ಬೆಂಗಳೂರು: ರಾಜ್ಯ ಸರ್ಕಾರದ ಸಚಿವರು ಎಐಸಿಸಿ ಬುಲಾವ್‌ನಂತೆ ದಿಲ್ಲಿಗೆ ತೆರಳಿದ್ದು, ಸಚಿವರ ಮೌಲ್ಯಮಾಪನ ನಡೆಯಲಿದೆ. ಜೊತೆಗೆ ಡಿಸಿಎಂ ನೇಮಕ ಕುರಿತು ಚರ್ಚೆಯಾಗಲಿದೆ. ಇದರೊಂದಿಗೆ ರಾಜ್ಯದ ಇನ್ನಷ್ಟು ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಬೆಳವಣಿಗೆಗಳ (Karnataka Live News) ಬಗ್ಗೆ ತಿಳಿಯಲು ಇಲ್ಲಿ ಗಮನಿಸಿ.
Assault Case : ʻಟಿಕೆಟ್ ಕೊಡಿ ಅಜ್ಜಿʼ ಎಂದವಳ ಕೆನ್ನೆಗೆ ಭಾರಿಸಿದ ಲೇಡಿ ಕಂಡಕ್ಟರ್
ಟಿಕೆಟ್ ಕೊಡಿ ಅಜ್ಜಿ ಎಂದು ಕೇಳಿದ್ದಕ್ಕೆ ಸಿಟ್ಟಿಗೆದ್ದ ಸಾರಿಗೆ ಸಂಸ್ಥೆ ಬಸ್ ನಿರ್ವಾಹಕಿ (Lady Conductor) ವಿದ್ಯಾರ್ಥಿನಿಗೆ ಕಪಾಳಮೋಕ್ಷ (Assault case) ಮಾಡಿದ್ದಾರೆ. ಈ ಘಟನೆ ಮಂಡ್ಯ– ಭಾರತೀನಗರ ಬಸ್‌ನಲ್ಲಿ ನಡೆದಿದೆ.
Assault Case : ʻಟಿಕೆಟ್ ಕೊಡಿ ಅಜ್ಜಿʼ ಎಂದವಳ ಕೆನ್ನೆಗೆ ಬಾರಿಸಿದ ಲೇಡಿ ಕಂಡಕ್ಟರ್
Road Accident : ಬೆಂಗಳೂರಲ್ಲಿ ನಿರ್ಲಕ್ಷ್ಯ ಚಾಲನೆಗೆ ಬೀದಿ ಹೆಣವಾದ ಬೈಕ್ ಸವಾರ
ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ನಿರ್ಲಕ್ಷ್ಯ ಚಾಲನೆಗೆ ಸವಾರರು ತಮ್ಮ ಪ್ರಾಣವನ್ನು (Road Accident) ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರಲ್ಲಿ ಸವಾರನೊಬ್ಬ ನಿರ್ಲಕ್ಷ್ಯದಿಂದ ದ್ವಿಚಕ್ರ ವಾಹನ ಚಲಾಯಿಸಿ ಮೃತಪಟ್ಟಿದ್ದಾರೆ. ಕೊಮ್ಮಘಟ್ಟ ಸರ್ಕಲ್‌ನಿಂದ ಕೊಮ್ಮಘಟ್ಟ ಮಾರ್ಗವಾಗಿ ಸಾಗುವಾಗ ಈ ಅಪಘಾತ ನಡೆದಿದೆ.
Road Accident : ಬೆಂಗಳೂರಲ್ಲಿ ನಿರ್ಲಕ್ಷ್ಯ ಚಾಲನೆಗೆ ಬೀದಿ ಹೆಣವಾದ ಬೈಕ್ ಸವಾರ
Kidnapping Case : ಬಸ್‌ನಲ್ಲಿ ಅಪರಿಚಿತರ ಕೈಗೆ ಕೊಟ್ಟ ಮಗು ಮಿಸ್ಸಿಂಗ್; ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಪೊಲೀಸರು
ಮಂಡ್ಯದಲ್ಲಿ ಮಗು ಮಿಸ್ಸಿಂಗ್ ಕೇಸ್‌ಗೆ (Missing Case) ಪೊಲೀಸರ ತನಿಖೆಯಲ್ಲಿ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯ ಹೈಡ್ರಾಮಾಕ್ಕೆ ಪೊಲೀಸರೇ ದಂಗಾಗಿದ್ದರು. ಆಕೆ ಮಧ್ಯ ವಯಸ್ಸಿನ ಮಹಿಳೆ, ಈಗಾಗಲೇ ಮಕ್ಕಳು, ಮೊಮ್ಮಕ್ಕಳನ್ನು ಹೊಂದಿದ್ದಾಳೆ. ನಿನ್ನೆ ಬುಧವಾರ ಚೆನ್ನಪಟ್ಟಣದಿಂದ ಮಳವಳ್ಳಿಗೆ ಹೋಗುತ್ತಿದ್ದಳು. ಮಳವಳ್ಳಿ ಪಟ್ಟಣದಲ್ಲಿ ತನ್ನ 7 ತಿಂಗಳ ಗಂಡು ಮಗುವೊಂದನ್ನು ಅಪರಿಚಿತ ಮಹಿಳೆಯೊಬ್ಬಳು ಎತ್ತಿಕೊಂಡು (Kidnapping Case) ಹೋಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಆಕೆ ನೀಡಿದ ದೂರಿನ್ವಯ ಮಗು ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಮಳವಳ್ಳಿ ಠಾಣೆ ಪೊಲೀಸರು (Malavalli Police) ತನಿಖೆಗೆ ಇಳಿಯುವ ಮೊದಲೇ ಇಡೀ ಪ್ರಕರಣ ಬೇರೊಂದು ಟ್ವಿಸ್ಟ್ ಪಡೆದುಕೊಂಡಿತ್ತು.
Kidnapping Case : ಬಸ್‌ನಲ್ಲಿ ಅಪರಿಚಿತರ ಕೈಗೆ ಕೊಟ್ಟ ಮಗು ಮಿಸ್ಸಿಂಗ್; ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಪೊಲೀಸರು
ಎಐಸಿಸಿ ನಾಯಕರ ಸಭೆಗೆ ಸಚಿವರ ದೌಡು
ಬೆಂಗಳೂರು: ದಿಲ್ಲಿಯಲ್ಲಿ ರಾಜ್ಯ ಸಚಿವರ ಮೌಲ್ಯಮಾಪನಕ್ಕೆ ಸಭೆಯನ್ನು ಕರೆಯಲಾಗಿದ್ದು, ಎಐಸಿಸಿ ಸಭೆಯಲ್ಲಿ ರಾಜ್ಯದ 28 ಸಚಿವರು ಭಾಗಿಯಾಗುತ್ತಿದ್ದಾರೆ. ಸಭೆಯ ಬಳಿಕ ಹೈಕಮಾಂಡ್ ನಾಯಕರ ಭೇಟಿ ಮಾಡಿ ಡಿಸಿಎಂ ಹುದ್ದೆ ವಿಚಾರವಾಗಿಯೂ ಸಚಿವರು ಅಲವತ್ತುಕೊಳ್ಳುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ. ಲೋಕಸಭೆ ಚುನಾವಣೆಯಲ್ಲಿ ಸಚಿವರು ಸ್ಪರ್ಧೆ ಮಾಡುವ ಹಾಗೂ ಡಿಸಿಎಂ ಹುದ್ದೆ ಸೃಷ್ಟಿ ವಿಚಾರಕ್ಕೆ ಇಂದಿನ ಸಭೆಯಲ್ಲಿ ಸ್ಪಷ್ಟತೆ ಸಿಗಲಿದೆ.