ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನದ ಎರಡನೇ ವಾರದ ಕಲಾಪ ಇಂದು ಶುರುವಾಗಿದೆ. ಬಿಜೆಪಿ ನಾಯಕರು ಜಮೀರ್ ಅಹಮದ್ ಖಾನ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಇತ್ತ ಅದೇ ಬೆಳಗಾವಿಯಲ್ಲಿ ಅಮಾನವೀಯ ಘಟನೆಗೆ ಸಾಕ್ಷಿಯಾಗಿದೆ. ಹುಡುಗಿ ಜತೆಗೆ ಯುವಕ ಮನೆ ಬಿಟ್ಟು ಹೋದನೆಂದು, ಆತನ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳಿಗಾಗಿ (Karnataka Live News) ಇಲ್ಲಿ ಗಮನಿಸಿ.
JDS National President: ದೇವೇಗೌಡರಿಗೆ ಗೇಟ್ ಪಾಸ್; ಜೆಡಿಎಸ್ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾಣು!
ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಘೋಷಿಸಿದ ಬಳಿಕ ದಳ ಇಬ್ಭಾಗವಾಗಿದೆ. ಸಿಎಂ ಇಬ್ರಾಹಿಂ ಸೇರಿ ಹಲವು ಅಲ್ಪಸಂಖ್ಯಾತ ಮುಖಂಡರು ದಳಪತಿಗಳ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಆದರೆ, ಇದೀಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್.ಡಿ. ದೇವೇಗೌಡರನ್ನು ನಿರಾಕರಿಸಿರುವ ಬಂಡಾಯ ನಾಯಕರು, ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ (JDS National President) ಸಿ.ಕೆ.ನಾಣು ಅವರನ್ನು ನೇಮಕ ಮಾಡಿದ್ದಾರೆ.
JDS National President: ದೇವೇಗೌಡರಿಗೆ ಗೇಟ್ ಪಾಸ್; ಜೆಡಿಎಸ್ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾಣು!
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ ಬ್ರಹ್ಮಚಾರಿ ಸಂಘ; ರಾಹುಲ್ ಗಾಂಧಿ ಉದ್ಘಾಟನೆ
ಮಂಡ್ಯದ ಬ್ರಹ್ಮಚಾರಿಗಳು ದೇಶಾದ್ಯಂತ ಬ್ರಹ್ಮಚಾರಿ (Brahmachari Sangha) ಸಂಘಟನೆ ವಿಸ್ತರಿಸಲು ಮುಂದಾಗಿದ್ದಾರೆ. ಅಖಿಲ ಭಾರತೀಯ ಬ್ರಹ್ಮಚಾರಿಗಳ ಸಂಘಕ್ಕೆ ಅಧ್ಯಕ್ಷರಾಗಲು ಕಾಂಗ್ರೆಸ್‌ನ ಕೇಂದ್ರ ನಾಯಕ ರಾಹುಲ್ ಗಾಂಧಿ (Ragul Gandi) ಅವರಿಗೆ ಆಹ್ವಾನ ಕೊಟ್ಟಿದ್ದಾರೆ. ರೈತರ ಮಕ್ಕಳಿಗೆ ಹೆಣ್ಣು ಕೊಡದ ಕಾರಣಕ್ಕೆ ಬೇಸತ್ತು ಹೋಗಿರುವ ಮಂಡ್ಯ ಹೈಕಳು, ಇದೀಗ ಜನರಿಗೆ ಅರಿವು ಮೂಡಿಸಲು ಬ್ರಹ್ಮಚಾರಿ ಸಂಘವನ್ನು (Demand for bride) ಕಟ್ಟಿಕೊಂಡಿದ್ದಾರೆ.
Demand for bride : ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ ಬ್ರಹ್ಮಚಾರಿ ಸಂಘ; ರಾಹುಲ್ ಗಾಂಧಿ ಅಧ್ಯಕ್ಷ!
ಭೀಕರ ಅಪಘಾತದಲ್ಲಿ ಬಸ್ ಛಿದ್ರ; ಡಾ.ರಾಜಕುಮಾರ್ ಫೋಟೊ ಮಾತ್ರ ಭದ್ರ!
ಸದಾಶಿವ ಆಯೋಗ ಜಾರಿಗೆ ಆಗ್ರಹಿಸಿ ಒಂದಷ್ಟು ಹೋರಾಟಗಾರರು ಬೆಳಗಾವಿ ಅಧಿವೇಶನದ ಸಮಯದಲ್ಲಿ ಪ್ರತಿಭಟಿಸಲು ಯೋಜಿಸಿದ್ದರು. ಅದರಂತೆ ತಡರಾತ್ರಿ ಖಾಸಗಿ ಬಸ್ ಮಾಡಿಕೊಂಡು ತೆರಳುತ್ತಿದ್ದರು. ಆದರೆ ದುರಾದೃಷ್ಟ ಎಂಬಂತೆ ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವಾಗ ಭೀಕರ ಅಪಘಾತ (Road Accident ) ಸಂಭವಿಸಿದೆ.
Road Accident : ಭೀಕರ ಅಪಘಾತದಲ್ಲಿ ಬಸ್ ಛಿದ್ರ; ಡಾ.ರಾಜಕುಮಾರ್ ಫೋಟೊ ಮಾತ್ರ ಭದ್ರ!
ಮಹಿಳೆಯನ್ನು ಬೆತ್ತಲೆಗೊಳಿಸಿದ ಕಿರಾತಕರು ಅರೆಸ್ಟ್; ಓಡಿಹೋದ ಪ್ರೇಮಿಗಳಿಗೆ ಸರ್ಚ್!
ಬೆಳಗಾವಿ ತಾಲೂಕಿನ ವಂಟಮೂರಿಯಲ್ಲಿ ತಡರಾತ್ರಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ (Assault Case) ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ. ತೀವ್ರ ಹಲ್ಲೆಗೊಳಗಾಗಿರುವ ಕಮಲವ್ವ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೃಹಸಚಿವ ಪರಮೇಶ್ವರ್ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯ ಆರೋಗ್ಯ ವಿಚಾರಿಸಿದರು.
Assault Case: ಮಹಿಳೆಯನ್ನು ಬೆತ್ತಲೆಗೊಳಿಸಿದ ಕಿರಾತಕರು ಅರೆಸ್ಟ್; ಓಡಿಹೋದ ಪ್ರೇಮಿಗಳಿಗೆ ಸರ್ಚ್!