Site icon Vistara News

Karnataka live news: Heart Attack: ಖ್ಯಾತ ವಿಜ್ಞಾನಿ ಕಸ್ತೂರಿರಂಗನ್‌ಗೆ ಹೃದಯಾಘಾತ; ಲಂಕಾದಿಂದ ಬೆಂಗಳೂರಿಗೆ ಏರ್‌ಲಿಫ್ಟ್‌

Kasturirangan

ಬೆಂಗಳೂರು: ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಒಂಬತ್ತು ವರ್ಷಗಳ ಕಾಲ ಇಸ್ರೋ ಅಧ್ಯಕ್ಷರಾಗಿದ್ದ ಕೆ. ಕಸ್ತೂರಿರಂಗನ್‌ ಅವರಿಗೆ ಹೃದಯಾಘಾತವಾಗಿದೆ. ಪ್ರಸಕ್ತ ಅವರು ಶ್ರೀಲಂಕಾದಲ್ಲಿದ್ದು, ಅಲ್ಲಿಂದ ಚಿಕಿತ್ಸೆಗಾಗಿ ಬೆಂಗಳೂರಿಗೆ ಏರ್‌ಲಿಫ್ಟ್‌ ಮಾಡಲಾಗುತ್ತಿದೆ. ರಾಜ್ಯದ ಮಹತ್ವದ ಕ್ಷಣಕ್ಷಣದ ಸುದ್ದಿ ಬೆಳವಣಿಗೆಗಳನ್ನು (Karnataka live news) ತಿಳಿಯಲು ಈ ಲಿಂಕ್‌ ಫಾಲೋ ಮಾಡಿ.

Adarsha Anche

Hasirumakki launch : ಹಸಿರುಮಕ್ಕಿ ಲಾಂಚ್‌ ಪುನಾರಂಭ; ಬಸ್‌ಗಿಲ್ಲ ಅವಕಾಶ!

ಈ ಬಾರಿ ಜೂನ್ ತಿಂಗಳಿನಲ್ಲಿ ನಿರೀಕ್ಷಿತವಾಗಿ ಮುಂಗಾರು ಮಳೆ ಸುರಿಯದ ಹಿನ್ನೆಲೆಯಲ್ಲಿ ಶರಾವತಿ ಹಿನ್ನೀರಿನ ಪ್ರಮಾಣದಲ್ಲಿ ಗಣನೀಯ ಕುಸಿತವಾಗಿತ್ತು. ಈಗ ಮಳೆಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರವಷ್ಟೇ ಸಿಗಂದೂರು ಲಾಂಚ್‌ನಲ್ಲಿ ವಾಹನ ಸಾಗಾಟಕ್ಕೆ ಅನುಮತಿ ನೀಡಲಾಗಿತ್ತು. ಈಗ ತಿಂಗಳ ಹಿಂದೆ ಸ್ಥಗಿತಗೊಂಡಿದ್ದ ಹಸಿರುಮಕ್ಕಿ ಲಾಂಚ್‌ ಸೋಮವಾರದಿಂದ ಕಾರ್ಯಾರಂಭ ಮಾಡಿದೆ.

Hasirumakki launch : ಹಸಿರುಮಕ್ಕಿ ಲಾಂಚ್‌ ಪುನಾರಂಭ; ಬಸ್‌ಗಿಲ್ಲ ಅವಕಾಶ!
Krishna Bhat

ಜೈನ ಮುನಿ ಬರ್ಬರ ಕೊಲೆ: ಚಿಕ್ಕೋಡಿ ಸೇರಿದಂತೆ ಹಲವು ಕಡೆ ಪ್ರತಿಭಟನೆ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಹಿರೇಕೋಡಿಯಲ್ಲಿರುವ ಜೈನ ಮಠದ ಜೈನ ಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಖಂಡಿಸಿ ಜೈನ ಸಮಾಜದಿಂದ ಪ್ರತಿಭಟನೆ ಆರಂಭಗೊಂಡಿದೆ.

ಆರೋಪಿಗಳಿಗೆ ಕಠಿಣ ಶಿಕ್ಷೆ, ಸ್ವಾಮೀಜಿಗಳಿ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿ ಚಿಕ್ಕೋಡಿಯಲ್ಲಿ ಜೈನ ಸಮಾಜದಿಂದ ಪ್ರತಿಭಟನೆ ಶುರುವಾಗಿದೆ. ಚಿಕ್ಕೋಡಿಯ ಆರ್ ಡಿ ಮೈದಾನದಿಂದ ಮೌನ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಿದ್ದು, ಎಸಿ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಯಲಿದೆ. ನೂರಾರು ಜೈನ ಧರ್ಮೀಯರು ಮತ್ತು ಇತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಇದಲ್ಲದೆ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆದಿದೆ.

Deepa S

ಮಲಗಲು ಬಿಡದ್ದಕ್ಕೆ ಮಸೀದಿಗೆ ಹುಸಿ ಬಾಂಬ್‌ ಇಟ್ಟ

ರಾಜಧಾನಿಯ ಪ್ರತಿಷ್ಠಿತ ಶಿವಾಜಿನಗರದ ಆಜಾಂ ಮಸೀದಿಯಲ್ಲಿ (Shivaji nagar Mosque) ಬಾಂಬ್‌ (Bomb threat) ಇಡಲಾಗಿದೆ ಎಂಬ ಸುದ್ದಿಯೊಂದು ಕಳೆದ ಜು.6 ರಂದು ಬೆಂಗಳೂರು ಪೊಲೀಸರನ್ನು (Bangalore Police) ತಲ್ಲಣಗೊಳಿಸಿತು. ಆದರೆ ತಪಾಸಣೆ ಮಾಡಿದಾಗ ಯಾವುದೇ ಅಪಾಯಕಾರಿ ವಸ್ತುಗಳು (Dangerous materials) ಸಿಗದೆ ನಿಟ್ಟುಸಿರು ಬಿಟ್ಟಿದ್ದರು. ಹುಸಿ ಬಾಂಬ್‌ ಕರೆ ಮಾಡಿದವನ ಜಾಡು ಹಿಡಿದ ಶಿವಾಜಿನಗರ ಪೊಲೀಸರು ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ. ಸೈಯದ್ ಖಾಜಿ ಮಹಮದ್ ಅನ್ವರ್ ಉಲ್ಲಾ (37) ಬಂಧಿತ ಆರೋಪಿ ಆಗಿದ್ದಾನೆ.

Bomb threat : ಮಲಗಲು ಬಿಡದ್ದಕ್ಕೆ ಮಸೀದಿಗೆ ಹುಸಿ ಬಾಂಬ್‌ ಇಟ್ಟ
Krishna Bhat

Cylinder Blast : ಸಿಲಿಂಡರ್‌ ಸ್ಫೋಟಕ್ಕೆ ಮನೆಯೇ ಧ್ವಂಸ; ಅವಶೇಷಗಳಡಿ ಸಿಲುಕಿ ಸಾವು

ಬಾಗಲಕೋಟೆ: ಸಿಲಿಂಡರ್ ‌ಸ್ಫೋಟಗೊಂಡು (Cylinder blast) ಇಡೀ ಮನೆಯೇ ಧ್ವಂಸಗೊಂಡು (House damaged) ಅದರ ಅವಶೇಷಗಳಡಿ ಸಿಲುಕಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ (Bagalakote News) ನಂದಿಕೇಶ್ವರ ಗ್ರಾಮದ ಆಶ್ರಯ ಕಾಲೋನಿಯಲ್ಲಿ ತಡರಾತ್ರಿ ನಡೆದಿದೆ. ಮಂಜುನಾಥ್ ಪಡಿಯಪ್ಪ ಮಾದರ (35) ಎಂಬವರೇ ಮೃತ ವ್ಯಕ್ತಿ.

Deepa S

ರಾಜ್ಯದ ಈ 15 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಮುಂದಿನ 24 ಗಂಟೆಯಲ್ಲಿ (ಜು.10) ಕರ್ನಾಟಕ ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ (Rain News) ಸಾಧ್ಯತೆ ಇದೆ. ಮಲೆನಾಡು ಭಾಗದಲ್ಲಿ ವರುಣ ಅಬ್ಬರಿಸಿದ್ದರೆ, ಒಳನಾಡಿನಲ್ಲಿ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Weather report) ಮುನ್ಸೂಚನೆಯನ್ನು ನೀಡಿದೆ.

Weather Report : ರಾಜ್ಯದ ಈ 15 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ
Exit mobile version