ಬೆಂಗಳೂರು: ಇಂದು ಡಿಕೆಶಿ ಅಧ್ಯಕ್ಷತೆಯಲ್ಲಿ ಬ್ರ್ಯಾಂಡ್ ಬೆಂಗಳೂರು ಸಮ್ಮೇಳನ, ನಮ್ಮ ಮೆಟ್ರೋ ವಿಸ್ತೃತ ನೇರಳೆ ಮಾರ್ಗದ ಕಾರ್ಯಾರಂಭ ಸೇರಿದಂತೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka live news) ಇಲ್ಲಿ ಗಮನಿಸುತ್ತಿರಿ.
ಮೇವು ಎಂದು ನಾಡ ಬಾಂಬ್ ತಿಂದ ಎತ್ತು; ಸ್ಫೋಟಕ್ಕೆ ಛಿದ್ರವಾಯ್ತು ಬಾಯಿ
ಕಾಡು ಹಂದಿ ಕಾಟಕ್ಕೆ ಕೆಲವರು ಹಂದಿಯನ್ನು ಓಡಿಸಲೆಂದು ನಾಡ ಬಾಂಬ್ (Bomb Blast) ಅನ್ನು ಇಟ್ಟಿದ್ದರು. ಆದರೆ ಹಸುವೊಂದು ಮೇಯುತ್ತಾ ಹೋಗಿ ನಾಡಬಾಂಬ್ ತಿಂದಿದೆ. ಪರಿಣಾಮ ಬಾಂಬ್ ಸ್ಫೋಟುಗೊಂಡು ಬಾಯೆಲ್ಲ ಛಿದ್ರ ಛಿದ್ರವಾಗಿದೆ.
https://vistaranews.com/karnataka/vijayanagar/bomb-blast-a-bull-that-ate-a-country-made-bomb/476314.html
ಹೊಸಪೇಟೆಯಲ್ಲಿ ಭೀಕರ ಅಪಘಾತ; 5ಕ್ಕೂ ಅಧಿಕ ಮಂದಿ ಸಾವು
ಹೊಸಪೇಟೆಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಐದಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
https://vistaranews.com/karnataka/vijayanagar/road-accident-in-hospet-more-than-5-dead/476274.html
ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಎಷ್ಟು ಮಂದಿಗೆ ಸಿಕ್ಕಿಲ್ಲ, ಕಾರಣವೇನು?
ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ (Gruha Lakshmi Scheme) ಅಡಿ ಈವರೆಗೆ 9,44,155 ಅರ್ಜಿದಾರರಿಗೆ ಹಣ ಹೋಗಿಲ್ಲ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ.
https://vistaranews.com/karnataka/how-many-people-have-not-received-the-money-from-the-gruhalakshmi-scheme-what-is-the-reason/476156.html
ವೈದ್ಯರ ನಿರ್ಲಕ್ಷ್ಯಕ್ಕೆ ಹಾರಿಹೋಯ್ತು ಹಸುಗೂಸಿನ ಪ್ರಾಣ!
ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಪಟ್ಟಣದ ತಾಲೂಕು ಸರ್ಕಾರಿ ತಾಯಿ -ಮಗು ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ (Medical Negligence) 10 ದಿನದ ಹಸುಗೂಸು ಮೃತಪಟ್ಟಿರುವ ಆರೋಪವೊಂದು ಕೇಳಿ ಬಂದಿದೆ. ಮಗು ಸಾವಿಗೇ ಸಿಬ್ಬಂದಿಯೇ ಕಾರಣವೆಂದು ಆರೋಪಿಸಿ ಆಸ್ಪತ್ರೆ ಎದುರು ಪೋಷಕರು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿದರು.
https://vistaranews.com/karnataka/bengaluru-rural/medical-negligence-10-days-old-baby-dies-due-to-negligence-of-doctors/476170.html
ಅತ್ತಿಬೆಲೆ ಬೆನ್ನಲ್ಲೇ ತಮಿಳುನಾಡಲ್ಲೂ ಪಟಾಕಿ ಸ್ಫೋಟ; 10 ಮಂದಿ ಸಾವು, ಹಲವರು ಗಂಭೀರ
ಅತ್ತಿಬೆಲೆ ಪಟಾಕಿ ದುರ್ಘಟನೆ ಬಳಿಕ ತಮಿಳುನಾಡಲ್ಲಿ ಮತ್ತೊಂದು ಅಗ್ನಿ ದುರಂತ (Fire Accident) ಸಂಭವಿಸಿದೆ. ತಮಿಳುನಾಡಿನ ಅರಿಯಲೂರು ಜಿಲ್ಲೆಯ ವಿರಾಗಲೂರಿನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ ನಡೆದಿದೆ. ಘಟನೆಯಲ್ಲಿ ಪಟಾಕಿ ಸಿಡಿತಕ್ಕೆ 10 ಮಂದಿ ಮೃತಪಟ್ಟಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದಾರೆ.
https://vistaranews.com/karnataka/fire-accident-after-attibele-firecrackers-burst-in-tamil-nadu-10-dead-several-critical/476089.html