ಬೆಂಗಳೂರು: ಉಡುಪಿ: ಉಡುಪಿ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜು (Nethrajyothi Paramedical college) ವಿಡಿಯೋ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ಹಸ್ತಾಂತರ (Case transferred to CID) ಮಾಡಿದೆ. ಈ ಮೂಲಕ ಉನ್ನತ ಮಟ್ಟದ ತನಿಖೆಗೆ ಮುಂದಾಗಿದೆ. ಆದರೆ, ಈ ಬಗ್ಗೆ ವಿಶೇಷ ತನಿಖಾ ತಂಡ (Special Investigation Team- SIT) ದಿಂದ ತನಿಖೆ ನಡೆಸಬೇಕು ಎಂಬ ಬೇಡಿಕೆಯನ್ನು ಒಪ್ಪಿಲ್ಲ.
ರಾಜ್ಯದ ಇಂದಿನ ಪ್ರಮುಖ ಸುದ್ದಿ ಬೆಳವಣಿಗೆಗಳನ್ನು (Karnataka live news) ತಿಳಿಯಲು ಇಲ್ಲಿ ಗಮನಿಸಿ.
ಮನೆಗೆ ಬಂದವರೆನ್ನೆಲ್ಲ ಪ್ರಶ್ನಿಸುತ್ತಿದ್ದ ನೆರೆಮನೆ ಅಜ್ಜಿ ಹತ್ಯೆ!
ತಾನಾಯಿತು ತನ್ನ ಕೆಲಸ ಆಯಿತು ಎಂದು ಆ ವೃದ್ಧೆ ಇದ್ದಿದ್ದರೆ ಇಂದು ಜೀವಂತವಾಗಿ ಇರುತ್ತಿದ್ದರು. ಜಗಲಿ ಮೇಲೆ ಕುಳಿತು ಪಕ್ಕದ ಮನೆಗೆ ಬಂದವರನ್ನೆಲ್ಲ ಪ್ರಶ್ನೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ನೆರೆಮನೆಯ ವ್ಯಕ್ತಿಯೊಬ್ಬ ಕೊಂದೇ (Murder case) ಬಿಟ್ಟಿದ್ದಾನೆ.
Murder Case : ಮನೆಗೆ ಬಂದವರನ್ನೆಲ್ಲ ಪ್ರಶ್ನಿಸುತ್ತಿದ್ದ ನೆರೆಮನೆ ಅಜ್ಜಿ ಹತ್ಯೆ!
ಸ್ಪಂದನಾ ಸಾವು ಸಂಭವಿಸಿದ್ದು ಹೇಗೆ?
-ಸ್ಪಂದನಾ ಅವರು ಮೂರ್ನಾಲ್ಕು ದಿನಗಳ ಹಿಂದೆ ಬ್ಯಾಂಕಾಕ್‌ಗೆ ಹೋಗಿದ್ದರು.
-ವಿಜಯ ರಾಘವೇಂದ್ರ ಅವರು ಸಿನಿಮಾ ಶೂಟಿಂಗ್ ನಿಮಿತ್ತ ಹೋಗಿದ್ದರೆ, ಸ್ಪಂದನಾ ಅವರು ತಮ್ಮ ಕಸಿನ್ ಸಿಸ್ಟರ್‌ಗಳ ಜತೆ ತೆರಳಿದ್ದರು.
– ವಿಜಯ ರಾಘವೇಂದ್ರ ಅವರು ಭಾನುವಾರ ಸಂಜೆ ಸ್ಪಂದನಾ ಅವರನ್ನು ಜಾಯಿನ್ ಆಗಿದ್ದರು.
– ಸ್ಪಂದನಾ ಅವರು ಭಾನುವಾರ ರಾತ್ರಿ ಲೋಬಿಪಿಯಿಂದ ಕುಸಿದುಬಿದ್ದಿದ್ದರು. ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು.
– ಲೋಬಿಪಿ ಸಮಸ್ಯೆಯಿಂದ ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
– ವಿಜಯ ರಾಘವೇಂದ್ರ ಅವರ ಕುಟುಂಬದ ಸದಸ್ಯರು ಬ್ಯಾಂಕಾಂಕ್ ತೆರಳಿದ್ದಾರೆ.
Pubg Game ದಾಸನಾಗಿದ್ದ ವಿದ್ಯಾರ್ಥಿ ನೇಣಿಗೆ ಶರಣು
ಪಬ್‌ಜಿ ಆಟದಲ್ಲಿ (Pubg Game) ಹಣ ಕಳೆದುಕೊಂಡು ವಿದ್ಯಾರ್ಥಿ ಮನನೊಂದು ಆತ್ಮಹತ್ಯೆಗೆ (Self Harming) ಶರಣಾದ ಘಟನೆ ಕಲಬುರಗಿ ನಗರದ ದೇವಿ ನಗರದಲ್ಲಿ ನಡೆದಿದೆ. ಪ್ರವೀಣ್ ಪಾಟೀಲ್ (20) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
Self Harming : Pubg Game ದಾಸನಾಗಿದ್ದ ವಿದ್ಯಾರ್ಥಿ ನೇಣಿಗೆ ಶರಣು!
ಯಮ ಸ್ವರೂಪಿಯಾಗಿ ಬಂದ ಕಾರು; ಇಬ್ಬರು ಪಾದಚಾರಿಗಳು ಸಾವು
ಭೀಕರ ರಸ್ತೆ ಅಪಘಾತದಲ್ಲಿ (Road Accident) ಇಬ್ಬರು ಪಾದಚಾರಿಗಳು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾ. ನೀರಲಗಿ ಬಳಿ ಘಟನೆ ನಡೆದಿದೆ.
Road Accident : ಯಮ ಸ್ವರೂಪಿಯಾಗಿ ಬಂದ ಕಾರು; ಇಬ್ಬರು ಪಾದಚಾರಿಗಳು ಸಾವು!