Site icon Vistara News

Karnataka Live news: ಬಿಜೆಪಿ-ಜೆಡಿಎಸ್‌ ಮೈತ್ರಿ ನಿಜ; ಸೀಟು ಹಂಚಿಕೆಯನ್ನು ಮೋದಿ-ಎಚ್‌ಡಿಕೆ ಡಿಸೈಡ್‌ ಮಾಡ್ತಾರೆ: ಎಚ್.ಡಿ. ದೇವೇಗೌಡ

karnataka live news

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುತ್ತದೆ ಎಂಬ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಅವರ ಹೇಳಿಕೆಯನ್ನು ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ, ಇನ್ನೂ ಸೀಟು ಹಂಚಿಕೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka Live news) ಇಲ್ಲಿ ಗಮನಿಸಿ.

Deepa S

ಬೈಕ್‌ ಸವಾರನ ಜೀವ ತೆಗೆದ ಕಾಂಕ್ರೀಟ್‌ ಮಿಕ್ಸಿಂಗ್‌ ಲಾರಿ

ಜೆಎಂಜೆ ರಸ್ತೆಯ ಜೂಡಿಯ ಶಾಪಿಂಗ್ ಮಾಲ್ ಬಳಿ ಕಾಂಕ್ರೀಟ್ ಲಾರಿ ಗುದ್ದಿ (Road Accident) ಪಾದಚಾರಿಯೊಬ್ಬರು ಭಾನುವಾರ ಬೆಳಗ್ಗೆ ಸಾವಿಗೀಡಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಬೈಕ್‌ ಕಾಂಕ್ರೀಟ್ ಮಿಕ್ಸಿಂಗ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ದೆವೇಂದ್ರಪ್ಪ (21) ಮೃತ ದುರ್ದೈವಿ.

Road Accident : ಬೈಕ್‌ ಸವಾರನ ಜೀವ ತೆಗೆದ ಕಾಂಕ್ರೀಟ್‌ ಮಿಕ್ಸಿಂಗ್‌ ಲಾರಿ
Adarsha Anche

JDS Politics : ಬಿಜೆಪಿ-ಜೆಡಿಎಸ್‌ ಮೈತ್ರಿ ನಿಜ; ಸೀಟು ಹಂಚಿಕೆಯನ್ನು ಮೋದಿ-ಎಚ್‌ಡಿಕೆ ಡಿಸೈಡ್‌ ಮಾಡ್ತಾರೆ: ಎಚ್.ಡಿ. ದೇವೇಗೌಡ

ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುತ್ತದೆ ಎಂಬ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಅವರ ಹೇಳಿಕೆಯನ್ನು ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ, ಇನ್ನೂ ಸೀಟು ಹಂಚಿಕೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

https://vistaranews.com/politics/jds-politics-bjp-jds-alliance-is-true-modi-hdk-will-decide-seat-sharing-says-hd-deve-gowda/450540.html

Deepa S

ಶಾಲೆ ಪಕ್ಕದಲ್ಲಿತ್ತು ಆಟೋ ಚಾಲಕನ ಡೆಡ್‌ಬಾಡಿ; ಇದು ಕೊಲೆಯೋ? ಆತ್ಮಹತ್ಯೆಯೋ?

ತುಮಕೂರಿನ ಶಿರಾಗೇಟ್ ಎಚ್ಎಂಎಸ್ ಶಾಲೆ ಬಳಿ ವ್ಯಕ್ತಿಯೊಬ್ಬನ ಶವ ಪತ್ತೆ (Deadbody Found) ಆಗಿದೆ. ಮೃತನನ್ನು ಗ್ಯಾಸ್ ವಿಜಯ್ ಎಂದು ಗುರುತಿಸಲಾಗಿದೆ. ಈತ ತುಮಕೂರಿನ ಅರಳಿಮರಪಾಳ್ಯದ ನಿವಾಸಿ (Self Harming) ಆಗಿದ್ದು, ಆಟೋ ಚಾಲಕನಾಗಿದ್ದ (Auto Driver) ಎನ್ನಲಾಗಿದೆ.

Self Harming : ಶಾಲೆ ಪಕ್ಕದಲ್ಲಿತ್ತು ಆಟೋ ಚಾಲಕನ ಡೆಡ್‌ಬಾಡಿ; ಇದು ಕೊಲೆಯೋ? ಆತ್ಮಹತ್ಯೆಯೋ?
Deepa S

ವಿದ್ಯುತ್‌ ಪ್ರವಹಿಸಿ ಚೆಸ್ಕಾಂ ಲೈನ್‌ ಮ್ಯಾನ್‌ ದುರ್ಮರಣ

ಕೊಡಗು : ವಿರಾಜಪೇಟೆ ಹೊರವಲಯದ ಕುಟ್ಟಂದಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ (Electric Shock) ಲೈನ್ ಮ್ಯಾನ್ (Line Man) ಮೃತಪಟ್ಟಿದ್ದಾರೆ. ವಿರಾಜಪೇಟೆ ಚೆಸ್ಕಾಂ ಸಿಬ್ಬಂದಿ ಬಸವರಾಜ್ ತೆಗ್ಗಿ (26) ಮೃತ ದುರ್ದೈವಿ.

Electric Shock : ವಿದ್ಯುತ್‌ ಪ್ರವಹಿಸಿ ಚೆಸ್ಕಾಂ ಲೈನ್‌ ಮ್ಯಾನ್‌ ದುರ್ಮರಣ
Deepa S

ನಾಳೆ ರಸ್ತೆಗಿಳಿಯಲ್ಲ ಸ್ಕೂಲ್‌ ಬಸ್‌, ವ್ಯಾನ್‌;‌ ಮಕ್ಕಳಿಗೆ ಶಾಲೆ ಇದ್ಯಾ? ಇಲ್ವಾ?

ಪೋಷಕರೇ ನೀವೇನಾದರೂ ಸೋಮವಾರ (ಸೆ.11) ಬೆಳಗ್ಗೆ ಮನೆ ಮುಂದೆ ಸ್ಕೂಲ್‌ ವ್ಯಾನ್‌, ಬಸ್‌, ಆಟೋ, ಕಾರು ಬರುತ್ತೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ ಎಂದುಕೊಂಡರೆ ತೊಂದರೆ ಗ್ಯಾರಂಟಿ. ಯಾಕೆಂದರೆ ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಸಾರಿಗೆ ಒಕ್ಕೂಟ ಸಮರಕ್ಕೆ ಮುಂದಾಗಿದ್ದು, ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿದೆ.

Bengaluru Bandh : ನಾಳೆ ರಸ್ತೆಗಿಳಿಯಲ್ಲ ಸ್ಕೂಲ್‌ ಬಸ್‌, ವ್ಯಾನ್‌;‌ ಮಕ್ಕಳಿಗೆ ಶಾಲೆ ಇದ್ಯಾ? ಇಲ್ವಾ?
Exit mobile version