Site icon Vistara News

Karnataka live news: ಲೋಡ್‌ ಶೆಡ್ಡಿಂಗ್‌ ಒಪ್ಪಿಕೊಂಡ ಡಿಕೆಶಿ, ಚಲುವರಾಯಸ್ವಾಮಿ; ಪ್ರತಿಭಟನೆಗೆ ಮುಂದಾದ ಬಿಜೆಪಿ

karnataka live news

ಬೆಂಗಳೂರು: ರಾಜ್ಯದ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ವಲಯದಲ್ಲಿ ಇಂದು ನಡೆದ, ನಡೆಯಲಿರುವ ಮಹತ್ವದ ಸುದ್ದಿ ಬೆಳವಣಿಗೆಗಳು, ಇವೆಂಟ್‌ಗಳು (Karnataka live news) ಇತ್ಯಾದಿಗಳನ್ನು ಗಮನಿಸಲು ಇಲ್ಲಿಗೆ ಭೇಟಿ ಕೊಡಿ.

Deepa S

ಬೆನ್ನಟ್ಟಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿದ ವ್ಯಕ್ತಿ ಸಾವು!

ರಾಮನಗರ ಜಿಲ್ಲೆಯಾದ್ಯಂತ ಜೂಜುಕೋರರು ಹೆಚ್ಚಾದ ಹಿನ್ನೆಲೆ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಕಳೆದ ಮೂರು ದಿನಗಳ ಹಿಂದೆ ಜೂಜು ಅಡ್ಡೆ ಮೇಲೆ ದಾಳಿ (Gambling Case) ನಡೆಸಿದಾಗ ವ್ಯಕ್ತಿಯೊಬ್ಬ ತಪ್ಪಿಸಿಕೊಳ್ಳಲು ನದಿಗೆ ಹಾರಿದ್ದ. ನದಿಯಲ್ಲಿ ಈಜುಕೊಂಡು ಹೋಗಿ ತಪ್ಪಿಸಿಕೊಂಡಿದ್ದಾನೆ ಎಂದು ಭಾವಿಸಿ ಪೊಲೀಸರು ವಾಪಸ್ ಬಂದಿದ್ದರು.

https://vistaranews.com/karnataka/ramanagar/gambling-case-man-dies-after-jumping-into-river-to-escape-cops-chasing-him/478695.html

Deepa S

ಬೆಂಗಳೂರಲ್ಲಿ ಚಿನ್ನದ ಅಂಗಡಿಗೆ ನುಗ್ಗಿ ಗುಂಡು ಹಾರಿಸಿ ದರೋಡೆ!

ಜನ ಓಡಾಡುವ ಸಮಯದಲ್ಲೇ ಚಿನ್ನದ ಅಂಗಡಿಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ ದರೋಡೆ ಮಾಡಿರುವ (Robbery Case) ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿನ್ನದಂಗಡಿ ಮಾಲೀಕ ಮನೋಜ್‌ ಕಾಲಿಗೆ ಗುಂಡೇಟು ತಗುಲಿದೆ.

https://vistaranews.com/karnataka/robbery-case-gold-shop-burgled-in-bengaluru-and-robbed-at-gunpoint/478661.html

Deepa S

ಈಜಲು ಹೋಗಿ ಕೆರೆಯಲ್ಲಿ ಮುಳುಗಿ ಬಾಲಕ ಸಾವು

ಕನಕಪುರ ತಾಲೂಕಿನ ಹಲಸೂರು ಗ್ರಾಮದ ಚೆನ್ನೇಗೌಡನ ಕೆರೆಯಲ್ಲಿ ಈಜಲು ಹೋಗಿ ಬಾಲಕ ಮೃತಪಟ್ಟಿರುವ (Drowned in River) ಘಟನೆ ನಡೆದಿದೆ. ದರ್ಶನ್ (12) ಮೃತ ದುರ್ದೈವಿ.

https://vistaranews.com/karnataka/ramanagar/drowned-in-river-boy-drowns-in-lake-while-swimming/478631.html

Deepa S

ನಿನ್‌ ಹತ್ರ ಸಾಲ ಮಾಡಲ್ಲ ಎಂದವಳಿಗೆ ಚಾಕು ಹಾಕಿ, ವಿಷ ಕುಡಿದ!

ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ವ್ಯಕ್ತಿಯೊಬ್ಬ ಮಹಿಳೆಗೆ ಚಾಕು ಇರಿದು (Assault Case) ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ (Self harming) ಯತ್ನಿಸಿರುವ ಘಟನೆ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Belgavi News : ನಿನ್‌ ಹತ್ರ ಸಾಲ ಮಾಡಲ್ಲ ಎಂದವಳಿಗೆ ಚಾಕು ಹಾಕಿ, ವಿಷ ಕುಡಿದ!
Deepa S

ಬೆಂಗಳೂರು ಸೇರಿದಂತೆ 4 ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

ನೈರುತ್ಯ ಮುಂಗಾರು ಕರ್ನಾಟಕದ ಕೆಲವು ಭಾಗಗಳಲ್ಲಿ ಅಂತ್ಯವಾಗಿದ್ದು, ಹಿಂಗಾರು ಪ್ರವೇಶವಾಗಿದೆ. ಮುಂಗಾರು ಮಳೆ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿದ್ದರೆ, ಉತ್ತರ ಒಳನಾಡಿನಲ್ಲಿ (Karnataka Weather) ದುರ್ಬಲವಾಗಿತ್ತು. ಮುಂದಿನ 24 ಗಂಟೆಯಲ್ಲಿ ಕರಾವಳಿ, ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗುವ (Rain News) ಸಾಧ್ಯತೆ ಇದೆ.

https://vistaranews.com/weather/karnataka-weather-heavy-rains-likely-in-4-districts-including-bengaluru/478511.html

Exit mobile version