Site icon Vistara News

Karnataka live news: ರಾಜ್ಯಕ್ಕೆ ಮತ್ತೆ ಕಾವೇರಿ ಹೊಡೆತ; ಇನ್ನೂ 15 ದಿನಗಳ ಕಾಲ 5000 ಕ್ಯೂಸೆಕ್‌ ನೀರು ಬಿಡಲು CWRC ಆದೇಶ

Cauvery Water

ಬೆಂಗಳೂರು: ರಾಜ್ಯಕ್ಕೆ ಮತ್ತೆ ಕಾವೇರಿ ಬರೆ ಬಿದ್ದಿದೆ. ಮಂಗಳವಾರ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆಯಲ್ಲಿ ಇನ್ನೂ 15 ದಿನಗಳ ಕಾಲ ಪ್ರತಿ ದಿನ 5000 ಕ್ಯೂಸೆಕ್‌ ನೀರು ಬಿಡುವಂತೆ ರಾಜ್ಯಕ್ಕೆ ಆದೇಶ ನೀಡಲಾಗಿದೆ. ಈಗಾಗಲೇ ಕಳೆದ 15 ದಿನಗಳಿಂದ ಕರ್ನಾಟಕ ತಮಿಳುನಾಡಿಗೆ ನೀರು ಬಿಡುತ್ತಲೇ ಇದೆ. ಮಳೆ ಇಲ್ಲದೆ ನೀರಿಲ್ಲದೆ ಕೆ.ಆರ್‌.ಎಸ್‌ ಮಟ್ಟ ಕಡಿಮೆಯಾಗುತ್ತಿದ್ದರೂ ಲೆಕ್ಕಿಸದೆ ಕೋರ್ಟ್‌ ಆದೇಶವೆಂಬ ನೆಲೆಯಲ್ಲಿ ನೀರು ಬಿಟ್ಟಿರುವ ರಾಜ್ಯಕ್ಕೆ ಈಗ ಮತ್ತೆ ಗುದ್ದು ನೀಡಲಾಗಿದೆ. ಇದರೊಂದಿಗೆ ರಾಜ್ಯದ ದಿನದಿನದ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka live news) ಇಲ್ಲಿ ಗಮನಿಸಿ.

Deepa S

ವಿಷ ಸೇವಿಸಿದ ಪ್ರೇಮಿಗಳು; ಪ್ರಿಯಕರ ಸಾವು, ಅಪ್ರಾಪ್ತೆ ಚಿಂತಾಜನಕ

ಪ್ರೇಮಿಗಳಿಬ್ಬರು ವಿಷ ಸೇವಿಸಿ (Love Case) ಆತ್ಮಹತ್ಯೆಗೆ (Self Harming) ಯತ್ನಿಸಿರುವ ಘಟನೆ ಹನೂರು ತಾಲೂಕಿನ ಹೊಗೆನಕಲ್ ಫಾಲ್ಸ್‌ (Hogenakkal Water Falls) ಬಳಿ ನಡೆದಿದೆ. ಘಟನೆಯಲ್ಲಿ ಕನಕಪುರ ಮೂಲದ ಉಮೇಶ್ (24) ಮೃತಪಟ್ಟಿದ್ದರೆ, ರಕ್ಷಿತಾ (16) ಸ್ಥಿತಿ ಚಿಂತಾಜನಕವಾಗಿದೆ.

Love Case : ವಿಷ ಸೇವಿಸಿದ ಪ್ರೇಮಿಗಳು; ಪ್ರಿಯಕರ ಸಾವು, ಅಪ್ರಾಪ್ತೆ ಚಿಂತಾಜನಕ
Deepa S

ತಮಿಳುನಾಡು ರೌಡಿಯನ್ನು ಮುಗಿಸಲು ಬಂದವರು ಬೆಂಗಳೂರು ಪೊಲೀಸರಿಗೆ ಲಾಕ್‌

ಬೆಂಗಳೂರಿನ ಬಾಣಸವಾಡಿಯಲ್ಲಿ ಇತ್ತೀಚೆಗೆ ತಮಿಳುನಾಡಿನ ನಟೋರಿಯಸ್‌ ರೌಡಿ (Rowdy sheeter) ಮೇಲೆ ದಾಳಿ ನಡೆದಿತ್ತು. ಇದೀಗ ಪ್ರಕರಣ ಭೇದಿಸಿರುವ ಬಾಣಸವಾಡಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ನಟೋರಿಯಸ್‌ ರೌಡಿಯಾಗಿರುವ ಗುರುಸ್ವಾಮಿ ಮೇಲೆ ವಿರೋಧಿ ಬಣ ಹತ್ಯೆಗೆ ಸ್ಕೆಚ್‌ ಹಾಕಿ ದಾಳಿ ಮಾಡಿತ್ತು. ಆದರೆ ಗುರುಸ್ವಾಮಿ ಪಾರಾಗಿದ್ದ.

Rowdy sheeter : ತಮಿಳುನಾಡು ರೌಡಿಯನ್ನು ಮುಗಿಸಲು ಬಂದವರು ಬೆಂಗಳೂರು ಪೊಲೀಸರಿಗೆ ಲಾಕ್‌!
Deepa S

ಹಾಸನದಲ್ಲಿ ಭೀಕರ ಅಪಘಾತ; ಬೆಂಗಳೂರಿನ ವ್ಯಕ್ತಿ ಸಾವು, 6 ಮಂದಿ ಗಂಭೀರ

ಹಾಸನದಲ್ಲಿ ನಡೆದ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಮೃತಪಟ್ಟಿದ್ದರೆ, ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಕ್ರಾಸ್‌ ಬಳಿಯ ರಾ.ಹೆ 75ರ ಫ್ಲೈಒವರ್ ಬಳಿ ಕ್ಯಾಂಟರ್ ವಾಹನ ಹಾಗೂ ಇನ್ನೋವಾ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ (Road Accident) ಸ್ಥಳದಲ್ಲೇ ಒಬ್ಬ ಜೀವ ಬಿಟ್ಟಿದ್ದರೆ, ಆರು ಮಂದಿ ಗಾಯಗೊಂಡಿದ್ದಾರೆ.

Road Accident : ಹಾಸನದಲ್ಲಿ ಭೀಕರ ಅಪಘಾತ; ಬೆಂಗಳೂರಿನ ವ್ಯಕ್ತಿ ಸಾವು, 6 ಮಂದಿ ಗಂಭೀರ
Deepa S

ಗ್ಯಾಸ್‌ ತುಂಬಿಸುವಾಗ ಅಗ್ನಿ ಅವಘಡ; ಧಗೆ ಧಗೆನೆ ಹೊತ್ತಿ ಉರಿದ ಒಮಿನಿ ಕಾರು

ನಗರದ ಫಿಲ್ಟರ್ಸ್ ನಗರದಲ್ಲಿ ಒಮಿನಿ ಕಾರಲ್ಲಿದ್ದ ಸಿಲಿಂಡರ್ ಏಕಾಏಕಿ (Car blast) ಸ್ಫೋಟಗೊಂಡಿದೆ. ಸಿಲಿಂಡರ್ ಸ್ಫೋಟದಿಂದ ಒಮ್ಮೆಲೆ ಒಮಿನಿ ಕಾರು ಹೊತ್ತಿ ಉರಿದಿದೆ. ಒಮಿನಿ ಕಾರಿಗೆ ಗ್ಯಾಸ್ ತುಂಬಿಸುವ ವೇಳೆ ಈ ಅವಘಡ ನಡೆದಿದೆ. ಅಗ್ನಿ ಅವಘಡದಲ್ಲಿ ಕಾರು ಹಾಗೂ ಪಕ್ಕದಲ್ಲಿದ್ದ ಟಿವಿಎಸ್ ಎಕ್ಸೆಲ್, ಬೈಕ್ ಎಲ್ಲವೂ ಸುಟ್ಟು ಕರಕಲಾಗಿದೆ.

Car blast : ಗ್ಯಾಸ್‌ ತುಂಬಿಸುವಾಗ ಅಗ್ನಿ ಅವಘಡ; ಧಗೆ ಧಗನೆ ಹೊತ್ತಿ ಉರಿದ ಒಮಿನಿ ಕಾರು
Deepa S

ಪೈಪ್ ವಾಲ್ವ್ ದುರಸ್ತಿ; ಅರ್ಧ ಬೆಂಗಳೂರಿಗೆ ನಾಳೆ ಕಾವೇರಿ ನೀರಿಲ್ಲ

ಜಲಮಂಡಳಿಯು (BWSSB) ಚಂದ್ರಾ ಬಡಾವಣೆಯ ಜಲಗಾರಕ್ಕೆ ನೀರು ಪೂರೈಕೆಯ (Water supply) ಮಾರ್ಗಗಳಲ್ಲಿರುವ ಪೈಪ್ ವಾಲ್ವ್ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾವೇರಿ 4ನೇ ಹಂತದ 1ನೇ ಫೇಸ್‌ನ ಮೂರು ಪಂಪ್‌ಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ ಅರ್ಧ ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಲ್ಲಿ ಸೆ. 13ರಂದು ವ್ಯತ್ಯಯವಾಗಲಿದೆ.

Water supply : ಪೈಪ್ ವಾಲ್ವ್ ದುರಸ್ತಿ; ಅರ್ಧ ಬೆಂಗಳೂರಿಗೆ ನಾಳೆ ಕಾವೇರಿ ನೀರಿಲ್ಲ
Exit mobile version