Site icon Vistara News

Karnataka Live News: ಶಾಲಾ ಆವರಣದಲ್ಲಿ ಶಿಕ್ಷಣೇತರ ಚಟುವಟಿಕೆಗೆ ಬ್ರೇಕ್‌; ಸುತ್ತೋಲೆ

suvarna soudha

ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನದ ಎರಡನೇ ವಾರದ ಕಲಾಪ ಇಂದು ಶುರುವಾಗಿದೆ. ಬಿಜೆಪಿ ನಾಯಕರು ಜಮೀರ್‌ ಅಹಮದ್‌ ಖಾನ್‌ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಇತ್ತ ಅದೇ ಬೆಳಗಾವಿಯಲ್ಲಿ ಅಮಾನವೀಯ ಘಟನೆಗೆ ಸಾಕ್ಷಿಯಾಗಿದೆ. ಹುಡುಗಿ ಜತೆಗೆ ಯುವಕ ಮನೆ ಬಿಟ್ಟು ಹೋದನೆಂದು, ಆತನ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳಿಗಾಗಿ (Karnataka Live News) ಇಲ್ಲಿ ಗಮನಿಸಿ.

Prabhakar R

Acid Attack: ಹಸುಗಳ ಮೇಲೆ ಆ್ಯಸಿಡ್ ಎರಚಿ ಪೈಶಾಚಿಕ ಕೃತ್ಯ ಮೆರೆದ ಕ್ರೈಸ್ತ ವೃದ್ಧೆ

ಮನೆಯ ಬಳಿ ಹುಲ್ಲು ಮೇಯಲು ಬಂದ ಹಸುಗಳ ಮೇಲೆ ಕ್ರೈಸ್ತ ವೃದ್ಧೆಯೊಬ್ಬರು ಆ್ಯಸಿಡ್ ಎರಚಿ (Acid Attack) ಪೈಶಾಚಿಕ ಕೃತ್ಯವೆಸಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿ ಗುಣಿ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಆ್ಯಸಿಡ್ ಎರಚಿದ ಹಿನ್ನೆಲೆಯಲ್ಲಿ 10ಕ್ಕೂ ಹೆಚ್ಚು ಹಸುಗಳು ಗಾಯಗೊಂಡಿದ್ದು, ನೋವು ತಾಳಲಾರದೇ ರೋದಿಸುತ್ತಿವೆ.

Acid Attack: ಹಸುಗಳ ಮೇಲೆ ಆ್ಯಸಿಡ್ ಎರಚಿ ಪೈಶಾಚಿಕ ಕೃತ್ಯ ಮೆರೆದ ಕ್ರೈಸ್ತ ವೃದ್ಧೆ

Prabhakar R

ಹಿಂದು ʼಅಶ್ಲೀಲʼ ಪದ ಹೇಳಿಕೆ; ಸಚಿವ ಸತೀಶ್ ಜಾರಕಿಹೊಳಿಗೆ ಕೋರ್ಟ್‌ ನೋಟಿಸ್

ಹಿಂದು ಧರ್ಮದ‌ ಕುರಿತ ಕಾಂಗ್ರೆಸ್‌ ಸಚಿವ ಸತೀಶ್ ಜಾರಕಿಹೊಳಿ ಅವರ ಆಕ್ಷೇಪಾರ್ಹ ಹೇಳಿಕೆ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಹಿಂದು ಧರ್ಮದ‌ ಬಗ್ಗೆ ಅವಹೇಳನಕಾರಿ ಮತ್ತು ಪ್ರಚೋದನಾಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ದೂರು‌‌ ದಾಖಲಾಗಿದ್ದರಿಂದ ಸತೀಶ್ ಜಾರಕಿಹೊಳಿಗೆ (Satish Jarkiholi) ನ್ಯಾಯಾಲಯ ನೋಟಿಸ್‌ ನೀಡಿದೆ.

https://vistaranews.com/karnataka/court-issues-notice-to-minister-satish-jarkiholi-for-making-objectionable-remarks-on-hinduism/530380.html

Prabhakar R

ಕ್ರಷರ್ ಲಾರಿ ಹರಿದು ವ್ಯಕ್ತಿ ದಾರುಣ ಸಾವು; ನಜ್ಜುಗುಜ್ಜಾದ ದೇಹ

ಕ್ರಷರ್ ಲಾರಿ ಹರಿದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ (Road Accident) ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಗೇಟ್‌ ಬಳಿ ನಡೆದಿದೆ. ಲಾರಿ ಹರಿದಿದ್ದರಿಂದ ವ್ಯಕ್ತಿಯ ದೇಹ ಸಂಪೂರ್ಣ ನಜ್ಜುಗುಜ್ಜಾಗಿದೆ.

ಡಿ.14ರಿಂದ 17ರವರೆಗೆ ಕರುನಾಡ ಸಂಭ್ರಮ-2023; ರಮೇಶ್ ಅರವಿಂದ್‌ಗೆ ಕನ್ನಡ ಕಲಾಭೂಷಣ ಪ್ರಶಸ್ತಿ

Prabhakar R

ಶಾಲಾ ಆವರಣದಲ್ಲಿ ಶಿಕ್ಷಣೇತರ ಚಟುವಟಿಕೆಗೆ ಬ್ರೇಕ್‌; ಶಿಕ್ಷಣ ಇಲಾಖೆ ಸುತ್ತೋಲೆ

ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಆವರಣ ಅಥವಾ ಮೈದಾನವನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಇನ್ನಿತರ ಯಾವುದೇ ಚಟುವಟಿಕೆಗಳಿಗೆ ಬಳಸಿಕೊಳ್ಳಬಾರದು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.

Education Department: ಶಾಲಾ ಆವರಣದಲ್ಲಿ ಶಿಕ್ಷಣೇತರ ಚಟುವಟಿಕೆಗೆ ಬ್ರೇಕ್‌; ಶಿಕ್ಷಣ ಇಲಾಖೆ ಸುತ್ತೋಲೆ

Deepa S

ಧರ್ಮಸ್ಥಳದಲ್ಲಿ ಅಬ್ಬರಿಸಿರುವ ಮಳೆ; ನಾಳೆಯೂ ಭಾರಿ ವರ್ಷಧಾರೆ!

ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಅಬ್ಬರದ (Rain News) ಮಳೆಯಾಗುತ್ತಿದೆ. ನಿನ್ನೆ ಭಾನುವಾರ ಕರಾವಳಿಯ ಕೆಲವು ಕಡೆಗಳಲ್ಲಿ, ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ (Karnataka weather Forecast) ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಒಣಹವೆ (Dry weather) ಇತ್ತು. ದಕ್ಷಿಣ ಕನ್ನಡದ ಧರ್ಮಸ್ಥಳದಲ್ಲಿ 10 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ.

Karnataka weather : ಧರ್ಮಸ್ಥಳದಲ್ಲಿ ಅಬ್ಬರಿಸಿರುವ ಮಳೆ; ನಾಳೆಯೂ ಭಾರಿ ವರ್ಷಧಾರೆ!
Exit mobile version