Site icon Vistara News

Karnataka Live news: ಬಿಜೆಪಿ-ಜೆಡಿಎಸ್‌ ಮೈತ್ರಿ ನಿಜ; ಸೀಟು ಹಂಚಿಕೆಯನ್ನು ಮೋದಿ-ಎಚ್‌ಡಿಕೆ ಡಿಸೈಡ್‌ ಮಾಡ್ತಾರೆ: ಎಚ್.ಡಿ. ದೇವೇಗೌಡ

karnataka live news

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುತ್ತದೆ ಎಂಬ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಅವರ ಹೇಳಿಕೆಯನ್ನು ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ, ಇನ್ನೂ ಸೀಟು ಹಂಚಿಕೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka Live news) ಇಲ್ಲಿ ಗಮನಿಸಿ.

Deepa S

ಏರ್‌ಪೋರ್ಟ್‌ ಪ್ರಯಾಣಿಕರಿಗೆ ನಾಳೆ `ಮಂಡೆ’ ಬಿಸಿ; ಸರ್ಕಾರದ ವಿರುದ್ಧ ಸಾರಥಿಗಳ ಸಮರ

ಸರ್ಕಾರದ ವಿರುದ್ಧ ಖಾಸಗಿ‌ ಸಾರಿಗೆ ಒಕ್ಕೂಟ ಸಮರಕ್ಕೆ (Shakti Scheme) ಸಜ್ಜಾಗಿದೆ. ಭಾನುವಾರ ಮಧ್ಯರಾತ್ರಿಯಿಂದಲೇ ವಾಹನಗಳ ಓಡಾಟವನ್ನು ಬಂದ್‌ ಮಾಡಿ ಹೋರಾಟ (bengaluru bandh) ನಡೆಸಲಿದ್ದಾರೆ. ಸಾರಥಿಗಳ ಸಮರದಿಂದಾಗಿ (Private Transport) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ‌ ಬರುವ ಪ್ರಯಾಣಿಕರಿಗೆ ಬಂದ್‌ ಬಿಸಿ ತಟ್ಟಲಿದೆ. ಖಾಸಗಿ ಕ್ಯಾಬ್‌, ಟ್ಯಾಕ್ಸಿಗಳು ಯಾವುದು ಸಿಗದೆ ಇರುವುದರಿಂದ ಸ್ವಂತ ವಾಹನಗಳು ಅಥವಾ ಸರ್ಕಾರಿ ಬಸ್‌ನ್ನೇ ಅವಲಂಬಿಸಬೇಕಾಗಿದೆ.

Bengaluru Bandh : ಏರ್‌ಪೋರ್ಟ್‌ ಪ್ರಯಾಣಿಕರಿಗೆ ನಾಳೆ `ಮಂಡೆ’ ಬಿಸಿ; ಸರ್ಕಾರದ ವಿರುದ್ಧ ಸಾರಥಿಗಳ ಸಮರ
Adarsha Anche

Lok Sabha Election 2024 : ಸೀಟು ಹಂಚಿಕೆ ಚರ್ಚೆ ಆಗಿಲ್ಲ; ಸುಮಲತಾ ʼಅತಂತ್ರʼದ ಬಗ್ಗೆ ಎಚ್‌ಡಿಕೆ ಹೇಳಿದ್ದೇನು?

ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಮೈತ್ರಿ ಏರ್ಪಟ್ಟಿದೆ. ಇದರ ಅನುಸಾರ ಮಂಡ್ಯ ಸೇರಿದಂತೆ ನಾಲ್ಕು ಲೋಕಸಭಾ ಕ್ಷೇತ್ರಗಳು ದಳ ಪಾಲಾಗಿದೆ. ಹೀಗಾಗಿ ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಷ್‌ ಅತಂತ್ರರಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೆ ಈ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದ್ದಾರೆ.

https://vistaranews.com/politics/lok-sabha-election-2024-no-seat-sharing-discussion-hd-kumaraswamy-speaks-about-sumalatha-ambareesh/450353.html

Deepa S

ಕರಾವಳಿಯಲ್ಲಿ ವಿಪರೀತ ಮಳೆ; ಬೆಂಗಳೂರಲ್ಲೂ ಇರಲಿದೆ ಸಿಂಚನ

ಕರಾವಳಿಯಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ (Rain News) ಸಾಧ್ಯತೆ ಇದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ. ಮಲೆನಾಡಲ್ಲಿ ಜಿಟಿ ಜಿಟಿ ಮಳೆ (Weather report) ಇರಲಿದೆ. ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

Weather Report : ಕರಾವಳಿಯಲ್ಲಿ ವಿಪರೀತ ಮಳೆ; ಬೆಂಗಳೂರಲ್ಲೂ ಇರಲಿದೆ ಸಿಂಚನ
Adarsha Anche

Road Accident : ಇಬ್ಬರ ಜೀವ ತೆಗೆದ ನಾಯಿ! ಕಾರು ಪಲ್ಟಿಯಾಗಿ ಶಿಕ್ಷಕ ಸಾವು, ಲಾರಿ ಹರಿದು ಮಹಿಳೆ ಮೃತ್ಯು

ರಾಜ್ಯದ ಎರಡು ಕಡೆ ಭಾನುವಾರ ಪ್ರತ್ಯೇಕ ಅಪಘಾತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಈ ಎರಡೂ ಅಪಘಾತಕ್ಕೆ ನಾಯಿ ಕಾರಣವಾಗಿದೆ. ವಾಹನ ಚಾಲನೆ ವೇಳೆ ಅಡ್ಡ ಬಂದಿರುವುದೇ ಈ ಅವಘಡಕ್ಕೆ ಕಾರಣವಾಗಿದೆ.

Road Accident : ಇಬ್ಬರ ಜೀವ ತೆಗೆದ ನಾಯಿ! ಕಾರು ಪಲ್ಟಿಯಾಗಿ ಶಿಕ್ಷಕ ಸಾವು, ಲಾರಿ ಹರಿದು ಮಹಿಳೆ ಮೃತ್ಯು
Harish Kera

ಮೂರು ಬಾರಿ ಪರೀಕ್ಷೆ ನಿಯಮಕ್ಕೆ ತೀವ್ರ ವಿರೋಧ

ಬೆಂಗಳೂರು: ಶಿಕ್ಷಣ ಇಲಾಖೆಯ ಹೊರಡಿಸಿರುವ SSLC, PUC ವಿದ್ಯಾರ್ಥಿಗಳು 3 ಬಾರಿ ಪರೀಕ್ಷೆ ಬರೆಯಬೇಕು ಎಂಬ ಆದೇಶದ ವಿರುದ್ಧ ತೀವ್ರ ಅಸಮಾಧಾನದ ಕೂಗು ಕೇಳಿಬಂದಿದೆ. ಶಿಕ್ಷಣ ತಜ್ಞರ ಅಭಿಪ್ರಾಯವನ್ನೂ ಪಡೆಯದೇ ಈ ರೀತಿ ಆದೇಶ ಹೊರಡಿಸಿದ್ದು ಸರಿಯಲ್ಲ ಎಂದು ಖಾಸಗಿ ಶಾಲಾ ಒಕ್ಕೂಟ ಹೇಳಿದೆ.

Exit mobile version