Site icon Vistara News

Karnataka Live News: ರಾಜ್ಯದ ಇಂದಿನ ಪ್ರಮುಖ ಸುದ್ದಿಗಳು; ಎಐಸಿಸಿ ನಾಯಕರ ಸಭೆಗೆ ಸಚಿವರ ದೌಡು

karnataka today news live vistara news 31 dec

ಬೆಂಗಳೂರು: ರಾಜ್ಯ ಸರ್ಕಾರದ ಸಚಿವರು ಎಐಸಿಸಿ ಬುಲಾವ್‌ನಂತೆ ದಿಲ್ಲಿಗೆ ತೆರಳಿದ್ದು, ಸಚಿವರ ಮೌಲ್ಯಮಾಪನ ನಡೆಯಲಿದೆ. ಜೊತೆಗೆ ಡಿಸಿಎಂ ನೇಮಕ ಕುರಿತು ಚರ್ಚೆಯಾಗಲಿದೆ. ಇದರೊಂದಿಗೆ ರಾಜ್ಯದ ಇನ್ನಷ್ಟು ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಬೆಳವಣಿಗೆಗಳ (Karnataka Live News) ಬಗ್ಗೆ ತಿಳಿಯಲು ಇಲ್ಲಿ ಗಮನಿಸಿ.

Deepa S

Lorry strike : ಜ.17ಕ್ಕೆ ಲಾರಿ ಚಾಲಕರ ಹಿಟ್‌; ಪೆಟ್ರೋಲ್‌, ಡೀಸೆಲ್‌ ಸಿಗದೇ ಸವಾರರಿಗೆ ಆಗುತ್ತಾ ಎಫೆಕ್ಟ್‌

ಹಿಟ್‌ ಆ್ಯಂಡ್‌ ರನ್‌ (Hit And Run law) ಅಪಘಾತ ಪ್ರಕರಣದಲ್ಲಿ ಹೊಸ ತಿದ್ದುಪಡಿ ಕೈ ಬಿಡುವಂತೆ ಆಗ್ರಹಿಸಿ ಜನವರಿ 17 ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ (Lorry strike) ಕರೆ ನೀಡಲಾಗಿದೆ. ಇದರಿಂದಾಗಿ ಅಗತ್ಯ ವಸ್ತುಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

Lorry strike : ಜ.17ಕ್ಕೆ ಲಾರಿ ಚಾಲಕರ ಮುಷ್ಕರ; ಪೆಟ್ರೋಲ್‌, ಡೀಸೆಲ್‌ ಸಿಗದೇ ಸವಾರರಿಗೆ ಆಗುತ್ತಾ ಎಫೆಕ್ಟ್‌
Deepa S

Suspicious Case : ಹೆಂಡ್ತಿಗೆ ಅಕ್ರಮ ಸಂಬಂಧ ಶಂಕೆ; ಬಾತ್‌ರೂಮಿನಲ್ಲಿ ಜಾರಿ ಬಿದ್ದನಾ, ಕೊಲೆಯಾದನಾ ಗಂಡ

ಮೇಲ್ನೋಟಕ್ಕೆ ಅದೊಂದು ಆಕಸ್ಮಿಕ ಸಾವೆಂದು ದೂರು ದಾಖಲಾದರೂ, ಪೊಲೀಸರಿಗೆ ಮಾತ್ರ ಅನುಮಾನದ ವಾಸನೆ (Suspicious Case) ಬಡಿದಿತ್ತು. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಮನೆಯೊಂದರಲ್ಲಿ ವೆಂಕಟರಮಣ ನಾಯ್ಕ್ ಎಂಬಾತ ಬಾತ್‌ ರೂಮ್‌ನಲ್ಲಿ ಬಿದ್ದು ಮೃತಪಟ್ಟಿದ್ದರು. ಮೃತನ ಪತ್ನಿ ನಂದಿನಿ ಎಂಬಾಕೆ ಪತಿ ಬಾತ್‌ರೂಮ್‌ನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದಳು. ಮೇಲ್ನೋಟಕ್ಕೆ ಆಕಸ್ಮಿಕ ಸಾವಿನಂತೆ ಕಂಡರೂ, ಕ್ರೈಂ ಸೀನ್ ನೋಡಿದ ಪೊಲೀಸರಿಗೆ ಮಾತ್ರ ಹಲವು ಅನುಮಾನಗಳನ್ನು ಮೂಡಿಸಿತ್ತು.

Suspicious Case : ಹೆಂಡ್ತಿಗೆ ಅಕ್ರಮ ಸಂಬಂಧ ಶಂಕೆ; ಬಾತ್‌ರೂಮಿನಲ್ಲಿ ಜಾರಿ ಬಿದ್ದನಾ, ಕೊಲೆಯಾದನಾ ಗಂಡ
Deepa S

Karnataka weather : ರಾಜ್ಯದಲ್ಲಿ ಮಂಕಾದ ಮಳೆ; ಜೋರಾಗಿ ಬೀಸಲಿದೆ ಥಂಡಿ ಗಾಳಿ

ರಾಜ್ಯದಲ್ಲಿ ನಾಲ್ಕೈದು ದಿನಗಳಿಂದ ಅಬ್ಬರಿಸಿದ್ದ ಮಳೆಯು (Rain News) ಮಾಯವಾಗಿದೆ. ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka weather Forecast) ಮುನ್ಸೂಚನೆಯನ್ನು ನೀಡಿದೆ.

Karnataka weather : ರಾಜ್ಯದಲ್ಲಿ ಮಂಕಾದ ಮಳೆ; ಜೋರಾಗಿ ಬೀಸಲಿದೆ ಥಂಡಿ ಗಾಳಿ
Deepa S

Mount Carmel College : ಕೋ ಎಜುಕೇಶನ್‌ಗೆ ಮೌಂಟ್‌ ಕಾರ್ಮೆಲ್‌ ಮುಕ್ತ; ಹುಡುಗರು ಬೇಡ ಅಂದ್ರಾ ಹೆಣ್ಮಕ್ಕಳು!?

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ (Mount Carmel College) ಮುಂದಿನ ಶೈಕ್ಷಣಿಕ ವರ್ಷದಿಂದ ಸಹ ಶಿಕ್ಷಣ (ಕೋ ಎಡ್‌) ನೀಡಲು ಮುಂದಾಗುತ್ತಿದೆ. 75 ವರ್ಷಗಳ ನಂತರ ಮೌಂಟ್ ಕಾರ್ಮೆಲ್ ಕಾಲೇಜು (ಎಂಸಿಸಿ) ಕೋ-ಎಡ್‌ಗೆ ಬದಲಾಗಲು ಸಜ್ಜಾಗಿದೆ. ಆದರೆ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ಪೋಷಕರು, ವಿದ್ಯಾರ್ಥಿನಿಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Mount Carmel College : ಕೋ ಎಜುಕೇಶನ್‌ಗೆ ಮೌಂಟ್‌ ಕಾರ್ಮೆಲ್‌ ಮುಕ್ತ; ಹುಡುಗರು ಬೇಡ ಅಂದ್ರಾ ಹೆಣ್ಮಕ್ಕಳು!?
Deepa S

Murder Case : ಒಂಟಿ ಮಹಿಳೆ ಕೊಲೆ ಕೇಸ್‌; ಹಣದಾಸೆಗೆ ಉಂಡ ಮನೆಗೆ ಕನ್ನ ಹಾಕಿದ ಕಿರಾತಕ ಅರೆಸ್ಟ್‌

ಹಣದಾಸೆಗೆ ನೆರೆಹೊರೆಯವರು, ಪರಿಚಿತರೇ ಕೊಲೆಗಡುಕರಾದರೆ, ಯಾರನ್ನಾ ನಂಬುವುದು ಬಿಡುವುದು. ಸದ್ಯ ಬೆಂಗಳೂರಿನಲ್ಲಿ ನಡೆದಿದ್ದ ಒಂಟಿ ಮಹಿಳೆ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಜೈಲಿಗಟ್ಟಿದ್ದಾರೆ. ಕಳೆದ ಜನವರಿ 4ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆಯ ಕತ್ತು ಹಿಸುಕಿ ಕೊಲೆ (Murder case) ಮಾಡಲಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟದಾಸನಪುರದ ಸಾಯಿ ಶಕ್ತಿ ಬಡಾವಣೆಯ ಗಂಗಾ ಬ್ಲಾಕ್‌ನಲ್ಲಿ ಘಟನೆ ನಡೆದಿತ್ತು. ನೀಲಂ (30) ಎಂಬಾಕೆ ಹತ್ಯೆಯಾಗಿದ್ದರು.

Murder Case : ಒಂಟಿ ಮಹಿಳೆ ಕೊಲೆ ಕೇಸ್‌; ಹಣದಾಸೆಗೆ ಉಂಡ ಮನೆಗೆ ಕನ್ನ ಹಾಕಿದ ಕಿರಾತಕ ಅರೆಸ್ಟ್‌
Exit mobile version