Site icon Vistara News

Karnataka live news: Heart Attack: ಖ್ಯಾತ ವಿಜ್ಞಾನಿ ಕಸ್ತೂರಿರಂಗನ್‌ಗೆ ಹೃದಯಾಘಾತ; ಲಂಕಾದಿಂದ ಬೆಂಗಳೂರಿಗೆ ಏರ್‌ಲಿಫ್ಟ್‌

Kasturirangan

ಬೆಂಗಳೂರು: ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಒಂಬತ್ತು ವರ್ಷಗಳ ಕಾಲ ಇಸ್ರೋ ಅಧ್ಯಕ್ಷರಾಗಿದ್ದ ಕೆ. ಕಸ್ತೂರಿರಂಗನ್‌ ಅವರಿಗೆ ಹೃದಯಾಘಾತವಾಗಿದೆ. ಪ್ರಸಕ್ತ ಅವರು ಶ್ರೀಲಂಕಾದಲ್ಲಿದ್ದು, ಅಲ್ಲಿಂದ ಚಿಕಿತ್ಸೆಗಾಗಿ ಬೆಂಗಳೂರಿಗೆ ಏರ್‌ಲಿಫ್ಟ್‌ ಮಾಡಲಾಗುತ್ತಿದೆ. ರಾಜ್ಯದ ಮಹತ್ವದ ಕ್ಷಣಕ್ಷಣದ ಸುದ್ದಿ ಬೆಳವಣಿಗೆಗಳನ್ನು (Karnataka live news) ತಿಳಿಯಲು ಈ ಲಿಂಕ್‌ ಫಾಲೋ ಮಾಡಿ.

Prabhakar R

ನಾರಾಯಣ ಹೆಲ್ತ್ ಸಿಟಿಗೆ ಕಸ್ತೂರಿ ರಂಗನ್ ದಾಖಲು; ವೈದ್ಯರಿಂದ ಚಿಕಿತ್ಸೆ

ಬೆಂಗಳೂರು ಹೊರವಲಯದ ಬೊಮ್ಮಸಂದ್ರ ಬಳಿಯ ನಾರಾಯಣ ಹೆಲ್ತ್ ಸಿಟಿಗೆ ಇಸ್ರೋ ಮಾಜಿ ಅಧ್ಯಕ್ಷ, ಖ್ಯಾತ ವಿಜ್ಞಾನಿ ಡಾ.ಕೆ. ಕಸ್ತೂರಿ ರಂಗನ್ (Dr K Kasturirangan) ಅವರನ್ನು ದಾಖಲಿಸಲಾಗಿದೆ. ಸೋಮವಾರ ಸಂಜೆ ಹೃದಯಾಘಾತವಾದ (Heart attack) ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಅವರನ್ನು ಶ್ರೀಲಂಕಾದಿಂದ ಬೆಂಗಳೂರಿಗೆ ಏರ್‌ಲಿಫ್ಟ್‌ ಮಾಡಲಾಯಿತು. ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ನಗರದ ಬೊಮ್ಮಸಂದ್ರ ಬಳಿಯ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಕಸ್ತೂರಿ ರಂಗನ್ ಅವರನ್ನು ಸ್ಥಳಾಂತರ ಮಾಡಲಾಗಿದ್ದು, ಖ್ಯಾತ ಹೃದ್ರೋಗ ತಜ್ಞ ದೇವಿ ಪ್ರಸಾದ್ ಶೆಟ್ಟಿ ಮಾರ್ಗದರ್ಶನದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

Dr K Kasturirangan: ನಾರಾಯಣ ಹೆಲ್ತ್ ಸಿಟಿಗೆ ಕಸ್ತೂರಿ ರಂಗನ್ ದಾಖಲು; ವೈದ್ಯರಿಂದ ಚಿಕಿತ್ಸೆ

Prabhakar R

ಜು.12ರಂದು ಕೇಂದ್ರದ ವಿರುದ್ಧ ಕಾಂಗ್ರೆಸ್‌ ಮೌನ ಸತ್ಯಾಗ್ರಹ: ಡಿ.ಕೆ.ಶಿವಕುಮಾರ್‌

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವತಿಯಿಂದ (Congress Protest) ಜುಲೈ 12ರಂದು ದೇಶಾದ್ಯಂತ ʼಮೌನ ಸತ್ಯಾಗ್ರಹʼ ನಡೆಸಲಾಗುತ್ತದೆ. ಅದರಂತೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.

Congress Protest: ಜು.12ರಂದು ಕೇಂದ್ರದ ವಿರುದ್ಧ ಕಾಂಗ್ರೆಸ್‌ ಮೌನ ಸತ್ಯಾಗ್ರಹ: ಡಿ.ಕೆ.ಶಿವಕುಮಾರ್‌
Adarsha Anche

G20 Summit : ಕಸೂತಿಯಲ್ಲಿ ಗಿನ್ನಿಸ್‌ ದಾಖಲೆ ಬರೆದ ಲಂಬಾಣಿ ಮಹಿಳೆಯರು!

ಸಂಡೂರಿನ ಕಲಾಕೇಂದ್ರದ 450ಕ್ಕೂ ಹೆಚ್ಚು ಜನ ಲಂಬಾಣಿ ಮಹಿಳೆಯರು ಸಿದ್ಧಪಡಿಸಿದ್ದ 1750 ವೈವಿಧ್ಯಮಯ ಕಸೂತಿಗಳಿಗೆ ಗಿನ್ನಿಸ್‌ ರೆಕಾರ್ಡ್‌ ಲಭಿಸಿದೆ. ಜಿ20 ಸಮ್ಮೇಳನದ ಮೂಲಕ ಲಂಬಾಣಿ ಸಮುದಾಯದವರ ಕಸೂತಿಯು ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದೆ.

G20 Summit : ಕಸೂತಿಯಲ್ಲಿ ಗಿನ್ನಿಸ್‌ ದಾಖಲೆ ಬರೆದ ಲಂಬಾಣಿ ಮಹಿಳೆಯರು!
Deepa S

ಸವಾರನ ಎದೆಗೆ ಅಪ್ಪಳಿಸಿತ್ತು ಮತ್ತೊಂದು ಬೈಕ್‌

ಜಸ್ಟ್‌ 20 ಸೆಕೆಂಡ್‌ನಲ್ಲೇ ಸವಾರನ ಪ್ರಾಣಪಕ್ಷಿ ಹಾರಿ ಹೋಗಿದೆ. ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸವಾರನ ಎದೆಗೆ ನೇರವಾಗಿ ಬೈಕ್‌ (Road Accident) ಅಪ್ಪಳಿಸಿದೆ. ಪರಿಣಾಮ ಆನಂದ್ (26) ಎಂಬಾತ ಮೃತಪಟ್ಟಿದ್ದಾನೆ. ಈ ಅಪಘಾತದ ದೃಶ್ಯವು ಸಿಸಿಟಿವಿಯಲ್ಲಿ (cctv footage) ಸೆರೆಯಾಗಿದೆ. ನಿನ್ನೆ ಭಾನುವಾರ (ಜು.9) ಮಧ್ಯಾಹ್ನ 12.50ರ ಸುಮಾರಿಗೆ ಬೆಳ್ಳಂದೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಕನ್ನಳ್ಳಿ ರಸ್ತೆಯಲ್ಲಿ ನಡೆದಿದೆ.

Road Accident : ಸವಾರನ ಎದೆಗೆ ಅಪ್ಪಳಿಸಿತ್ತು ಮತ್ತೊಂದು ಬೈಕ್‌!
Deepa S

ಕರಾವಳಿಯಲ್ಲಿ ಮಳೆಗೆ ತತ್ತರ, ಉತ್ತರ ಒಳನಾಡಿನಲ್ಲಿ ನಿರುತ್ತರ

ಕರ್ನಾಟಕ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇನ್ನೊಂದು ವಾರ ಭಾರಿ ಮಳೆಯಾಗುವ (Heavy Rain alert) ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಜು.11ರಂದು ರಾಜ್ಯದ 13 ಜಿಲ್ಲೆಗಳಿಗೆ ಮಳೆ ಮುನ್ಸೂಚನೆಯನ್ನು (Weather report) ನೀಡಲಾಗಿದೆ. ಕರಾವಳಿ ಭಾಗದಲ್ಲಿ ವರುಣ ಗುಡುಗಿದರೆ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುವ (Rain News) ಸಾಧ್ಯತೆ ಇದೆ.

Weather report : ಮಳೆಗೆ ಕರಾವಳಿ ತತ್ತರ; ಉತ್ತರ ಒಳನಾಡಿನಲ್ಲಿ ನಿರುತ್ತರ
Exit mobile version