ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನದ ಎರಡನೇ ವಾರದ ಕಲಾಪ ಇಂದು ಶುರುವಾಗಿದೆ. ಬಿಜೆಪಿ ನಾಯಕರು ಜಮೀರ್ ಅಹಮದ್ ಖಾನ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಇತ್ತ ಅದೇ ಬೆಳಗಾವಿಯಲ್ಲಿ ಅಮಾನವೀಯ ಘಟನೆಗೆ ಸಾಕ್ಷಿಯಾಗಿದೆ. ಹುಡುಗಿ ಜತೆಗೆ ಯುವಕ ಮನೆ ಬಿಟ್ಟು ಹೋದನೆಂದು, ಆತನ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳಿಗಾಗಿ (Karnataka Live News) ಇಲ್ಲಿ ಗಮನಿಸಿ.
ಆವಾಜ್ ಹಾಕಿದ್ದಕ್ಕೆ ಹೆಣವಾದ ಆಟೋ ಡ್ರೈವರ್!
ಕಳೆದ ಡಿ.6 ರಾತ್ರಿಯಂದು ಬ್ಯಾಟರಾಯನಪುರದಲ್ಲಿ ಆಟೋ ಚಾಲಕನಾಗಿ (auto Driver) ಕೆಲಸ ಮಾಡುತ್ತಿದ್ದ ಅರುಣ್ ಎಂಬಾತನ ಬರ್ಬರ (Murder case) ಕೊಲೆಯಾಗಿತ್ತು. ಇದೀಗ 11 ಮಂದಿ ಕೊಲೆಗಾರರನ್ನು ಪೊಲೀಸರು ಬಂಧಿಸಿದ್ದಾರೆ.
Murder Case: ಆವಾಜ್ ಹಾಕಿದ್ದಕ್ಕೆ ಹೆಣವಾದ ಆಟೋ ಡ್ರೈವರ್!
ಪ್ರೀತಿಸಿದವಳ ಜತೆಗೆ ಓಡಿಹೋದ ಯುವಕ; ತಾಯಿಯನ್ನೇ ಬೆತ್ತಲೆಗೊಳಿಸಿದ ಕ್ರೂರಿಗಳು!
ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ (Assault Case) ನಡೆಸಿರುವ ಅಮಾನವೀಯ ಘಟನೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ನಡೆದಿದೆ. ಯುವಕನೊಬ್ಬ ಪ್ರೀತಿಸಿದ ಯುವತಿ ಜತೆಗೆ ಮನೆ ಬಿಟ್ಟು ಓಡಿ ಹೋಗಿದ್ದ. ಇದರಿಂದ ಆಕ್ರೋಶಗೊಂಡು ಯುವಕನ ತಾಯಿಯನ್ನೇ ಬೆತ್ತಲೆಗೊಳಿಸಿದ ದುರುಳರು ದುರ್ವರ್ತನೆ ತೋರಿದ್ದಾರೆ.
Assault Case: ಪ್ರೀತಿಸಿದವಳ ಜತೆಗೆ ಓಡಿಹೋದ ಯುವಕ; ತಾಯಿಯನ್ನೇ ಬೆತ್ತಲೆಗೊಳಿಸಿದ ಕ್ರೂರಿಗಳು!
ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
ಬೆಳಗಾವಿ: ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಸಿಎಂ ಸಿದ್ದರಾಮಯ್ಯ ಕರೆದಿದ್ದಾರೆ. ಕಳೆದ ಬುಧವಾರ ನಡೆದ ಸಭೆಯಲ್ಲಿ ಸಚಿವರ ವಿರುದ್ಧ ಶಾಸಕರು ಸಿಡಿದಿದ್ದರು. ಪರಿಣಾಮ ಸಿಎಲ್‌ಪಿ ಸಭೆ ಮೊಟಕಾಗಿತ್ತು. ಇದೀಗ ಸಿಎಂ ಶಾಸಕರಿಗೆ ಅನುದಾನದ ಅಭಯ ನೀಡಿದ್ದು, ಅಧಿವೇಶನದಲ್ಲಿ ಒಟ್ಟಾಗಿ ವಿಪಕ್ಷ ದಾಳಿ ಎದುರಿಸುವ ನಿಟ್ಟಿನಲ್ಲಿ ತಂತ್ರಗಾರಿಕೆಗಾಗಿ ಸಭೆ ಕರೆದಿದ್ದಾರೆ.