Site icon Vistara News

Karnataka Live news: ಬಿಜೆಪಿ-ಜೆಡಿಎಸ್‌ ಮೈತ್ರಿ ನಿಜ; ಸೀಟು ಹಂಚಿಕೆಯನ್ನು ಮೋದಿ-ಎಚ್‌ಡಿಕೆ ಡಿಸೈಡ್‌ ಮಾಡ್ತಾರೆ: ಎಚ್.ಡಿ. ದೇವೇಗೌಡ

karnataka live news

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುತ್ತದೆ ಎಂಬ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಅವರ ಹೇಳಿಕೆಯನ್ನು ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ, ಇನ್ನೂ ಸೀಟು ಹಂಚಿಕೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka Live news) ಇಲ್ಲಿ ಗಮನಿಸಿ.

Prabhakar R

ಸೆ.11ರಂದು ಬೆಂಗಳೂರು ಬಂದ್‌ ಹಿನ್ನೆಲೆ ಕೆಲ ಸಂಚಾರ ಮಾರ್ಗಗಳಲ್ಲಿ ಬದಲಾವಣೆ

ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ವತಿಯಿಂದ ಸೆ.11ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿರುವುದರಿಂದ ರಾಜಧಾನಿಯ ಕೆಲವೆಡೆ ಖಾಸಗಿ ಬಸ್‌, ಆಟೋ ಮಾಲೀಕರು, ಚಾಲಕರು ಪ್ರತಿಭಟನೆ, ರ‍್ಯಾಲಿ ನಡೆಸಲಿದ್ದಾರೆ. ಹೀಗಾಗಿ ಸಂಚಾರ ದಟ್ಟಣೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಪೊಲೀಸ್‌ ವಿಭಾಗ, ನಗರದ ಕೆಲ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಿದೆ.

Bengaluru Bandh: ಸೆ.11ರಂದು ಬೆಂಗಳೂರು ಬಂದ್‌ ಹಿನ್ನೆಲೆ ಕೆಲ ಸಂಚಾರ ಮಾರ್ಗಗಳಲ್ಲಿ ಬದಲಾವಣೆ
Prabhakar R

ಉದಯನಿಧಿ ಸ್ಟಾಲಿನ್ ಮಾತನಾಡಿದ್ದರಲ್ಲಿ ತಪ್ಪೇನಿದೆ; ಮತ್ತೊಮ್ಮೆ ಸಮರ್ಥಿಸಿಕೊಂಡ ಪ್ರಕಾಶ್‌ ರಾಜ್‌!

ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ದ ಉದಯನಿಧಿ ಸ್ಟಾಲಿನ್‌ಗೆ ಬೆಂಬಲ ಸೂಚಿಸಿದ್ದ ನಟ ಪ್ರಕಾಶ್‌ ರಾಜ್‌ ಅವರು, ಮತ್ತೊಮ್ಮೆ ತಮಿಳುನಾಡು ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ಅಮ್ಮ-ಅಪ್ಪನಿಗೆ ಹುಟ್ಟಿದ್ದೇನೆ ಎಂದು ವಿವಾದಿತ ಹೇಳಿಕೆ ನೀಡಿದ ಬೆನ್ನಲ್ಲೇ, ಇದೀಗ ಉದಯನಿಧಿ ಸ್ಟಾಲಿನ್ ಮಾತನಾಡಿದ್ದರಲ್ಲಿ ತಪ್ಪೇನಿದೆ ಎಂದು ಪ್ರಕಾಶ್‌ ರಾಜ್‌ (Prakash Raj) ಪ್ರಶ್ನಿಸಿದ್ದಾರೆ.

Prakash Raj: ಉದಯನಿಧಿ ಸ್ಟಾಲಿನ್ ಮಾತನಾಡಿದ್ದರಲ್ಲಿ ತಪ್ಪೇನಿದೆ; ಮತ್ತೊಮ್ಮೆ ಸಮರ್ಥಿಸಿಕೊಂಡ ಪ್ರಕಾಶ್‌ ರಾಜ್‌!
Deepa S

ಸೆ.11ಕ್ಕೆ ಕರಾವಳಿಯಲ್ಲಿ ಅಬ್ಬರಿಸುವ ಮಳೆ; ಮೀನುಗಾರಿಕೆಗೆ ಬ್ರೇಕ್‌

ರಾಜ್ಯದ ಹಲವೆಡೆ ಮಳೆ (Rain News) ಅಬ್ಬರ ಮುಂದುವರಿದಿದೆ. ಸೆ.11ರಂದು ಕರಾವಳಿಯ ಬಹುತೇಕ ಕಡೆಗಳಲ್ಲಿ ಹಾಗೂ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather Report) ನೀಡಿದೆ.

Weather Report : ಸೆ.11ಕ್ಕೆ ಕರಾವಳಿಯಲ್ಲಿ ಅಬ್ಬರಿಸುವ ಮಳೆ; ಮೀನುಗಾರಿಕೆಗೆ ಬ್ರೇಕ್‌
Deepa S

ಮಾತಾಡೋಕೆ ಕರೆಸಿಕೊಂಡು ಎತ್ಹಾಕ್ಕೊಂಡು ಹೋದ ಫ್ರೆಂಡ್ಸ್‌!

ಬೆಂಗಳೂರು: ಹಣಕಾಸಿನ ವಿಚಾರದಲ್ಲಿ ಶುರುವಾದ ಮನಸ್ತಾಪ ಕಿಡ್ನ್ಯಾಪ್‌ವರೆಗೂ (Kidnap Case) ಹೋಗಿ ರೌಡಿಶೀಟರ್ ಸೇರಿದಂತೆ ಮೂವರು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರ ಅತಿಥಿಗಳಾಗಿದ್ದಾರೆ. ಅರುಣ್ ಅಲಿಯಾಸ್ ಸುನಾಮಿ, ಕಿರಣ್ ಕುಮಾರ್, ಸೋಮಶೇಖರ್ ಬಂಧಿತ ಆರೋಪಿಗಳಾಗಿದ್ದಾರೆ.

Kidnap Case : ಮಾತಾಡೋಕೆ ಕರೆಸಿಕೊಂಡು ಎತ್ಹಾಕ್ಕೊಂಡು ಹೋದ ಫ್ರೆಂಡ್ಸ್‌!
Deepa S

ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕಂಟಲಗೆರೆಯಲ್ಲಿ ಕೆರೆಯಲ್ಲಿ ಈಜಲು ಹೋಗಿ ಬಾಲಕರಿಬ್ಬರು (Drown in lake) ಮೃತಪಟ್ಟಿದ್ದಾರೆ. ರಾಕೇಶ್(14), ಧನುಷ್(15) ಮೃತ ದುರ್ದೈವಿಗಳು.

Drown in lake : ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು
Exit mobile version