ಬೆಂಗಳೂರು: ಬೆಂಗಳೂರಿನ ಬಿಬಿಎಂಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ಬೆಂಕಿ ಅನಾಹುತ ಸಂಭವಿಸಿದೆ. ಇಲ್ಲಿ ಪ್ರಯೋಗಾಲಯದಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಎಂಜಿನಿಯರ್‌ಗಳು ಸೇರಿದಂತೆ ಒಂಬತ್ತು ಮಂದಿಗೆ ಗಾಯವಾಗಿದೆ. ನಾಲ್ವರ ಸ್ಥಿತಿ ಗಂಭೀರವಾಗಿದೆ. ಇದರ ನಡುವೆ ಈ ವಿಚಾರದಲ್ಲಿ ರಾಜಕೀಯ ಆರೋಪ, ಪ್ರತ್ಯಾರೋಪಗಳೂ ನಡೆಯುತ್ತಿವೆ. ಜತೆಗೆ ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿ ಬೆಳವಣಿಗೆಗಳನ್ನು (Karnataka live news) ತಿಳಿಯಲು ಇಲ್ಲಿ ನೋಡಿ.
ರಾಯಚೂರಿನಲ್ಲಿ ಅರೆಬೆತ್ತಲೆ ಕಳ್ಳರ ಹಾವಳಿ
ರಾತ್ರಿ ದಾರಿಹೋಕರನ್ನು ಅಡ್ಡಗಟ್ಟಿ ದೋಚುವ, ಮನೆ-ಮನೆಗೆ ನುಗ್ಗಿ ಕಳವು (Theft case) ಮಾಡುವ ಅಪಾಯಕಾರಿ ಚೆಡ್ಡಿ ಗ್ಯಾಂಗ್ (Cheddi gang) ಹಿಂದೊಮ್ಮೆ ಬೆಂಗಳೂರಲ್ಲಿ ಕಾಣಿಸಿಕೊಂಡಿತ್ತು. ಈಗ ರಾಯಚೂರು ಜಿಲ್ಲೆಯಲ್ಲಿ ʻಬರಿ ಮೈಯಲ್ಲಿ ಬರುವ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.
Theft Case : ಬೆಂಗಳೂರಲ್ಲಿ ಚೆಡ್ಡಿ ಗ್ಯಾಂಗ್ ಆಯ್ತು, ಈಗ ರಾಯಚೂರಿನಲ್ಲಿ ಅರೆಬೆತ್ತಲೆ ಕಳ್ಳರ ಹಾವಳಿ!
ಮಲಗಿದ್ದಲ್ಲೇ ನಿಂತು ಹೋಯ್ತು ಕಾನ್ಸ್‌ಟೇಬಲ್ ಹೃದಯ ಬಡಿತ
ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ಹೃದಯಾಘಾತದಿಂದ (Heart Attack) ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮೊನ್ನೆಯಷ್ಟೇ ಹಾವೇರಿ, ಕೊಡಗಿನಲ್ಲಿ ಹೃದಯಾಘಾತವಾಗಿ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ರಾಯಚೂರಿನಲ್ಲಿ ಹೃದಯಾಘಾತಕ್ಕೆ ಪೊಲೀಸ್ ಕಾನ್ಸ್‌ಟೇಬಲ್ (police constable) ಮೃತಪಟ್ಟಿದ್ದಾರೆ.
Heart Attack : ಮಲಗಿದ್ದಲ್ಲೇ ನಿಂತು ಹೋಯ್ತು ಕಾನ್ಸ್‌ಟೇಬಲ್ ಹೃದಯ ಬಡಿತ!
ಚುಮು ಚುಮು ಚಳಿ ಜತೆಗೆ ಜಿಟಿಜಿಟಿ ಮಳೆ ಸಾಥ್
ಐದು ದಿನಗಳು ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯ ಹಲವು ಕಡೆ (Rain News) ಮಳೆಯಾಗಲಿದೆ. ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರುವ ಸಾಧ್ಯತೆ ಇದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ (Weather report) ಮಳೆಯಾಗಲಿದೆ.
Weather report : ಚುಮು ಚುಮು ಚಳಿ ಜತೆಗೆ ಜಿಟಿಜಿಟಿ ಮಳೆ ಸಾಥ್