನ್ನಡ ಜಿಲ್ಲೆಯ ಶಿರಸಿ- ಯಲ್ಲಾಪುರ (Sirsi News) ರಸ್ತೆಯಲ್ಲಿರುವ ಮಳಲಗಾಂ ಗ್ರಾಮದ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸದೆ ಹೋಗುತ್ತಿದ್ದ ವಾಯವ್ಯ ಸಾರಿಗೆ (Nwkrtc bus) ಚಾಲಕನಿಗೆ ಗ್ರಾಮಸ್ಥರು ನೀರಿಳಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ನಿಂತಿದ್ದರೂ, ಚಾಲಕ ಬಸ್ ನಿಲ್ಲಸದೆ ಹೋಗಿದ್ದಾನೆ.
Sirsi News : ಬಸ್ ನಿಲ್ಲಿಸದ ಚಾಲಕ; ಚೇಸ್ ಮಾಡಿ ಅಡ್ಡಗಟ್ಟಿದ ಮಳಲಗಾಂ ಗ್ರಾಮಸ್ಥರು!