Site icon Vistara News

Karnataka live news: ದಸರಾದಲ್ಲಿ ಉರ್ದು ಕವಿಗೋಷ್ಠಿ; ಟಿಪ್ಪು ಸಂಸ್ಕೃತಿ ವೈಭವೀಕರಣ ಎಂದ ಸುನಿಲ್‌ ಕುಮಾರ್

karnataka live news

ಬೆಂಗಳೂರು: ಇಂದು ಡಿಕೆಶಿ ಅಧ್ಯಕ್ಷತೆಯಲ್ಲಿ ಬ್ರ್ಯಾಂಡ್‌ ಬೆಂಗಳೂರು ಸಮ್ಮೇಳನ, ನಮ್ಮ ಮೆಟ್ರೋ ವಿಸ್ತೃತ ನೇರಳೆ ಮಾರ್ಗದ ಕಾರ್ಯಾರಂಭ ಸೇರಿದಂತೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka live news) ಇಲ್ಲಿ ಗಮನಿಸುತ್ತಿರಿ.

Deepa S

ಮುಂದಿನ 3 ದಿನ ಮಳೆ ಸಾಧ್ಯತೆ; ಬೆಂಗಳೂರಲ್ಲಿ ಕವಿದ ಮೋಡ

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಐದಾರು ಜಿಲ್ಲೆಗಳಲ್ಲಿ ಮುಂದಿನ 3 ದಿನ ಅತಿ ಹೆಚ್ಚು ಮಳೆಯಾಗುವ (Rain News) ಸಾಧ್ಯತೆ ಇದೆ.

https://vistaranews.com/weather/karnataka-weather-rain-likely-for-next-3-days-cloudy-conditions-prevail-in-bengaluru/475759.html

Harish Kera

ಇಂದು ‘ಬ್ರ್ಯಾಂಡ್ ಬೆಂಗಳೂರು’ ಸಮ್ಮೇಳನ

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಇಂದು ‘ಬ್ರ್ಯಾಂಡ್ ಬೆಂಗಳೂರು’ ಸಮ್ಮೇಳನ‌ ನಡೆಯಲಿದೆ. ನಗರದ ಜ್ಞಾನಜ್ಯೋತಿ ಸಭಾಂಗಣ (ಸೆಂಟ್ರಲ್ ಕಾಲೇಜು ಆವರಣ)ದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಎಂಟು ವಿವಿಧ ಆಯಾಮಗಳಲ್ಲಿ ಬೆಂಗಳೂರನ್ನು ಜಾಗತಿಕ ಮನ್ನಣೆಯ ಕೇಂದ್ರವಾಗಿಸುವ ಉದ್ದೇಶವಿದೆ. 8 ವಿಚಾರಗಳ ತಜ್ಞರು, ಗಣ್ಯ ವ್ಯಕ್ತಿಗಳು ಭಾಗವಹಿಸಿ, ಹೊಸ ಬೆಂಗಳೂರಿನ ನೀಲನಕ್ಷೆ ತಯಾರಿಕೆಗೆ ಸಲಹೆ ನೀಡಲಿದ್ದಾರೆ.

Harish Kera

ನಮ್ಮ ಮೆಟ್ರೋ ವಿಸ್ತರಿತ ನೇರಳೆ ಮಾರ್ಗ ಕಾರ್ಯಾರಂಭ

ಬೆಂಗಳೂರು: ನಮ್ಮ ಮೆಟ್ರೋದ ಚಲ್ಲಘಟ್ಟ- ವೈಟ್‌ಫೀಲ್ಡ್‌ ವಿಸ್ತರಿತ ನೇರಳೆ ಮಾರ್ಗ ಯಾವುದೇ ಅಧಿಕೃತ ಕಾರ್ಯಕ್ರಮವಿಲ್ಲದೆ ಕಾರ್ಯಾರಂಭ ಮಾಡಿದೆ. ಮೊದಲ ದಿನವೇ ಉತ್ತಮ ಸ್ಪಂದನ ವ್ಯಕ್ತವಾಗಿದೆ.

Exit mobile version