Site icon Vistara News

Karnataka live news: BBMP ಕಚೇರಿಯಲ್ಲಿ ಬೆಂಕಿ ಅನಾಹುತ, 9 ಮಂದಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ

karnataka live news

ಬೆಂಗಳೂರು: ಬೆಂಗಳೂರಿನ ಬಿಬಿಎಂಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ಬೆಂಕಿ ಅನಾಹುತ ಸಂಭವಿಸಿದೆ. ಇಲ್ಲಿ ಪ್ರಯೋಗಾಲಯದಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಎಂಜಿನಿಯರ್‌ಗಳು ಸೇರಿದಂತೆ ಒಂಬತ್ತು ಮಂದಿಗೆ ಗಾಯವಾಗಿದೆ. ನಾಲ್ವರ ಸ್ಥಿತಿ ಗಂಭೀರವಾಗಿದೆ. ಇದರ ನಡುವೆ ಈ ವಿಚಾರದಲ್ಲಿ ರಾಜಕೀಯ ಆರೋಪ, ಪ್ರತ್ಯಾರೋಪಗಳೂ ನಡೆಯುತ್ತಿವೆ. ಜತೆಗೆ ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿ ಬೆಳವಣಿಗೆಗಳನ್ನು (Karnataka live news) ತಿಳಿಯಲು ಇಲ್ಲಿ ನೋಡಿ.

Prabhakar R

ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಆಕಸ್ಮಿಕವಲ್ಲ, ಬಿಜೆಪಿಯ ಷಡ್ಯಂತ್ರ ಎಂದ ಕಾಂಗ್ರೆಸ್‌!

ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ನಡೆದ ಅಗ್ನಿ ಅವಘಡದಲ್ಲಿ 9 ಮಂದಿ ಗಾಯಗೊಂಡಿದ್ದಾರೆ. ಆದರೆ, ಈ ಪ್ರಕರಣ ರಾಜಕೀಯ ತಿರುವು ಪಡೆದಿದೆ. ಪ್ರಕರಣವು (Fire Accident) ಆಕಸ್ಮಿಕವಲ್ಲ, ಇದು ಬಿಜೆಪಿಯ ಷಡ್ಯಂತ್ರ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ.

Fire Accident: ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಆಕಸ್ಮಿಕವಲ್ಲ, ಬಿಜೆಪಿಯ ಷಡ್ಯಂತ್ರ ಎಂದ ಕಾಂಗ್ರೆಸ್‌!
Prabhakar R

ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಬೆಂಕಿ; 9 ಮಂದಿಗೆ ಗಾಯ, ನಾಲ್ವರು ಗಂಭೀರ

ಬೆಂಗಳೂರಿನ ಬಿಬಿಎಂಪಿ ಮುಖ್ಯ ಕಚೇರಿಯ ಅಗ್ನಿ ಅವಘಡ ಸಂಭವಿಸಿದ್ದರಿಂದ 9 ಮಂದಿ ಗಾಯಗೊಂಡಿದ್ದು, ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಬಿಬಿಎಂಪಿ ಗುಣ ನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡದಲ್ಲಿ ಬೆಂಕಿ (Fire Accident) ಹೊತ್ತಿಕೊಂಡಿದೆ. ಮತ್ತೊಂದೆಡೆ ಕೊಠಡಿಗೆ ಬೆಂಕಿ ಬಿದ್ದಿರುವುದು ಆಕಸ್ಮಿಕವ್ಲ, ಷಡ್ಯಂತ್ರ. ಇದು ಬಿಜೆಪಿ ಕೃತ್ಯ, ಭ್ರಷ್ಟರನ್ನು ಹೆಡೆಮುರಿ ಕಟ್ಟುವುದು ನಿಶ್ಚಿತ ಎಂದು ರಾಜ್ಯ ಕಾಂಗ್ರೆಸ್‌ ಹೇಳಿರುವುದು ಕಂಡುಬಂದಿದೆ.

http://vistaranews.com/karnataka/fire-accident-fire-breaks-out-at-bbmp-headquarters-more-than-8-injured-at-bangalore/423790.html

Deepa S

ದಕ್ಷಿಣ ಒಳನಾಡಲ್ಲಿ ನಾಳೆ ಮಳೆ; ಬೆಂಗಳೂರಲ್ಲೂ ಬರುತ್ತಾ?

ರಾಜ್ಯದಲ್ಲಿ ನೈರುತ್ಯ ಮುಂಗಾರು (Southwest monsoon) ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಆದರೆ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಮುಂದಿನ 24 ಗಂಟೆಯಲ್ಲಿ ಮಲೆನಾಡು, ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಮಧ್ಯಮ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ.

Weather Report : ದಕ್ಷಿಣ ಒಳನಾಡಲ್ಲಿ ನಾಳೆ ಮಳೆ; ಬೆಂಗಳೂರಲ್ಲೂ ಬರುತ್ತಾ?
Deepa S

ರಾತ್ರಿ ಕಾಣೆಯಾದವಳು ಬೆಳಗ್ಗೆ ಮನೆ ಮುಂದೆ ಶವವಾಗಿ ಪತ್ತೆ

ಮಹದೇವಪುರ ಲಕ್ಷ್ಮಿಸಾಗರ ಲೇಔಟ್‌ನಲ್ಲಿ ಯುವತಿಯೊಬ್ಬಳು ಶವವಾಗಿ (Dead body Found) ಪತ್ತೆ ಆಗಿದ್ದಾಳೆ. ಮಹಾನಂದ (21) ಮೃತ ದುರ್ದೈವಿ.

Crime News : ರಾತ್ರಿ ಕಾಣೆಯಾದವಳು ಬೆಳಗ್ಗೆ ಮನೆ ಮುಂದೆ ಶವವಾಗಿ ಪತ್ತೆ!
Deepa S

ಪ್ರೀತಿಸಿ ಮದುವೆಯಾದವಳು ಅನುಮಾನಾಸ್ಪದ ಸಾವು

ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ಗೃಹಿಣಿ ಅನುಮಾನಾಸ್ಪದವಾಗಿ (Suspicious death) ಮೃತಪಟ್ಟಿದ್ದಾಳೆ. ಮೈಸೂರಿನ ದರ್ಶಿನಿ (21) ಮೃತ ದುರ್ದೈವಿ.

Suspicious death : ಪ್ರೀತಿಸಿ ಮದುವೆಯಾದವಳ ಅನುಮಾನಾಸ್ಪದ ಸಾವು
Exit mobile version